ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ

Bengaluru: ಬೆಳಗ್ಗೆಯಿಂದ ಪ್ರತಿಭಟನ ನಡೆಸಿದ ಬಳಿಕ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಸೇರಿದ ಹೋರಾಟಗಾರರು ಬೆಂಗಳೂರು ಬಂದ್ (Ramalinga Reddy receives the Appeal)

ಹಿಂದಿನ ಬೇಡಿಕೆಗಳ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಒಪ್ಪಿಸಿದರು. ಮನವಿಗಳನ್ನು ಸ್ವೀಕರಿಸಿದ ಸಚಿವ ರಾಮಲಿಂಗಾರೆಡ್ಡಿ , ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಮೂರು ದಿನದಲ್ಲಿ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಹೋರಾಟಗಾರರು (Ramalinga Reddy receives the Appeal) ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಮೂರು ದಿನಗಳ ಗಡುವು
ರಾಜ್ಯ ಸರ್ಕಾರಕ್ಕೆ ಕಾವೇರಿ ವಿಚಾರವಾಗಿ ಮೂರು ದಿನಗಳ ಗಡುವನ್ನು ಹೋರಾಟಗಾರರು ನೀಡಿದ್ದು, ನಗರದ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಕೆ ಮಾಡಿದ ಹೋರಾಟಗಾರರು.

ರೈತ ಮುಖಂಡರ ಮೇಲೆ ಇರುವ ಕೇಸ್ ಗಳನ್ನ ವಾಪಸ್ ಪಡೆಯಬೇಕು ಹಾಗೂ ತಕ್ಷಣ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಸಿಎಂ (CM) ಬರಬೇಕು ಅಂತ ಒತ್ತಾಯ ಮಾಡಿದ್ವಿ. ನಾಳೆ ನಾಡಿದ್ದು ಹೋರಾಟಗಾರರನ್ನ ಕರೆಸಿ ಮಾತಾಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಮೂರು ದಿನಗಳಲ್ಲಿ ಸರ್ಕಾರ ಸ್ಪಷ್ಟವಾದ ನಿರ್ಧಾರ

ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ನಮ್ಮ ಮನವಿ ಪುರಸ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದರು ಎಂದು ರೈತ

ಮುಖಂಡರಾದ ಕುರುಬೂರು ಶಾಂತಕುಮಾರ್ (Kuruburu Shanthakumar) ಅವರು ಮಾತನಾಡಿದರು.

ನೆಲ ಜಲ‌ ಭಾಷೆ ಗೆ ಅನ್ಯಾಯ ಆದಾಗ ಹೋರಾಟ ಮಾಡ್ತಾ ಬಂದಿದ್ದಾರೆ. ಸರ್ಕಾರ 5 ವಿಚಾರಗಳನ್ನು ಹೇಳಿದೆ. ಮೂರು ದಿನಗಳಲ್ಲಿ ಮುಖಂಡರ ಸಭೆಯನ್ನು ಸಿಎಂ ಕರೆಯುವುದಾಗಿ ಹೇಳಿದ್ದಾರೆ.

ಪೊಲೀಸರು ಹಾಕಿರುವ ಕೇಸ್ ಗಳನ್ನು ವಾಪಸ್ ತೆಗೆದುಕೊಳ್ಳುವ ವಿಚಾರ ಸೂಕ್ತ ಕ್ರಮ ಆಗುತ್ತದೆ ಎಂದು ಪ್ರತಿಭಟನಾಕಾರರನ್ನು‌ ಉದ್ದೇಶಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಮೇಕೆ ದಾಟು (Mekedaatu) ಅಣೆಕಟ್ಟು ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸಂಕಷ್ಟ ಸೂತ್ರಕ್ಕಾಗಿ ಮಳೆ ಇಲ್ಲದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಕಷ್ಟ ಸೂತ್ರ

ರಚನೆ ಆಗಲೇಬೇಕು. ನಿಮ್ಮ ಎಲ್ಲಾ ಮನವಿಯನ್ನ ಮುಖ್ಯ ಮಂತ್ರಿಗೆ ತಿಳಿಸುತ್ತೇವೆ ಎಂದರು. ಚಳುವಳಿಗೆ ಬರುತ್ತಿದ್ದ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ಮಾತನಾಡಿ, ಬೆಂಗಳೂರು

ಪೊಲೀಸ್ ಆಯುಕ್ತ ದಯಾನಂದ್ (Dayanand) ಅವರಿಗೆ ಮಾತಾಡಿ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಭರವಸೆ ಕೊಟ್ಟರು.

ತಮಿಳುನಾಡಿಗೆ (Tamilnadu) ಕಳೆದ ವರ್ಷ ಮಳೆ ಇದ್ದಾಗ 600 ಟಿಎಂಸಿ ನೀರು ಹರಿಸಿದೆ ಆದರೆ ಈ ವರ್ಷ ಮಳೆ ಇಲ್ಲ. ಕೇಂದ್ರ ಸರ್ಕಾರ ಮದ್ಯಪ್ರವೇಶ ಮಾಡಿ ಸಂಕಷ್ಟ ಸೂತ್ರ ನೀಡಬೇಕು. 4 ಜನ

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಚರ್ಚಿಸಬೇಕು ಎಂದರು. ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು (Chandru), ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಹಾಗೂ

ಹೋರಾಟಗಾರರು ಭಾಗಿಯಾಗಿದ್ದರು.

ಮುಖ್ಯಮಂತ್ರಿಗಳ ಪರವಾಗಿ ಮನವಿ ಸ್ವೀಕರಿಸಿದ್ದೇನೆ. ನೀರು ಹರಿಸಬಾರದು ಎಂದು, ಸಂಕಷ್ಟ ಕಾಲದಲ್ಲಿ ಸಮಿತಿ ನಿರ್ಮಿಸಬೇಕು ಎಂದು, ಈ ಹಿಂದೆ ಕನ್ನಡ (Kannada) ಭಾಷೆ,ನೆಲ, ಜಲದ ಬಗ್ಗೆ

ಹಾಕಿರುವ ಪ್ರಕರಣ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ಸರ್ಕಾರ ಕರ್ನಾಟಕದ ರೈತರ ಪರ ಇದೆ. ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಮನವಿ ಸ್ವೀಕರಿಸಿದ ಬಳಿಕ

ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.

ಇದನ್ನು ಒದಿ: ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಐದು ಸಮಿತಿ ರಚಿಸಿದ ರಾಜ್ಯ ಸರ್ಕಾರ..!

Exit mobile version