ಕೊಲೆ ಬೆದರಿಕೆ ಬರುತ್ತಿವೆ ; ‘ಯಾರು ಈ ಕೆಕೆ ‘ ಎಂಬ ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ : ಬಂಗಾಳ ಗಾಯಕ!

KK

ಮೇ 31 ರಂದು ಕೆಕೆ(KK) ಅವರ ಸಾವಿಗೂ ಕೆಲ ಗಂಟೆಗಳ ಮುನ್ನ, ಬಂಗಾಳ ಗಾಯಕ(Bengali Singer) ರೂಪಂಕರ್ ಬಾಗ್ಚಿ(Roopankar Bhagchi) ಫೇಸ್‌ಬುಕ್ ಲೈವ್‌ನಲ್ಲಿ ಕೆಕೆ ಅವರನ್ನು ಟೀಕಿಸಿದ್ದರು.

ಕೋಲ್ಕತ್ತಾದ ನಜ್ರುಲ್ ಮಂಚಾದಲ್ಲಿ ನೇರ ಪ್ರದರ್ಶನ ನೀಡುವ ಮೂಲಕ ಕೆಕೆ ನಿಧನರಾದ ನಂತರ ಈ ಒಂದು ಪೋಸ್ಟ್ ವೈರಲ್(Viral) ಆಗಿದೆ. ಶೀಘ್ರದಲ್ಲೇ, ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ ಮತ್ತು ರೂಪಂಕರ್ ಬಾಗ್ಚಿಯನ್ನು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಮಾಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದ ಆಕ್ರೋಶ ಮತ್ತು ಬೆದರಿಕೆಗಳನ್ನು ಎದುರಿಸಿದ ನಂತರ, ರೂಪಂಕರ್ ಕೆಕೆ ಕುಟುಂಬಕ್ಕೆ ಕ್ಷಮೆಯಾಚಿಸಿದ್ದಾರೆ.

ಬಂಗಾಳ ಗಾಯಕ ರೂಪಂಕರ್ ಬಾಗ್ಚಿ ಅವರು ಮೇ 31 ರಂದು ಕೋಲ್ಕತ್ತಾದ ನಜ್ರುಲ್ ಮಂಚದಲ್ಲಿ ಅವರ ಲೈವ್ ಕನ್ಸರ್ಟ್‌ಗೆ ಗಂಟೆಗಳ ಮೊದಲು ಕೆಕೆ ವಿರುದ್ಧ ಕೆಲವು ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದರು ಎನ್ನಲಾಗಿದೆ. ರೂಪಂಕರ್ ಅವರ ಕಾಮೆಂಟ್‌ಗಳಿಗಾಗಿ ಈಗಾಗಲೇ ಸಾಮಾಜಿಕ ಮಾಧ್ಯಮ ಸಂಪೂರ್ಣವಾಗಿ ಅವರನ್ನು ಟ್ರೋಲ್ ಮಾಡುವ ಮೂಲಕ ಹಿಗ್ಗಾಮುಗ್ಗಾ ಬೈದಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗೆ ಕೆಕೆ ಅವರ ಸಾವು ಮತ್ತಷ್ಟು ಕೋಲಾಹಲವನ್ನು ಸೃಷ್ಟಿಸಿತು. ದಿವಂಗತ ಗಾಯಕನ ವಿರುದ್ಧ ಕಾಮೆಂಟ್ ಮಾಡಿದ್ದಕ್ಕಾಗಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ರೂಪಕರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಬಂಗಾಳ ಗಾಯಕ ಕೆಕೆ ಕುಟುಂಬಕ್ಕೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಕೋಲ್ಕತ್ತಾ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೂಪಂಕರ್, ಕೆಕೆ ಅವರ ಕುಟುಂಬ, ಮುಂಬೈನ ಜನರು ಮತ್ತು ಅವರ ಅಭಿಮಾನಿಗಳು, ಕೋಲ್ಕತ್ತಾ ಮತ್ತು ದೇಶಾದ್ಯಂತ ಅವರನ್ನು ಪ್ರೀತಿಸುವ ಜನರಿಗೆ ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ನಾನು ಫೇಸ್‌ಬುಕ್ ಲೈವ್ ಮಾಡುತ್ತಿರುವಾಗ ಕ್ಷಣಿಕ ಅಚಾತುರ್ಯವು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಯಿತು ಎಂದು ವಿಷಾದಿಸುತ್ತೇನೆ. ಅಂದಿನಿಂದ ನಾನು ಫೇಸ್‌ಬುಕ್ ಪೋಸ್ಟ್ ಅನ್ನು ಮುಂದುವರೆಸಿಲ್ಲ ಬದಲಾಗಿ ಡಿಲೀಟ್ ಮಾಡಿದ್ದೇನೆ.

ಆದ್ರೆ, ನನ್ನನ್ನು ಗುರಿಯಾಗಿಸುತ್ತಿರುವುದು ಮಾತ್ರ ಕಡಿಮೆಯಾಗುತ್ತಿಲ್ಲ. ನನ್ನ ಮೇಲೆ ಕೊಲೆ ಬೆದರಿಕೆ ಸೇರಿದಂತೆ ಅನೇಕ ದಾಳಿಗಳ ಕರೆ ಬರುವುದು ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Exit mobile version