ಇನ್ನು ದೇಶದಲ್ಲಿ ಮೋದಿ ಮ್ಯಾಜಿಕ್‌ ನಡೆಯಲ್ವಾ? ಬಿಜೆಪಿ ಗೆಲುವಿಗೆ ಮೋದಿ ಸೂತ್ರ ಬಿಟ್ಟು ಬೇರೇನಾದ್ರೂ ಹುಡುಕಬೇಕಾ?

ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರಬಿದ್ದಿದೆ ಅಚ್ಚರಿ ಎಂಬಂತೆ ಕಾಂಗ್ರೆಸ್ (reason for BJP defeat) 136 ಸ್ಥಾನಗಳನ್ನು ಗಿಟ್ಟಿಸಿಕೊಂಡು ಸರಕಾರ

ರಚಿಸಲು ತಯಾರಿ ನಡೆಸುತ್ತಿದೆ ಇದೆಲ್ಲದರ ನಡುವೆ ಬಿಜೆಪಿ ಈ ಬಾರಿ ಇಷ್ಟು ಅಂತರದಲ್ಲಿ ಸೋಲಲು ಕಾರಣಗಳೇನು?! ಮೋದಿ ಮ್ಯಾಜಿಕ್ (Modi Magic) ಕರ್ನಾಟಕದಲ್ಲಿ ಯಾಕೆ ನಡೆಯಲಿಲ್ಲ?

ಇನ್ಮುಂದೆ ದೇಶದಲ್ಲಿ ಮೋದಿ ಮ್ಯಾಜಿಕ್ ನಡೆಯಲ್ವಾ? ಬಿಜೆಪಿ ಗೆಲುವಿಗೆ ಮೋದಿ ಸೂತ್ರ ಬಿಟ್ಟು ಬೇರೇನಾದ್ರೂ ಹುಡುಕಬೇಕಾ? ಹೀಗೆ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ನಾನಾ ಕಾರಣಗಳನ್ನು

ಹುಡುಕುತ್ತಾ ಹೋದ್ರೆ ಸಿಗುವ ಕಾರಣಗಳು ಹಲವು. ಅವುಗಳು (reason for BJP defeat) ಇಂತಿವೆ.

ಚುನಾವಣಾ ಭಾರವನ್ನು ಮೋದಿ ಮತ್ತು ಅಮಿತ್ ಶಾ ಮೇಲೆ ಏರಿದ್ದೇ ತಪ್ಪಾಯ್ತಾ?
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಗಟ್ಟಿಯಾದ ನಾಯಕತ್ವ ಕೊರತೆ ಎದುರಾಗುತ್ತಿತ್ತು ರಾಜ್ಯದಲ್ಲಿ ಅಭಿವೃದ್ಧಿಗಳನ್ನು ಮಾಡಿ ಮೋದಿ (Modi) ಮತ್ತು ಅಮಿತ್ ಶಾ (Amit Shah) ಪ್ರಚಾರಕ್ಕೆಂದು

ಬಂದಿದಿದ್ದರೆ ಗೆಲುವು ಸಾಧ್ಯವಾಗುತ್ತಿತ್ತೋ ಏನೋ ಆದರೆ ರಾಜ್ಯ ನಾಯಕರುಗಳು ಇಂತಹ ಯಾವುದೇ ಕಾರ್ಯಗಳನ್ನು ಮಾಡದೆ ಕೇಂದ್ರ ನಾಯಕರನ್ನೇ ನಂಬಿ ಚುನಾವಣೆ ಎದುರಿಸಲು ಮುಂದಾದರು

ಆದರೆ ಕಟ್ಟಡದ ಅಡಿಪಾಯ ಗಟ್ಟಿಯಿಲ್ಲದೆ ಮೇಲಿನ ಕಟ್ಟಡ ಉತ್ತಮವಾಗಿ ಕಟ್ಟಬಹುದು ಎಂಬುದು ತಾರ್ಕಿಕ ನಿಲುವು

ಹಿಜಾಬ್, ಹಲಾಲ್-ಜಟ್ಕಾ ಕಟ್ , ದ್ವೇಷ ಭಾಷಣವೇ ಮುಳುವಾಯಿತಾ?
ಬಿಜೆಪಿಯ ಮತ್ತೊಂದು ಹಿನ್ನಡೆಗೆ ಕಾರಣವಾಗಿದ್ದು ಹಿಜಾ (Hija) ಹಲಾಲ್ (Halal) ಜಟ್ಕ ಕಟ್ಗಳಂತಹ ಧಾರ್ಮಿಕ ವಿಷಯಗಳು. ಅಲ್ಲದೆ ಬೇಕಾಬಿಟ್ಟಿ ಮಾಡಿದ ಕೋಮು ಕಲಹ ಭಾಷಣಗಳು ಇವರ ಹಿನ್ನಡೆಗೆ ಮುಖ್ಯ ಕಾರಣ

ಕಾಂಗ್ರೆಸ್ ನಡೆಸಿದ 40% ಕ್ಯಾಂಪೇನ್ ವರ್ಕೌಟ್‌ ಆಯಿತಾ?
ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ನಡೆಸಿದ 40% ಕ್ಯಾಂಪೇನನ್ನು (Campaign) ಅಲ್ಲಗಳೆದರು ಇದು ಚುನಾವಣೆ ಎದುರಿಸಲು ತಮಗೆ ಅಡ್ಡಿಯಾಗಬಹುದು ಎಂದು ನಾಯಕರುಗಳು ಚಿಂತನೆ ಮಾಡಿರಲಿಲ್ಲ

PAYCM ಜನರ ನಡುವೆ ರಾಜ್ಯದ ಸರಕಾರದಲ್ಲಿನ ನಂಬಿಕೆ ಕಳೆದುಕೊಳ್ಳುವಲ್ಲಿ ಮುಖ್ಯಪಾತ್ರ ವಹಿಸಿತು

ಯಡಿಯೂರಪ್ಪರವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಶಾಪವಾಯ್ತಾ?
ಯಡಿಯೂರಪ್ಪ (Yeddiyurappa) ರವರನ್ನು ಹಠತ್ತಾಗಿ ಸಿಎಂ ಸ್ಥಾನದಿಂದ ಇಳಿಸಿದ್ದು ಈ ಬಾರಿಯ ಸೋಲಿಗೂ ಒಂದು ಕಾರಣ ಯಾಕೆಂದರೆ ಲಿಂಗಾಯತರು ಇದರಿಂದ ಬೇಸರಗೊಂಡು ತಮ್ಮ ಮತವನ್ನು

ಕಾಂಗ್ರೆಸ್ಗೆ ಚಲಾವಣೆ ಮಾಡಿದ್ದಾರೆ. ಯಡಿಯೂರಪ್ಪ ರವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಈ ರೀತಿ ಆಗುವ ಸಾಧ್ಯತೆ ಕಮ್ಮಿ ಇತ್ತು

ಒಳ ಮೀಸಲಾತಿ ಹಿಂಪಡೆದುದು ತಿರುಗುಬಾಣವಾಯಿತಾ?
4% ಮುಸ್ಲಿಂ (Muslim) ಮೀಸಲಾತಿ ಮತ್ತು ಒಳ ಮೀಸಲಾತಿಯನ್ನು ಹಿಂಪಡೆದು ಒಕ್ಕಲಿಗರು (Vokkaliga) ಮತ್ತು ಲಿಂಗಾಯತರಿಗೆ ಕೊಡುವ ನಿರ್ಣಯ ಕೊನೆಯ ಸಮಯದಲ್ಲಿ ಬಿಜೆಪಿಗೆ ತಿರುಗುಬಾಣವಾಯಿತು.

ಅವಸರದ ನಿರ್ಣಯ ಮುಸ್ಲಿಂ ಸಮುದಾಯ ಒಂದಾಗುವಂತೆ ಮಾಡಿದ್ದು ಮತ್ತು ಇದರಿಂದ ಕರ್ನಾಟಕ ರಾಜ್ಯ ಜನತೆ ಅಸಮಾಧಾನ ಕೂಡ ವ್ಯಕ್ತಪಡಿಸಿತು ಬಿಜೆಪಿಗೆ ಇದೊಂದು ದೊಡ್ಡ ಹೊಡೆತವಾಯಿತು
ಘಟಾನುಘಟಿಗಳ ಪಕ್ಷಾಂತರ ಸೃಷ್ಟಿಸಿತು ಅವಾಂತರ!

ಇದನ್ನು ಓದಿ: ಶಬರಿಮಲೆ ಭಕ್ತರೇ, ಕೇರಳ ಹೈಕೋರ್ಟ್‌ನಿಂದ ಬಿದ್ದಿದೆ ಈ ತೀರ್ಪು! ಇದನ್ನು ಓದಿ ಬೆಟ್ಟ ಹತ್ತಿ


ಬಿಜೆಪಿಯ ಮುತ್ಸದ್ದಿ ನಾಯಕರನ್ನು ಚುನಾವಣೆಯಿಂದ ಹೊರಗೆ ಇಟ್ಟಿದ್ದರಿಂದ ಘಟಾನುಘಟಿ ನಾಯಕರು ಪಕ್ಷಾಂತರಗೊಂಡು ಕಾಂಗ್ರೆಸ್ ಸೇರ್ಪಡೆಗೊಂಡರು ಇದೊಂದು ದೊಡ್ಡ ಹೊಡೆತವಾಗಬಹುದು ಎಂದು ಬಿಜೆಪಿಗೆ

ಚುನಾವಣಾ ಫಲಿತಾಂಶದ ನಂತರ ಅರಿವಾಗಿರಬಹುದು. ಜಗದೀಶ್ ಶೆಟ್ಟರ್ (Jagdish Shetter) ಮತ್ತು ಲಕ್ಷ್ಮಣ್ ಸವದಿ (Lakshmana Savadi) ಅಂತಹ ನಾಯಕರು ಪಕ್ಷ ತೊರೆದುದರಿಂದ ಅವರ ಸಮುದಾಯಗಳು

ಬಿಜೆಪಿಯ ಮೇಲೆ ರೊಚ್ಚಿಗೆ ಎದ್ದಿದ್ದರು ಇದೊಂದು ಪ್ರಮುಖ ಕಾರಣವೂ ಕೂಡ ಹೌದು.

ಇದೆಲ್ಲಾ ಕಾರಣಗಳ ಹೊರತು ಬಿಜೆಪಿ (BJP) ನಾಯಕರು ಬಹಿರಂಗವಾಗಿ ತಮ್ಮ ತಮ್ಮ ಅಸಮಾಧಾನಗಳನ್ನು ಹೊರಹಾಕಿದ್ದು ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿತು ಅಲ್ಲದೆ ಅಭ್ಯರ್ಥಿಗಳ

ಆಯ್ಕೆ ಪ್ರಕ್ರಿಯೆಯನ್ನು ಕೂಡ ಬಿಜೆಪಿ ಎಡವಿತ್ತು ಇದು ಕೂಡ ಬಿಜೆಪಿ ಸೋಲಿನ ಮುಖ್ಯ ಕಾರಣ

ಮೊಹಮ್ಮದ್ ಶರೀಫ್

Exit mobile version