ಪ್ರಧಾನಿ ಮೋದಿಗೆ, ಸಿಎಂ ಯೋಗಿಗೆ ರಕ್ತದಲ್ಲಿ ಪತ್ರ ಬರೆದ 108 ಪ್ರತಿಭಟನಕಾರರು!

Uttar pradesh : ವೃಂದಾವನದ(Vrindavan) ಬಂಕೆ ಬಿಹಾರಿ ದೇವಸ್ಥಾನದ ಸುತ್ತಲೂ ಉದ್ದೇಶಿತ ಕಾರಿಡಾರ್ ನಿರ್ಮಾಣದ ವಿರುದ್ಧ ಬುಗಿಲೆದ್ದಿರುವ (protesters wrote letters in blood) ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗಿದ್ದು,

ಈ ಯೋಜನೆಯನ್ನು ಖಂಡಿಸಿದ ಪ್ರತಿಭಟನಾಕಾರರು, ಕೂಡಲೇ ಕೈಬಿಡುವಂತೆ ಪ್ರಧಾನಿ ಮತ್ತು ಸಿಎಂ ಯೋಗಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಿದ್ದಾರೆ!

ಈ ಪ್ರತಿಭಟನೆ ಬುಗಿಲೇಳುತ್ತಿದ್ದಂತೆ ಅರ್ಚಕರು, ವ್ಯಾಪಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಯೋಜನೆಯ (protesters wrote letters in blood) ಉದ್ದೇಶಿತ ವಿನ್ಯಾಸಗಳ ಪ್ರತಿಗಳನ್ನು ಸುಟ್ಟುಹಾಕುವ ಮೂಲಕ ಭಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಈ ಸಂಗತಿ ತಿಳಿದು ಮನನೊಂದ ಅನೇಕ ಪ್ರತಿಭಟನಾಕಾರರು ತಮ್ಮ ರಕ್ತವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adithyanath) ಅವರಿಗೆ 108 ಪತ್ರಗಳನ್ನು ಕಳುಹಿಸಿದ್ದಾರೆ!

ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು ಮತ್ತು ವೃಂದಾವನದ ಪರಂಪರೆಯನ್ನು ಉಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿರುವ ಬಗ್ಗೆ ಪಿಟಿಐ(PTI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರತಿಭಟನಾಕಾರರು ನಡೆಸಿದ ಧರಣಿಯಿಂದಾಗಿ ಬಂಕೆ ಬಿಹಾರಿ ದೇವಸ್ಥಾನದ ಬಳಿಯ ಮಾರುಕಟ್ಟೆಗಳನ್ನು ಸತತ ಮೂರನೇ ದಿನ ಕೂಡ ಮುಚ್ಚುವಂತ ಪರಿಸ್ಥಿತಿ ಎದುರಾಗಿದೆ.

ಇನ್ನು ಈ ಬಗ್ಗೆ ಬಂಕೆ ಬಿಹಾರಿ(Bihari) ವ್ಯಾಪಾರಿ ಸಂಘದ ಅಧ್ಯಕ್ಷ ಅಮಿತ್ ಗೌತಮ್ ಮಾತನಾಡಿದ್ದು,

ವೃಂದಾವನದ ಪರಂಪರೆಯನ್ನು ಉಳಿಸಲು ರಕ್ತದಿಂದ ಬರೆದ 108 ಪತ್ರಗಳನ್ನು ಪ್ರಧಾನಿ ಮತ್ತು ಸಿಎಂ ಯೋಗಿ ಅವರಿಗೆ ನಾವು ಕಳಿಸಿದ್ದೇವೆ.

ಒಂದೆಡೆ ನಾವು ಸುಪ್ರೀಂ ಕೋರ್ಟ್ನಿಂದ(Supreme court) ಪರಿಹಾರವನ್ನು ಕೋರುತ್ತೇವೆ. ಇನ್ನೊಂದೆಡೆ, ಆಂದೋಲನವನ್ನು ತೀವ್ರಗೊಳಿಸುತ್ತೇವೆ ಎಂದು ಅಮಿತ್ ಗೌತಮ್(Amit gautham) ಹೇಳಿದ್ದಾರೆ.

85 ವರ್ಷ ವಯಸ್ಸಿನ ಪ್ರತಿಭಟನಾಕಾರರಾದ ಶಕುಂತಲಾ ದೇವಿ ಗೋಸ್ವಾಮಿ ಅವರು, “ಕಾರಿಡಾರ್ ನಿರ್ಮಾಣವು ಸಾಧ್ಯವಿಲ್ಲ.

ವೃಂದಾವನದ ಪರಂಪರೆಯನ್ನು ನೀವು ಹಾಳುಮಾಡುತ್ತಿದ್ದೀರಿ. ಇದರಿಂದ ನಾವು ನಿರಾಶ್ರಿತರಾಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರಣಾಸಿಯ ಕಾಶಿ(Kashi) ವಿಶ್ವನಾಥ ದೇವಸ್ಥಾನದ ಕಾರಿಡಾರ್ ಯೋಜನೆಯ ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ಕಾರಿಡಾರ್ ವಿರುದ್ಧ ಜನವರಿ 12 ರಂದು ಪ್ರತಿಭಟನೆ ಆರಂಭವಾಗಿದೆ.

ಜನವರಿ 23 ರಂದು ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇದನ್ನೂ ಓದಿ: https://vijayatimes.com/bjp-tweets-to-congress/

ಡಿಸೆಂಬರ್ 20, 2022 ರಂದು, ಬಂಕೆ ಬಿಹಾರಿ ದೇವಸ್ಥಾನಕ್ಕೆ ಸಂಬಂಧಿಸಿದ ರಿಟ್ ಅರ್ಜಿಯಲ್ಲಿ, ಅಂದಾಜು ವೆಚ್ಚದೊಂದಿಗೆ ಕಾರಿಡಾರ್ನ ಅಭಿವೃದ್ಧಿ ಯೋಜನೆಯನ್ನು ಸಲ್ಲಿಸುವಂತೆ ಹೈಕೋರ್ಟ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

ಜನವರಿ 3 ರಂದು ಕಾರಿಡಾರ್ ನಿರ್ಮಾಣಕ್ಕೆ ಸಮೀಕ್ಷೆ ಆರಂಭಿಸಲಾಗಿತ್ತು! ಸದ್ಯ ಈ ಒಂದು ಪ್ರತಿಭಟನೆ ಯಾವ ಹಂತವನ್ನು ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version