ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ ಟೆನ್ಶನ್ ಬೇಡ: ಮರಳಿ ಪಡೆಯಲು ಹೀಗೆ ಮಾಡಿ ಸಾಕು

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ (Retrieve lost Aadhaar card) ಹೊಂದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ ಸರಕಾರದ ಅತ್ಯಮೂಲ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ಈ ಕಾರಣಕ್ಕಾಗಿಯೇ ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್ ಇದೆ. ಭಾರತೀಯ ನಾಗರಿಕರ ಜಾಗತಿಕ ಗುರುತಿಸುವಿಕೆಗಾಗಿ ಆಧಾರ್ ಅನ್ನು 2009 ರಲ್ಲಿ ಪ್ರಾರಂಭಿಸಲಾಯಿತು, ಅದರಲ್ಲಿ 12-ಅಂಕಿಯ ಸಂಖ್ಯೆಯು ಪ್ರತಿಯೊಬ್ಬ

ಭಾರತೀಯನ ಗುರುತಾಗಿದೆ. 14 ವರ್ಷಗಳಿಂದ ಆಧಾರ್ ಕಾರ್ಡ್ ಇದೆ. ಇದರಲ್ಲಿ ಹೆಸರುಗಳು, ವಿಳಾಸಗಳು ಮತ್ತು ಫೋಟೋಗಳನ್ನು ಆನ್‌ಲೈನ್‌ನಲ್ಲಿ (Online) ಬದಲಾಯಿಸಬಹುದು.

ಹಾಗಾದರೆ ಯಾರಾದರೂ ತಮ್ಮ ಆಧಾರ್ ಕಾರ್ಡ್ ಕಳೆದುಕೊಂಡರೆ? ಅದನ್ನು ಮರಳಿ ಪಡೆಯುವುದು ಹೇಗೆ?

ಇದು ಬಹಳ ಜನರಿಗೆ ತಿಳಿದಿಲ್ಲ. ಆ ಕುರಿತ ಮಾಹಿತಿ (Retrieve lost Aadhaar card) ಇಲ್ಲಿದೆ.


ಆಧಾರ್ ಕಾರ್ಡ್ ಕಳೆದು ಹೋದರೆ ಅದನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಇತರೆ ಸೌಲಭ್ಯಗಳನ್ನು ನೀಡುತ್ತದೆ. ಯುಐಡಿಎಐನ (UIDAI) ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೀವು

ಅದನ್ನು ಸುಲಭವಾಗಿ ಹಿಂಪಡೆಯಬಹುದು. ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ (Website) ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ನಕಲಿ ಆಧಾರ್ ಕಾರ್ಡ್ ಅನ್ನು ಸಹ ಪಡೆಯಬಹುದು.

ಇದನ್ನು ಓದಿ: ಹಿಜಾಬ್‌ ಮರುಸ್ಥಾಪನೆಯು ಜಾತ್ಯತೀತತೆಗೆ ವಿರುದ್ಧವಾಗಿದೆ : ಚೇತನ್‌ಅಹಿಂಸಾ

ಆದರೆ ನಿಮ್ಮ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಒದಗಿಸಿದರೆ OTP ಕಾಣಿಸುತ್ತದೆ.ಮತ್ತು 50. ಶುಲ್ಕ ಪಾವತಿಸಬೇಕು.ಒಂದು ವೇಳೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರೇ ನೋಂದಣಿ ಸಂಖ್ಯೆ ಅಗತ್ಯವಿರುವುದಿಲ್ಲ.

ನಿಮ್ಮ ಅಧಿಕೃತ ಇ-ಮೇಲ್ ಐಡಿ (E-mail Id) ಅಥವಾ ಲಿಂಕ್ ಮಾಡಿರುವ ಮೊಬೈಲ್ ನಂಬರ್ಗೆ ಮಾತ್ರ ಕಳುಹಿಸಲಾಗುತ್ತದೆ.

ಆಧಾರ್ ನಂಬರ್ ಲಾಕ್ ಮಾಡಿ: ಒಂದು ವೇಳೆ ಆಧಾರ್ ಕಳೆದುಕೊಂಡ ತಕ್ಷಣ ಅದನ್ನು ಲಾಕ್ (Lock) ಮಾಡುವುದು ಮುಖ್ಯ.ನಂತರ ಅನ್ಲಾಕ್ (Unlock) ಮಾಡಿ ನಂತರ ಬಳಸಬಹುದಾಗಿದೆ.

ಆಧಾರ್ ಕಾರ್ಡ್ ಲಾಕ್ ಮಾಡುವ ವಿಧಾನ :

  1. ಮೊದಲು https://resident.uidai.in/ ವೆಬ್ಸೈಟ್ಗೆ ಭೇಟಿ ನೀಡಿ.
  2. ನಂತರ ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ (Aadhar Service) ಆಯ್ಕೆಯನ್ನು ಕ್ಲಿಕ್ ಮಾಡಿ.
  3. ಇಲ್ಲಿ ಲಾಕ್ ಅನ್ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
  4. 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸಿ ನಂತರ ಲಾಗ್ ಇನ್ ಆಗಿ.
  5. ಮೊದಲು ಕ್ಯಾಪ್ಚಾ ಕೋಡ್ ನಮೂದಿಸಿ ನಂತರ ಸೆಂಡ್ ಓಟಿಪಿ (OTP) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  6. ಒಟಿಪಿ ನಮೂದಿಸಿದ ನಂತರ ಬಯೋಮೆಟ್ರಿಕ್ (Biometric) ಡೇಟಾವನ್ನು ಲಾಕ್ ಮಾಡುವ ಆಯ್ಕೆ ಇಲ್ಲಿ ಕಾಣಿಸುತ್ತದೆ.
  7. ಈಗ ಬಯೋಮೆಟ್ರಿಕ್ ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಲಾಕ್ (Aadhar Lock) ಆಗುತ್ತದೆ.

ರಶ್ಮಿತಾ ಅನೀಶ್

Exit mobile version