ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

GST

ದೆಹಲಿ : ಜುಲೈ 18 ರಿಂದ ಜಾರಿಗೆ ಬರುವ ಹೊಸ ಜಿಎಸ್ಟಿ(GST) ನಿಯಮಗಳ ಪ್ರಕಾರ, ಜಿಎಸ್ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಒಬ್ಬ ಹಿಡುವಳಿದಾರನು ವಸತಿ ಆಸ್ತಿಯನ್ನು(House Property) ಬಾಡಿಗೆಗೆ(Rentals) ಪಡೆಯಲು ಶೇಕಡಾ18% ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಪಾವತಿಸಿದ ಬಾಡಿಗೆಗೆ ಶೇಕಡಾ18% ತೆರಿಗೆ(Tax) ಮಾತ್ರ ಅನ್ವಯಿಸುತ್ತದೆ ಎಂದು ಜಿಎಸ್‌ಟಿ ಮಂಡಳಿ ತಿಳಿಸಿದೆ.


ಇನ್ನು ಈ ಹಿಂದೆ, ಬಾಡಿಗೆ ಅಥವಾ ಲೀಸ್ನಲ್ಲಿ(Lease) ನೀಡಲಾದ ಕಾರ್ಪೊರೇಟ್ ಕಚೇರಿಗಳು, ಮನೆಗಳ ಮೇಲೆ ಯಾವುದೇ ಜಿಎಸ್‌ಟಿ ಇರಲಿಲ್ಲ. ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ. ಹಿಡುವಳಿದಾರನು ಇನ್ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಪಾವತಿಸಿದ ಜಿಎಸ್‌ಟಿಯನ್ನು ಕ್ಲೈಮ್ ಮಾಡಬಹುದು.

ಹಿಡುವಳಿದಾರನು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಂಡಾಗ ಮತ್ತು ಜಿಎಸ್‌ಟಿ ರಿಟರ್ನ್ಗಳನ್ನು ಸಲ್ಲಿಸಲು ಹೊಣೆಗಾರನಾಗಿದ್ದಾಗ ಮಾತ್ರ ತೆರಿಗೆ ಅನ್ವಯಿಸುತ್ತದೆ. ವಸತಿ ಆಸ್ತಿಯ ಮಾಲೀಕರು ಜಿಎಸ್ಟಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.
ಇನ್ನು ಯಾವುದೇ ಸಾಮಾನ್ಯ ವೇತನದಾರರು ವಸತಿ ಮನೆ ಅಥವಾ ಫ್ಲಾಟ್ ಅನ್ನು ಬಾಡಿಗೆ ಅಥವಾ ಗುತ್ತಿಗೆಗೆ ತೆಗೆದುಕೊಂಡಿದ್ದರೆ, ಅವರು ಜಿಎಸ್ಟಿ ಪಾವತಿಸಬೇಕಾಗಿಲ್ಲ.

ಆದರೆ ವ್ಯಾಪಾರ ಅಥವಾ ವೃತ್ತಿಯನ್ನು ನಿರ್ವಹಿಸುವ ಜಿಎಸ್ಟಿ ನೋಂದಾಯಿತ ವ್ಯಕ್ತಿಯು, ಮಾಲೀಕರಿಗೆ ಪಾವತಿಸುವಂತಹ ಬಾಡಿಗೆಗೆ ಶೇಕಡಾ 18% ರಷ್ಟು ಜಿಎಸ್ಟಿಯನ್ನು ಪಾವತಿಸಬೇಕಾಗುತ್ತದೆ. ಜಿಎಸ್ಟಿ ನೋಂದಾಯಿತ ವ್ಯಕ್ತಿ, ಬಾಡಿಗೆ ವಸತಿ ಆಸ್ತಿಯಿಂದ ಸೇವೆಗಳನ್ನು ಒದಗಿಸಿದರೆ, ಅವರು 18% ಪ್ರತಿಶತದಷ್ಟು ತೆರಿಗೆಯನ್ನು ಪಾವತಿಸಲು ಹೊಣೆಗಾರರಾಗಿರುತ್ತಾರೆ.


ಇನ್ನು ಜಿಎಸ್ಟಿ ಕೌನ್ಸಿಲ್ನ 47ನೇ ಸಭೆಯ ನಂತರ ಜಾರಿಗೆ ತರಲಾದ ಹೊಸ ಬದಲಾವಣೆಗಳು, ಬಾಡಿಗೆ ಅಥವಾ ಗುತ್ತಿಗೆಗೆ ವಸತಿ ಆಸ್ತಿಗಳನ್ನು ತೆಗೆದುಕೊಂಡಿರುವ ಕಂಪನಿಗಳು ಮತ್ತು ವೃತ್ತಿಪರರ ಮೇಲೆ ಪರಿಣಾಮ ಬೀರುತ್ತವೆ. ಇದು ಸಾಮಾನ್ಯ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜಿಎಸ್‌ಟಿ ಮಂಡಳಿ ಸ್ಪಷ್ಟಪಡಿಸಿದೆ.

Exit mobile version