Britain : ಬ್ರಿಟನ್‌ ಪ್ರಧಾನಿಯಾಗಿ ಲಿಜ್ ಟ್ರಸ್ ಪ್ರಮಾಣ ವಚನ ಸ್ವೀಕಾರ ; ಪ್ರಮುಖ ಕ್ಯಾಬಿನೆಟ್ ಹುದ್ದೆಯಲ್ಲಿ ಬಿಳಿಯರಿಗಿಲ್ಲ ಸ್ಥಾನ

Britain

Britain : ಕನ್ಸರ್ವೇಟಿವ್ ನಾಯಕತ್ವದ ಸ್ಪರ್ಧೆಯಲ್ಲಿ ರಿಷಿ ಸುನಕ್(Rishi Sunak) ಅವರನ್ನು ಸೋಲಿಸಿದ ನಂತರ ಲಿಜ್ ಟ್ರಸ್ ಅವರು ಬ್ರಿಟನ್‌(Britain) ಪ್ರಧಾನಿಯಾಗಿ(PrimeMinister) ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಿಜ್ ಟ್ರಸ್ ಅವರು ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಯುನೈಟೆಡ್ ಕಿಂಗ್‌ಡಂನ(United Kingdom) ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಲಿದ್ದಾರೆ.

ಲಿಜ್ ಟ್ರಸ್ ಅವರು ತಮ್ಮ ಪ್ರತಿಸ್ಪರ್ಧಿ ರಿಷಿ ಸುನಕ್ ಅವರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿ ಪ್ರಧಾನಿ ಹುದ್ದೆಗೇರಿದರು. ರಿಷಿ ಸುನಕ್‌ 60,399 ಮತಗಳನ್ನು ಪಡೆದರೆ, ಲಿಜ್ ಟ್ರಸ್ ಅವರು 81,326 ಮತಗಳೊಂದಿಗೆ ಪ್ರಧಾನಿಯಾದರು. ಈ ಹಿಂದೆ ಬೋರಿಸ್‌ ಜಾನ್ಸನ್‌ ಸಂಪುಟದಲ್ಲಿ ಲಿಜ್ ಟ್ರಸ್ ಬ್ರಿಟನ್‌ನ ವಿದೇಶಾಂಗ ಸಚಿವೆಯಾಗಿದ್ದರು.

https://vijayatimes.com/health-facts-about-heart/

ಇನ್ನು ಇಂದು ಸಂಜೆಯ ವೇಳೆಗೆ ಸಚಿವ ಸಂಪುಟ ರಚನೆಯಾಗಲಿದ್ದು, ಬ್ರಿಟನ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ, ಬ್ರಿಟನ್‌ನ ನಾಲ್ಕು ದೊಡ್ಡ ಹುದ್ದೆಗಳಲ್ಲಿ ಬಿಳಿಯ ವ್ಯಕ್ತಿಗೆ ಸ್ಥಾನ ಇಲ್ಲದಂತಾಗುವ ಸಾಧ್ಯತೆಯಿದೆ. ಬ್ರಿಟಿಷ್ ದಿನಪತ್ರಿಕೆ ಗಾರ್ಡಿಯನ್ ಪ್ರಕಾರ, ಲಿಜ್ ಟ್ರಸ್ ಅವರು ಜೇಮ್ಸ್ ಕ್ಲೆವರ್ಲಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ,

ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ಗೃಹ ಕಾರ್ಯದರ್ಶಿಯಾಗಿ ಮತ್ತು ಕ್ವಾಸಿ ಕ್ವಾರ್ಟೆಂಗ್ ಅವರನ್ನು ಚಾನ್ಸೆಲರ್ ಆಗಿ ನೇಮಿಸುವ ನಿರೀಕ್ಷೆಯಿದೆ. ಇನ್ನು ಲಿಜ್ ಟ್ರಸ್ ಅವರು ತಮ್ಮ ಪ್ರತಿಸ್ಪರ್ಧಿಯಾದ ರಿಷಿ ಸುನಕ್ ಅವರಿಗೆ ತನ್ನ ಕ್ಯಾಬಿನೆಟ್‌ನಲ್ಲಿ ಯಾವುದೇ ಹುದ್ದೆಯನ್ನು ನೀಡುವ ಸಾಧ್ಯತೆ ಇಲ್ಲ ಎಂದು ಅದು ವರದಿ ಮಾಡಿದೆ.

https://vijayatimes.com/history-of-sadhu-amar-bharati/

ಲಿಜ್ ಟ್ರಸ್ ಅವರು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ಗೆ ಆಗಮಿಸುವ ನಿರೀಕ್ಷೆಯಿದೆ. ಅಲ್ಲಿ ರಾಣಿ ಎಲಿಜಬೆತ್ ಅವರು ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಲಿಜ್‌ ಟ್ರಸ್ ಅವರನ್ನು ಔಪಚಾರಿಕವಾಗಿ ನೇಮಿಸುತ್ತಾರೆ. ನಂತರ ಲಂಡನ್ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.

Exit mobile version