ಶಿವಸೇನೆ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ : ಉದ್ಧವ್ ಠಾಕ್ರೆ

Maharashtra

ಮಹಾರಾಷ್ಟ್ರ(Maharashtra) ಸಿಎಂ(CM) ಉದ್ಧವ್ ಠಾಕ್ರೆ(Uddhav Thackrey) ಮಾತನಾಡಿ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಪಕ್ಷದ ಶಾಸಕರು(MLA) ಒತ್ತಾಯಿಸಿದರೆ ಶಿವಸೇನಾ(Shivsena) ಮುಖ್ಯಸ್ಥ ಸ್ಥಾನದಿಂದ ಮತ್ತು ಸಿಎಂ ಸ್ಥಾನದಿಂದ ನಾನು ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಶಾಸಕರಿಗೆ ರಾಜೀನಾಮೆ(Resign) ನೀಡಲು ನಾನು ಸಿದ್ಧನಿದ್ದೇನೆ, ಅವರು ಇಲ್ಲಿಗೆ ಬಂದು ನನ್ನ ರಾಜೀನಾಮೆಯನ್ನು ರಾಜಭವನಕ್ಕೆ ತೆಗೆದುಕೊಂಡು ಹೋಗಬೇಕು.

ನಾನು ಶಿವಸೇನೆ ಪಕ್ಷದ ಮುಖ್ಯಸ್ಥನ ಸ್ಥಾನವನ್ನು ಸಹ ಬಿಡಲು ಸಿದ್ಧನಿದ್ದೇನೆ, ಆದರೆ ನನ್ನ ಕಾರ್ಯಕರ್ತರ ಮಾತಿಗೆ ಅಲ್ಲ ಎಂದು ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಮಹಾ’ ಸರ್ಕಾರ ಪತನವಾಗಲಿದೆಯಾ? ಎಂಬ ಪ್ರಶ್ನೆಗಳು ಒಂದೆಡೆಯಾದರೆ, ಏಕನಾಥ್ ಶಿಂಧೆ ಅವರ ಸೂಚನೆಯಂತೆ ಸಿಎಂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯಾ ಎಂಬ ಪ್ರಶ್ನೆಗಳ ಸುರಿಮಳೆಗಳು ಮತ್ತೊಂದೆಡೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಹಾರಾಷ್ಟ್ರ(Maharashtra) ರಾಜಕೀಯದಲ್ಲಿ(Political) ಕ್ಷಣಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ.

ಏಕನಾಥ್ ಶಿಂಧೆ(Eknath Shinde) ನೇತೃತ್ವದಲ್ಲಿ ಬಂಡಾಯವೆದ್ದಿರುವ ಸುಮಾರು 40 ಶಾಸಕರು(MLA) ಸೂರತ್ ತೊರೆದು, ಅಸ್ಸಾಂನ(Assam) ಗುವಾಹಟಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ ಉದ್ದವ್ ಠಾಕ್ರೆ ನೇತೃತ್ವದ ‘ಮಹಾ ವಿಕಾಸ ಅಘಾಡಿ’ ಸರ್ಕಾರ ಪತನದ ಭೀತಿಯಲ್ಲಿದೆ. ಇನ್ನು ಏಕನಾಥ್ ಶಿಂಧೆ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಉದ್ದವ್ ಠಾಕ್ರೆ, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದರೆ ಅವರು ನಮ್ಮನ್ನು ತುಳಿಯುತ್ತಾರೆ. ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿ ಏಕನಾಥ್ ಶಿಂಧೆ ಮತ್ತು ಉದ್ದವ್ ಠಾಕ್ರೆ ನಡುವಿನ ಮಾತುಕತೆ ಮುರಿದು ಬಿದ್ದಿದೆ ಎನ್ನಲಾಗಿದೆ. ಇನ್ನೊಂದೆಡೆ ಸರ್ಕಾರ ಪತನವಾಗಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Exit mobile version