ಬಾಗಿಲು ಮುಚ್ಚುತ್ತಿವೆ ಖಾಸಗಿ ವಿಮಾನಯಾನ ಕಂಪನಿಗಳು: ಈಗ Gofirst ಕಂಪೆನಿ ಸರದಿ !

New Delhi/Mumbai : ಭಾರತದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಖಾಸಗಿ ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಖಾಸಗಿ ವಿಮಾನಯಾನ ಕಂಪೆನಿಗಳು (Private airlines are closing) ನಷ್ಟ ಅನುಭವಿಸಿ ಬಾಗಿಲು ಮುಚ್ಚಲಾರಂಭಿಸಿವೆ.

ಪ್ರಸ್ತುತ, 27 ಕಂಪನಿಗಳು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ವಿಲೀನಗೊಂಡಿವೆ ಮತ್ತು ಕೆಲವೊಂದು ವಿಮಾನಯಾನ ಸಂಸ್ಥೆಗಳು ಸಂಪೂರ್ಣವಾಗಿ (Private airlines are closing) ಕಾರ್ಯಾಚರಣೆಯನ್ನು ನಿಲ್ಲಿಸಿವೆ.

ಇದೀಗ ಗೋ ಫಸ್ಟ್ ವಿಮಾನಯಾನ ಕಂಪನಿಯು (Go First Airlines) ‘ಕೂಡ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು,

ಇನ್ನು ಮುಂದೆ ನಮ್ಮಿಂದ ಹಣಕಾಸಿನ ಹೊಣೆ ನಿಭಾಯಿಸಲು ಆಗುತ್ತಿಲ್ಲ’ ಎಂದು ಕಾನೂನು ನ್ಯಾಯಮಂಡಳಿಯ ಅಂದರೆ ಎನ್‌ಸಿಎಲ್‌ ಯ ಬಾಗಿಲು ತಟ್ಟಿದೆ.

ಈ ಗೋ ಫಸ್ಟ್ ರಾಷ್ಟ್ರೀಯ ವಿಮಾನಯನ ಕಂಪನಿಯು ವಾಡಿಯಾ ಗ್ರೂಪ್ ನ ಸಂಸ್ಥೆಯಾಗಿದೆ.

ಇದನ್ನೂ ಓದಿ : https://vijayatimes.com/karnataka-sslc-result-2023/

ಬಾಗಿಲು ಮುಚ್ಚಿದ ಪ್ರಮುಖ ಗಮನಾರ್ಹ ಕಂಪನಿಗಳು :

  1. 2012 ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್ (Kingfisher Airlines Limited)
  2. 2017 ರಲ್ಲಿ ಏರ್ ಕಾರ್ನಿವಲ್ ಪ್ರೈ.ಲಿ., ಏರ್ ಪೆಗಾಸಸ್ ಪ್ರೈ.ಲಿ, ರೆಲಿಗೇ‌ ಏವಿಯೇಷನ್ ಲಿ., ಏರ್ ಕೊಸ್ಟಾ, ಕ್ವಿಕ್‌ಜೆಟ್‌ ಕಾರ್ಗೊ ಪ್ರೈ.ಲಿ.
  3. 2019: ಜೆಟ್‌ ಏರ್‌ವೇಸ್‌, ಮತ್ತು ಜೆಟ್‌ ಲೈಟ್‌
  4. 2020: ಜೆಕ್ಸಸ್ ಏರ್ ಸರ್ವಿಸಸ್ ಪ್ರೈ.ಲಿ (Zexus Air Services Private Limited)., ಡೆಕ್ಕನ್ ಚಾರ್ಟಡ್್ರ ಪ್ರೈ.ಲಿ., ಏರ್ ಒಡಿಶಾ ಏವಿಯೇಷನ್ ಪ್ರೈ.ಲಿ.

5..2022: ಹೆರಿಟೇಜ್ ಏವಿಯೇಷನ್ ಪ್ರೈ.ಲಿ.

ಇದನ್ನೂ ಓದಿ : https://vijayatimes.com/post-of-assistant-master/

ದೇಶದಲ್ಲಿ ಬಾಗಿಲು ಮುಚ್ಚಿದ ಮೊದಲ ಖಾಸಗಿ ವಿಮಾನಯಾನ ಕಂಪನಿ ‘ಈಸ್ಟ್‌ ವೆಸ್ಟ್ ಟ್ರಾವೆಲ್ಸ್ ಆ್ಯಂಡ್ ಟ್ರೇಡ್ ಲಿಂಕ್ ಲಿಮಿಟೆಡ್ (East West Travel & Trade Links Ltd) ಕಾರ್ಯಾಚರಣೆ ಆರಂಭಿಸಿದ ಎರಡು ವರ್ಷಗಳಲ್ಲಿ ಸ್ಥಗಿತಗೊಂಡಿತು.

ಅದೇ ವರ್ಷದಲ್ಲಿ (1996) ‘ಮೋದಿ ಲುಫ್ ಲಿಮಿಟೆಡ್ ಕೂಡ ಬಾಗಿಲುಮುಚ್ಚಿತು. ದೇಶದಲ್ಲಿ ಖಾಸಗಿ ವಿಮಾನಯಾನ ಕಂಪನಿಗಳು ಸೇವೆ ಆರಂಭಿಸಿದ್ದು 1994ರಲ್ಲಿ.

ಪ್ರಾರಂಭವಾದ ಎರಡು ವರ್ಷಗಳಲ್ಲಿಯೇ , ‘ಈಸ್ಟ್ ವೆಸ್ಟ್ ಟ್ರಾವೆಲ್ಸ್ ಮತ್ತು ಟ್ರೇಡ್ ಲಿಂಕ್ ಲಿಮಿಟೆಡ್’ ಖಾಸಗಿ ವಿಮಾನಯಾನ ಕಂಪನಿಯು ಆರ್ಥಿಕ

ಸಂಕಷ್ಟ ಎದುರಿಸಿ ಕಾರ್ಯಾಚರಣೆಯನ್ನು ಸ್ಥಗಿತಗೊಲಿಸಿತ್ತು. ಮುಂದಿನ ವರ್ಷ, 1996 ರಲ್ಲಿ, ‘ಮೋದಿ ಲುಫ್ ಲಿಮಿಟೆಡ್’ ಖಾಸಗಿ ವಿಮಾನ ಯಾನ ಕಂಪನಿ ಸಹ ಮುಚ್ಚಲ್ಪಟ್ಟಿತು.

ದೇಶದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮೊದಲು ಬಾಗಿಲು ಮುಚ್ಚಿದ ಖಾಸಗಿ ವಿಮಾನಯಾನ ಕಂಪನಿ ಎಂದರೆ ಅದು ಈಸ್ಟ್ ವೆಸ್ಟ್ ಟ್ರಾವೆಲ್ಸ್ ಮತ್ತು ಟ್ರೇಡ್ ಲಿಂಕ್ ಲಿಮಿಟೆಡ್’.

2008 ರಲ್ಲಿ, ಡೆಕ್ಕನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ (Deccan Aviation Private Limited) ವಿಮಾನ ಯಾನ ಸಂಸ್ಥೆಯು ಕಿಂಗ್‌ಫಿಶರ್ ಏರ್‌ಲೈನ್ಸ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು.

Exit mobile version