ಕಾಲೇಜು ಶಿಕ್ಷಣದಿಂದ ವಂಚಿತರಾದರೂ, ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ನಂ.1 ಸಾವಿತ್ರಿ ಜಿಂದಾಲ್‌!

Savitri

India : ಕಳೆದ 5 ವರ್ಷಗಳಿಂದ ಏಷ್ಯಾದ (Asia) ಅತ್ಯಂತ ಶ್ರೀಮಂತ ಮಹಿಳೆಯರ (Richest Women) ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಚೀನಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಯಾಂಗ್‌ ಹುಯ್ಯಾನ್‌ ಈಗ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಆ ಸ್ಥಾನ ಇದೀಗ ಭಾರತದ ಜಿಂದಾಲ್‌ ಸಂಸ್ಥೆಯ (Jindal Company) ಮುಖ್ಯಸ್ಥೆ ಸಾವಿತ್ರಿ ಜಿಂದಾಲ್‌ (Savithri Jindal) ಪಾಲಾಗಿದೆ.


ಹೌದು, ಸಾವಿತ್ರಿ ಜಿಂದಾಲ್‌ ಅವರ ಒಟ್ಟು ಆಸ್ತಿ ಮೌಲ್ಯ 89 ಸಾವಿರ ಕೋಟಿ ರೂ. ನಷ್ಟಿದೆ. ಈವರೆಗೆ ಈ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಯಾಂಗ್‌ ಅವರು ಈ ವರ್ಷ ಅಪಾರ ನಷ್ಟ ಅನುಭವಿಸಿದ್ದಾರೆ.

ಬ್ಲೂಮ್‌ಬರ್ಗ್‌ (Bloomberg) ವರದಿಯ ಪ್ರಕಾರ ಜನವರಿಯಲ್ಲಿ 1.87 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಯಾಂಗ್‌ ಅವರ ಆಸ್ತಿ ಮೌಲ್ಯ ಜುಲೈನಲ್ಲಿ 87 ಸಾವಿರ ಕೋಟಿ ರೂ.ಗೆ ಇಳಿದಿದೆ.

ಇದನ್ನೂ ಓದಿ : https://vijayatimes.com/tmc-leader-madan-mitra-warns-bjp/

ಅವರೀಗ ಏಷ್ಯಾದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 3ನೇ ಸ್ಥಾನಕ್ಕಿಳಿದಿದ್ದಾರೆ. ಅವರ ಆಸ್ತಿ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದರಿಂದಾಗಿ ಸಾವಿತ್ರಿ ಅವರು ನಂಬರ್‌ ಒನ್‌ ಸ್ಥಾನಕ್ಕೇರಿದ್ದಾರೆ.

ಹಾಗೆಯೇ ಸಾವಿತ್ರಿ ಅವರು ಭಾರತದ 10ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ಅವರ ನಿವ್ವಳ ಆಸ್ತಿ ಮೌಲ್ಯವು ಕೇವಲ ಎರಡು ವರ್ಷಗಳಲ್ಲಿ ಸುಮಾರು 12 ಶತಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

ಜಗತ್ತಿನ ಬಿಲಿಯನೇರ್ (Billionaire) ಪಟ್ಟಿಯಲ್ಲಿ ಜಿಂದಾಲ್ ಗ್ರೂಪ್ನ ಸಾವಿತ್ರಿ ಜಿಂದಾಲ್ 91ನೇ ಸ್ಥಾನದಲ್ಲಿದ್ದಾರೆ.

ಇನ್ನೊಂದು ವಿಶೇಷವೆಂದರೆ ಸಾವಿತ್ರಿ ಜಿಂದಾಲ್ ಕಾಲೇಜು ಶಿಕ್ಷಣ ಪಡೆದವರಲ್ಲ. ಶೈಕ್ಷಣಿಕ ಕಲಿಕೆಗೆ ಅವರಿಗೆ ಅವಕಾಶ ಸಿಗಲೇ ಇಲ್ಲ.

ಆದರೂ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ 13 ಮಹಿಳಾ ಬಿಲಿಯನೇರ್‌ಗಳಲ್ಲಿ ಒಬ್ಬರು ಎಂಬ ಸಾಧನೆ ಮಾಡಿದ್ದಾರೆ.

ಸಾವಿತ್ರಿ ಅವರ ಪತಿ ಓ.ಪಿ.ಜಿಂದಾಲ್ ನಿಧನದ ಬಳಿಕ ಸಾವಿತ್ರಿ ಜಿಂದಾಲ್ ಅನಿವಾರ್ಯವಾಗಿ ಗಂಡನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು.

ಇದನ್ನೂ ಓದಿ : https://vijayatimes.com/hillier-lake-australia/

ಜಿಂದಾಲ್ ಸಾವಿನಿಂದ ಸಾವಿತ್ರಿಯವರ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಅದುವರೆಗೂ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದ ಅವರು ಕಂಪನಿಯ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು.

ಎಲ್ಲರೂ ನಿವೃತ್ತಿ ಪಡೆಯುವ ವಯಸ್ಸಿನಲ್ಲಿ ಸಾವಿತ್ರಿ ಜಿಂದಾಲ್ ಬೃಹತ್ ಕಂಪನಿಯ ಉಸ್ತುವಾರಿ ವಹಿಸಿಕೊಂಡು ಯಶಸ್ವಿಯೂ ಆಗಿದ್ದಾರೆ.
Exit mobile version