‘ದೇಶದ್ರೋಹಿಗಳ’ ಎದುರು ಮಂಡಿಯೂರಿತೇ ರಷ್ಯಾ? ದಂಗೆಯೆದ್ದ ಬಂಡುಕೋರ ವ್ಯಾಗ್ನರ್‌ ಸೇನೆಗೆ ಪುಟಿನ್‌ ಕ್ಷಮೆ

ಮಾಸ್ಕೋ : ರಷ್ಯಾ (Rusia) ದೇಶವು ವಿಶ್ವದ ಅತ್ಯಂತ ಬಲಾಢ್ಯ ದೇಶಗಳಲ್ಲಿ ಒಂದಾಗಿದೆ ಆದರೆ ರಷ್ಯಾ ದೇಶದ ವಿರುದ್ಧ ಬಂಡುಕೋರ ‘ವ್ಯಾಗ್ನರ್‌’ ನ (Putin apologizes Wagner army)

ಖಾಸಗಿ ಸೇನೆ ಸಾರಿದ್ದ ಬಂಡಾಯ ಇದೀಗ ಅಧಿಕೃತವಾಗಿ ಶಮನವಾಗಿದೆ. ಆದರೆ ಯಾವುದೇ ದಮನಕಾರಿ ಕ್ರಮದ ಮೂಲಕ ಈ ಬಂಡಾಯವು ಶಮನವಾಗದೆ, ‘ಕ್ಷಮಾದಾನ’ದಲ್ಲಿ ಅಂತ್ಯವಾಗಿದೆ.

ರಷ್ಯಾ ಅಧ್ಯಕ್ಷ ಪುಟಿನ್‌(Vladimir Putin) ಸುರಕ್ಷಿತ ಸ್ಥಳಾಂತರದ ಅವಕಾಶವನ್ನು ಬಂಡುಕೋರ ಪಡೆಯ ನಾಯಕನಾದ ಯೆವ್‌ಗೆನಿ ಪ್ರಿಗೋಝಿನ್‌ಗೆ (Yevgeny Prigozhin) ರಷ್ಯಾ ತೊರೆದು ಬೆಲರೂಸ್‌ಗೆ

ಸ್ಥಳಾಂತರಗೊಳ್ಳಲು ಅವಕಾಶ ನೀಡಿದ್ದಾರೆ ಮತ್ತು ರಷ್ಯಾ ಸೇನೆಯಲ್ಲಿ ಸೇರುವ ಅವಕಾಶವನ್ನು ಬಂಡುಕೋರ ವ್ಯಾಗ್ನರ್‌ ಪಡೆಗೆ ಪುಟಿನ್‌ ನೀಡಿದ್ದಾರೆ. ಹೀಗಾಗಿ ಮಾಜಿ ಆಪ್ತ ಯೆವ್‌ಗಿನಿ

ಬಂಡಾಯದಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಥಂಡಾ ಹೊಡೆದಿರುವುದು (Putin apologizes Wagner army) ಸಾಬೀತಾಗಿದೆ.

ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್‌

ರಷ್ಯಾ ಈಗಾಗಲೇ ಉಕ್ರೇನ್‌(Ukrain) ಮೇಲೆ ಯುದ್ಧ ಮಾಡುತ್ತಿರುವುದು ಇಡೀ ಜಗತ್ತಿಗೇ ತಿಳಿದಿದೆ ಆ ಯುದ್ಧವನ್ನು ಗೆಲ್ಲಲು ರಷ್ಯಾ ತಿಣುಕಾಡುತ್ತಿರುವಾಗಲೇ, ಪುಟಿನ್‌ ಪರಮಾಪ್ತನೇ ಬಂಡಾಯ

ಘೋಷಣೆ ಮಾಡಿದ್ದರಿಂದ ಪುಟಿನ್‌ ತೀವ್ರವಾಗಿ ವ್ಯಾಕುಲಗೊಂಡಿದ್ದರು. ಇದು ಅವರ ಎರಡು ದಶಕಗಳ ಆಳ್ವಿಕೆಗೆ ಎದುರಾದ ಬಹುದೊಡ್ಡ ಸವಾಲು ಆಗಿತ್ತು . ರಷ್ಯಾದಲ್ಲಿ ಹೀಗಾಗಿ ಮುಂದೆ ಏನು ಬೇಕಾದರೂ

ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಪುಟಿನ್‌ ಹಾಗೂ ಯೆವ್‌ಗಿನಿ ನಡುವೆ ಬೆಲರೂಸ್‌ (Belarus) ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೋ (Aleksandr Lukashenko)

ಅವರು ಮಧ್ಯಪ್ರವೇಶಿಸಿ ಸಂಧಾನ ಮಾಡಿದ್ದಾರೆ. ಹೀಗಾಗಿ ಸಂಭಾವ್ಯ ಅನಾಹುತ ತಪ್ಪಿದೆ.

ಸಂಧಾನ ಏನು?:

ಪ್ರಿಗೋಝಿನ್‌ ಹಾಗೂ ಆತನ ನೇತೃತ್ವದ ವಾಗ್ನರ್‌ ಪಡೆಯು ರಷ್ಯಾದ ನಗರವೊಂದನ್ನು ವಶಕ್ಕೆ ತೆಗೆದುಕೊಂಡಿದ್ದರು ಮತ್ತು ರಷ್ಯಾ ರಾಜಧಾನಿ ಮಾಸ್ಕೋವನ್ನು(Masko) ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡು

ಪುಟಿನ್‌ ಸರ್ಕಾರದ ಪದಚ್ಯುತಿಗೆ ಹೊರಟಿದ್ದರು ಆದರೆ ಸಂಧಾನದ ಫಲವಾಗಿ ರಷ್ಯಾ ದೇಶವು ವಾಗ್ನರ್‌ ಪಡೆಯ ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳದೇ ಇರಲು ಒಪ್ಪಿಗೆ ನೀಡಿದೆ ಅಷ್ಟೇ ಅಲ್ಲದೆ ರಷ್ಯಾ

ಸೇನೆಗೆ ಸೇರಲು ಬಂಡಾಯದಲ್ಲಿ ಭಾಗಿಯಾಗಿರುವ ವಾಗ್ನರ್‌ ಸೇನೆಯ ಯೋಧರನ್ನು ಅನುಮತಿ ನೀಡಿದೆ. ಮತ್ತೊಂದೆಡೆ, ರಷ್ಯಾ ತೊರೆದು ಬೆಲರೂಸ್‌ಗೆ ಪುಟಿನ್‌ ಪರಮಾಪ್ತ ಪ್ರಿಗೋಝಿನ್‌ ಸ್ಥಳಾಂತರಗೊಳ್ಳಲಿದ್ದಾರೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆಂದೇ ವಿಶೇಷ ಆ್ಯಪ್‌ ಸಿದ್ದ : ಜೂ. 27ರಿಂದ ಅರ್ಜಿ ಸಲ್ಲಿಕೆ ಆರಂಭ

ಈ ಬಗ್ಗೆ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್‌(Dmitry Peskov) ಸುದ್ದಿಗಾರರಿಗೆ(Reporters) ಮಾಹಿತಿ ನೀಡಿಆಂತರಿಕ ಸಂಘರ್ಷ, ರಕ್ತಪಾತ ಹಾಗೂ ಅನೂಹ್ಯ ತಿಕ್ಕಾಟವನ್ನು ತಪ್ಪಿಸುವುದು

ನಮ್ಮ ಪರಮೋಚ್ಚ ಗುರಿಯಾಗಿತ್ತು.ವಾಗ್ನರ್‌ ಪಡೆಯ ಯೋಧರ ವಿರುದ್ಧ ಬೆಲರೂಸ್‌ ಅಧ್ಯಕ್ಷರ ಸಂಧಾನದ ಅನುಸಾರ ಕ್ರಮ ಕೈಗೊಳ್ಳುವುದಿಲ್ಲ.ರಷ್ಯಾ ಪರವಾಗಿ ಆ ಪಡೆಯು ಮುಂಚೂಣಿಯಲ್ಲಿ ನಿಂತು ನಡೆಸಿರುವ

ಹೋರಾಟವನ್ನು ಯಾವತ್ತಿಗೂ ಗೌರವಿಸುತ್ತೇವೆ.ವಾಗ್ನರ್‌ ಪಡೆ ತನ್ನ ನೆಲೆಗಳಿಗೆ ಒಪ್ಪಂದದ ಅನುಸಾರವಾಗಿ ಮರಳಲಿದೆ.ರಷ್ಯಾ ಸೇನೆಯನ್ನು ಸೇರ್ಪಡೆಯಾಗಲು ದಂಗೆಯಲ್ಲಿ

ಭಾಗಿಯಾಗದ ಸೈನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹಠಾತ್‌ ದಂಗೆ:

ವ್ಯಾಗ್ನರ್‌ ಪಡೆಯ ಪ್ರಿಗೋಝಿನ್‌ ಉಕ್ರೇನ್‌ ಸಮರ ಸೇರಿದಂತೆ ರಷ್ಯಾ ದೇಶವು ಈಗಾಗಲೇ ನಡೆಸಿದ ಅನೇಕ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದರು ಆದರೆ ಇದೀಗ

ಸ್ವತಃ ಅವರು ರಷ್ಯಾದ ವಿರುದ್ಧವೇ ದಂಗೆ ಸಾರಿದ್ದರು.ಇದಕ್ಕೆ ಮುಖ್ಯ ಕಾರಣ ರಷ್ಯಾ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರು ಎಂದು ತಿಳಿದು ಬಂದಿದೆ.

ಹೌದು ರಷ್ಯಾ ರಕ್ಷಣಾ ಸಚಿವ (Defense Minister) ಹಾಗೂ (Army Chief) ವ್ಯಾಗ್ನರ್‌ ಪಡೆಯ ಸಾಧನೆಯನ್ನು ಮರೆಮಾಚಿ, ತಮ್ಮನ್ನೇ ದಮನಗೊಳಿಸಲು ಮುಂದಾಗಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಸುಮಾರು 50 ಸಾವಿರ ಯೋಧರು ಹೀಗಾಗಿ ಮಾಸ್ಕೋದತ್ತ ಮುನ್ನುಗ್ಗಲು ಆರಂಭಿಸಿದರು. ರಷ್ಯಾ ಸೇನೆಯ 4 ಹೆಲಿಕಾಪ್ಟರ್‌ಗಳನ್ನು (Helecopter) ಇದಕ್ಕೂ ಮುನ್ನ

ಹೊಡೆದುರುಳಿಸಿ ರಷ್ಯಾ ಯೋಧರ ಜತೆ ವಿವಿಧೆಡೆ ಚಕಮಕಿ ನಡೆಸಿದ್ದರು.

ವ್ಯಾಗ್ನರ್‌ಗಳು ಉಕ್ರೇನ್‌ ಸಮರಕ್ಕೆ ಸಂಬಂಧಿಸಿದಂತೆ ರಷ್ಯಾಕ್ಕೆ ಪ್ರಮುಖ ನೆಲೆಯಾಗಿರುವ ರೋಸ್ತೋವ್‌ (Rostov) ನಗರವನ್ನೇ ವಶಕ್ಕೆ ಪಡೆದಿದ್ದರು. ಮಾಸ್ಕೋದತ್ತ ವ್ಯಾಗ್ನರ್‌ ಪಡೆ ಬರುತ್ತಿದ್ದ ಹಿನ್ನೆಲೆಯಲ್ಲಿ

ಶಾಲೆಗಳಿಗೆ ರಜೆ ಘೋಷಣೆಯನ್ನು ರಾಜಧಾನಿಯಲ್ಲಿ ಮಾಡಲಾಗಿತ್ತು. ಮನೆಯಿಂದ ಹೊರಗೆ ಬರದಂತೆ ಜನರಿಗೆ ಸೂಚಿಸಲಾಗಿತ್ತು. ಬೆಲರೂಸ್‌ ಅಧ್ಯಕ್ಷರ ಸಂಧಾನದ ಬಳಿಕ ತಡರಾತ್ರಿ

ನಡೆದ ನಾಟಕೀಯ ಬೆಳವಣಿಗೆಯಲ್ಲಿ ಪ್ರಿಗೋಝಿನ್‌ ತನ್ನ ಸೈನಿಕರಿಗೆ ವಾಪಸ್‌ ಉಕ್ರೇನ್‌ಗೆ ಮರಳುವಂತೆ ಆದೇಶಿಸಿದ್ದ.

ಯೆವ್‌ಗೆನಿ ಜತೆ ಫೋಟೋ ತೆಗೆಸಿಕೊಂಡು ಜನರ ಹರ್ಷ

ರಷ್ಯಾದಲ್ಲಿ ವಶಪಡಿಸಿಕೊಂಡಿದ್ದ ಸೊರೋಸ್‌ ಪಟ್ಟಣ ಹಾಗೂ ಸೇನಾ ನೆಲೆಯಿಂದ ವ್ಯಾಗ್ನರ್‌ ಪಡೆಯು ನಿರ್ಗಮಿಸಿದೆ. ವ್ಯಾಗ್ನರ್‌ ಪಡೆ ವಾಪಸ್‌ ಹೋಗುವಾಗ ಈ ವೇಳೆ ಜನರು ‘ವ್ಯಾಗ್ನರ್‌ ವ್ಯಾಗ್ನರ್‌’

ಎಂದು ಘೋಷಣೆ ಕೂಗಿ ಹರ್ಷೋದ್ಗಾರಗೈದರು. ವ್ಯಾಗ್ನರ್‌ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಝಿನ್‌ ಜತೆ ಇದೇ ವೇಳೆ ಫೋಟೋ ತೆಗೆಸಿಕೊಂಡರು.

ರಶ್ಮಿತಾ ಅನೀಶ್

Exit mobile version