ನನ್ನ ತಂದೆಗೆ ಏನಾದ್ರೂ ತೊಂದರೆಯಾದ್ರೆ ಯಾರನ್ನು ಸುಮ್ಮನೆಬಿಡೊಲ್ಲ : ಲಾಲು ಪ್ರಸಾದ್‌ ಯಾದವ್ ಮಗಳ ಎಚ್ಚರಿಕೆ!

Bihar : ಅನಾರೋಗ್ಯದಿಂದ ಬಳಲುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಅವರನ್ನು ವಿಚಾರಣೆ ಮಾಡುತ್ತಿದ್ದ ಸಿಬಿಐ(CBI) ಅಧಿಕಾರಿಗಳಿಗೆ ಲಾಲು ಪ್ರಸಾದ್‌ (Rohini Acharya vs CBI) ಅವರ ಮಗಳು ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

Lalu Prasad Yadav

ಇಂದು ಸಿಬಿಐ(CBI) ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಹಿರಿಯ ರಾಜಕಾರಣಿ ಲಾಲು ಪ್ರಸಾದ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಂತೆ,

ಅನಾರೋಗ್ಯದಿಂದ ಬಳಲುತ್ತಿರುವ ಆರ್‌ಜೆಡಿ ನಾಯಕರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಅವರ ಪುತ್ರಿ ರೋಹಿಣಿ ಆಚಾರ್ಯ ಆರೋಪಿಸಿದ್ದಾರೆ ಮತ್ತು ತಮ್ಮ ತಂದೆ ಅವರಿಗೆ ಏನಾದರೂ ಸಂಭವಿಸಿದರೆ,

ನಾನು ಯಾರನ್ನೂ ಸಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

https://youtu.be/gxX0qsV8gFY

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಿಂದಿ ಭಾಷೆಯಲ್ಲಿ ಬರೆದು ಪೋಸ್ಟ್‌ ಮಾಡಿದ ಲಾಲು ಪ್ರಸಾದ್‌ ಯಾದವ್‌ ಅವರ ಎರಡನೇ ಪುತ್ರಿ ರೋಹಿಣಿ ಆಚಾರ್ಯ,(Rohini Acharya) ಅವರಿಗೆ ಕಿರುಕುಳ ನೀಡುತ್ತಿರುವ ರೀತಿ ಸರಿಯಿಲ್ಲ.

ಇದೆಲ್ಲ ನೆನಪಾಗುತ್ತೆ. ಟೈಮ್ ತುಂಬಾ ಪವರ್‌ಫುಲ್ ಎಂದು ಬರೆದುಕೊಂಡಿದ್ದಾರೆ.

Rohini Acharya

ಮತ್ತೊಂದು ಟ್ವೀಟ್‌ ಮಾಡಿರುವ ಅವರು, 74 ವರ್ಷದ ನಾಯಕ ಇನ್ನೂ ದೆಹಲಿಯಲ್ಲಿ(Delhi) ಅಧಿಕಾರದ ಗದ್ದುಗೆಯನ್ನು ನಡುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಸಹಿಷ್ಣುತೆಯ ಮಿತಿಗಳನ್ನು ಈಗ ಪರೀಕ್ಷಿಸಲಾಗುತ್ತಿದೆ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಕಳೆದ ಡಿಸೆಂಬರ್‌ ತಿಂಗಳಲ್ಲಿ ರೋಹಿಣಿ ಆಚಾರ್ಯ ಅವರು ತಮ್ಮ ತಂದೆ ಲಾಲು ಪ್ರಸಾದ್‌ (Rohini Acharya vs CBI) ಯಾದವ್‌ ಅವರಿಗೆ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡಿದರು.

ಸಿಂಗಾಪುರದ(Singapore) ಆಸ್ಪತ್ರೆಯಲ್ಲಿ ಕಿಡ್ನಿಯನ್ನು ದಾನ ಮಾಡಿ, ತಮ್ಮ ತಂದೆಗ ಕಸಿ ಮಾಡಿಸಿದರು.

ಶಸ್ತ್ರಚಿಕಿತ್ಸೆಯ ನಂತರ ಲಾಲು ಪ್ರಸಾದ್‌ ಅವರು ದೆಹಲಿಯಲ್ಲಿ ತಮ್ಮ ಪುತ್ರಿ ಮತ್ತು ಸಂಸದೆ ಮಿಸಾ ಭಾರ್ತಿ ಅವರ ನಿವಾಸದಲ್ಲಿ ತಂಗಿದ್ದಾರೆ.

ಆರ್‌ಜೆಡಿ ನಾಯಕರು ತಮ್ಮ ಮೇಲೆ ಕೇಳಿಬಂದ ಆರೋಪಗಳನ್ನು ತಳ್ಳಿಹಾಕಿದ್ದು, ಇದೆಲ್ಲಾ ರಾಜಕೀಯ ಪ್ರೇರಿತ ಎಂದು ಹೇಳಿದ್ದರು.

ಇನ್ನು ಕಳೆದ ವಾರವಷ್ಟೇ ಬಿಜೆಪಿ ಲಾಲು ಪ್ರಸಾದ್‌ ಅವರನ್ನು ಕಂಡು ಹೆದರುತ್ತಿದೆ ಎಂದು ದೇವಿ ಹೇಳಿದ್ದಾರೆ. ನಾವು ಓಡಿಹೋಗುವುದಿಲ್ಲ.

ಕಳೆದ 30 ವರ್ಷಗಳಿಂದ ನಾವು ಈ ಆರೋಪಗಳನ್ನು ಎದುರಿಸುತ್ತಿದ್ದೇವೆ. ಬಿಹಾರದಲ್ಲಿ ಲಾಲು ಯಾದವ್‌ಗೆ ಬಿಜೆಪಿ ಹೆದರುತ್ತಿದೆ ಎಂದು ಹೇಳಿದ್ದಾರೆ.

Exit mobile version