ದೇಶದ ಒಳಿತಿಗಾಗಿ ನನ್ನ ತಾಯಿ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

Bengaluru: ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ (Congress) ಪಕ್ಷವು ನಿಮ್ಮ ಮಂಗಳಸೂತ್ರ ಮತ್ತು ಚಿನ್ನವನ್ನು ಕಿತ್ತುಕೊಳ್ಳಲು ಹೊರಟಿದೆ ಎಂದು ಎಲ್ಲೆಡೆ ಸುದ್ದಿಯಾಗುತ್ತಿದೆ.ಈಗಾಗಲೇ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. 55 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿತ್ತು. ಹೀಗಿರುವಾಗ ನಿಮ್ಮ ಚಿನ್ನ, ಮಂಗಳಸೂತ್ರನ್ನು (Mangalasutra) ಯಾರಾದರೂ ಕಿತ್ತುಕೊಂಡಿದ್ದಾರೆಯೇ? ನಿಮ್ಮ ಬಳಿ ಅದೆಷ್ಟು ಚಿನ್ನದ ಆಭರಣ ಇದೆ ಎಂಬುದನ್ನು ಕೇಳಿದೆಯೇ? ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು (Indira Gandhi) ತಮ್ಮ ಚಿನ್ನವನ್ನು ದೇಶಕ್ಕೆ ನೀಡಿದ್ದರು.

ನನ್ನ ತಾಯಿಯ ಮಂಗಳಸೂತ್ರವನ್ನು ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ (BJP) ಪಕ್ಷದ ಜನರಿಗೆ ಮಹಿಳೆಯರ ಹೋರಾಟವನ್ನು ಅರ್ಥಮಾಡಿಕೊಳ್ಳುವ ಶಕ್ತಿಯಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮಹಿಳೆಯರ ಅಸ್ಥಿತ್ವಕ್ಕೆ ಬೆಲೆ ನೀಡಿದೆ.ಮಹಿಳೆಯರ ಹೃದಯದಲ್ಲಿ ಇರುವ ಸೇವಾ ಮನೋಭಾವನೆ ನಮ್ಮ ದೇಶದ ಎಲ್ಲ ಸಂಪ್ರದಾಯಗಳಿಗೂ ಆಧಾರವಾಗಿದೆ . ಕುಟುಂಬದಲ್ಲಿ ಎಲ್ಲರೂ ಮಲಗುವವರೆಗೂ ಮಹಿಳೆಯರು ಮಲಗುವುದಿಲ್ಲ ಮತ್ತು ಕುಟುಂಬದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಮಹಿಳೆಯರು ತಮ್ಮ ಆಭರಣಗಳನ್ನು ಅಡಮಾನ ಇಡುತ್ತಾರೆ.

ಮಹಿಳೆಯರು ಇತರರನ್ನು ಖಾಲಿ ಹೊಟ್ಟೆಯಲ್ಲಿ ಮಲಗಲು ಬಿಡುವುದಕ್ಕಿಂತ ಹೆಚ್ಚಾಗಿ ತಾವೇ ಹಸಿವಿನಿಂದ ಮಲಗುತ್ತಾರೆ. ಒಬ್ಬ ರೈತ ಸಾಲಕ್ಕೆ ಸಿಲುಕಿದಾಗ, ಅವನ ಹೆಂಡತಿ ತನ್ನ ಮಂಗಳಸೂತ್ರವನ್ನು ಅಡಮಾನವಿಡುತ್ತಾಳೆ. ಕುಟುಂಬದಲ್ಲಿ ಮಗಳು ಮದುವೆಯಾದಾಗ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಮಹಿಳೆಯರು ತಮ್ಮ ಆಭರಣಗಳನ್ನು ಅಡಮಾನ ಇಡುತ್ತಾರೆ ಅಂತಹ ಮಹಿಳೆಯ ಮಂಗಳಸೂತ್ರದ ಕುರಿತು, ಚಿನ್ನದ ಕುರಿತು ಬಾಲಿಶ ಹೇಳಿಕೆ ನೀಡುವುದಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮೋದಿ ವಿರುದ್ದ ಕಿಡಿ ಕಾರಿದ್ದಾರೆ.

ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ (Modi), ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಆಸ್ತಿಯನ್ನು “ನುಸುಳುಕೋರರಿಗೆ” ಮತ್ತು “ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಜನರಿಗೆ ನೀಡುವುದು ಕಾಂಗ್ರೆಸ್​ ಯೋಜನೆಯಾಗಿದೆ. “ಇದು ನಗರ ನಕ್ಸಲ್ ಚಿಂತನೆಯಾಗಿದೆ. ನನ್ನ ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ಮಂಗಳಸೂತ್ರವನ್ನೂ ಬಿಡುವುದಿಲ್ಲ, ಆ ಮಟ್ಟಕ್ಕೆ ಅವರು ಹೋಗುತ್ತಾರೆ” ಎಂದಿದ್ದರು.

ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ (Bengaluru) ಬಿಜಿಪಿಯ ನಾಯಕರ ಮತ್ತವರ ಹೇಳಿಕೆಗಳ ಕುರಿತು” ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಸಂಪೂರ್ಣವಾಗಿ ಹತಾಶರಾಗಿದ್ದಾರೆ ಮತ್ತು ಅವರು ಈ ಚುನಾವಣೆಯಲ್ಲಿ ಸೋಲುತ್ತಾರೆ ಎಂದರ್ಥ ಎಂದಿದ್ದಾರೆ. 

Exit mobile version