ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ

Russia : ಬ್ರಿಟನ್‌ ದೇಶದ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್(Rishi Sunak) ಅವರು ಪ್ರಧಾನಿ ಮೋದಿಯನ್ನು ಬ್ರಿಟಿಷ್ ಸಂಸತ್ತಿನಲ್ಲಿ ಸಮರ್ಥಿಸಿಕೊಂಡ ಬೆನ್ನಲ್ಲೇ ರಷ್ಯಾದ ವಿದೇಶಾಂಗ ಸಚಿವ(Russian Minister criticizes documentary) ಸೆರ್ಗೆ ಲಾವ್ರೊವ್(Serge Lavrov) ಅವರು ಪ್ರಧಾನಿ ಮೋದಿ(Narendra Modi) ಅವರ ಕುರಿತು ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರದ ಕುರಿತು ರಷ್ಯಾ(Russis) ಸೋಮವಾರ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ)(BBC) ಮೇಲೆ ದಾಳಿ ಮಾಡಿದೆ.

ಬಿಬಿಸಿಯ ಈ ವಿವಾದಾತ್ಮಕ ಸಾಕ್ಷ್ಯ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಮಾತನಾಡುತ್ತಾ, ಯುಕೆ ಪ್ರಸಾರಕರು ರಷ್ಯಾದ ವಿರುದ್ಧ ಮಾತ್ರವಲ್ಲದೆ ಇತರ ದೇಶಗಳ ವಿರುದ್ಧವೂ ಮಾಹಿತಿ ಯುದ್ಧವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ: ಸತ್ರೂ ಬಿಜೆಪಿ ಜೊತೆ ಮತ್ತೆ ಕೈಜೋಡಿಸಲ್ಲ; ನಿತೀಶ್‌ ಕುಮಾರ್‌

ಬಿಬಿಸಿ ಸಾಕ್ಷ್ಯ ಚಿತ್ರವು ವಿವಿಧ ರಂಗಗಳಲ್ಲಿ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಪುರಾವೆಯಾಗಿದೆ ಎಂಬ ಅಂಶಕ್ಕೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ ಎಂದು ಹೇಳಿದ ರಷ್ಯಾ ವಿದೇಶಾಂಗ ಸಚಿವ,

BBC ಈಗ ಕೆಲವು ಗುಂಪುಗಳ ಹಿತಾಸಕ್ತಿಗಳನ್ನು ಕಾಪಾಡುವ ಸಾಧನವಾಗಿದೆ. ಹಾಗಾಗಿ ಬಿಬಿಸಿಯ ವರದಿಗಳು ನಂಬಿಕಾರ್ಹ ಅಲ್ಲ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಗುಜರಾತ್‌ನ(Gujarat) ಮುಖ್ಯಮಂತ್ರಿಯಾಗಿದ್ದಾಗ 2002ರ ಗುಜರಾತ್ ಗಲಭೆಗಳ ಸಂದರ್ಭದಲ್ಲಿ

ಸಂಭವಿಸಿದ ಘಟನೆಗಳನ್ನು ವಿವರಿಸುವ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವು ಭಾರತದ ರಾಜಕೀಯ ವಲಯದಲ್ಲೂ ಕೆಸರೆರಚಾಟಕ್ಕೆ ಅನುವು ಮಾಡಿಕೊಟ್ಟಿದೆ.

ಸದ್ಯ ಬಿಬಿಸಿಯ ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)(NCC) ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದರು.

ದೇಶದ ಜನರನ್ನು ವಿಭಜಿಸಲು ವ್ಯರ್ಥ ಪ್ರಯತ್ನಗಳು ನಡೆದಿವೆ. ಭಾರತದ (Russian Minister criticizes documentary) ಪ್ರಗತಿಯ ಗುರಿಯನ್ನು ತಡೆಯಲು,

ಅದರ ಧ್ಯೇಯವಾಕ್ಯವಾದ ‘ಏಕ್ ಭಾರತ್, ಶ್ರೇಷ್ಠ ಭಾರತ್’ಕ್ಕೆ ಅಡ್ಡಿ ತರಲು ಇಂಥಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಇಂತಹ ಲಕ್ಷಗಟ್ಟಲೆ ಪ್ರಯತ್ನಗಳ ಹೊರತಾಗಿಯೂ ಅವರು ಯಶಸ್ವಿಯಾಗುವುದಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.


ಈ ಸಾಕ್ಷ್ಯಚಿತ್ರವನ್ನು ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಭಾರತದಾದ್ಯಂತ ಹಲವಾರು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಇಲ್ಲಿಯವರೆಗೂ ಅಧಿಕ ಸಂಖ್ಯೆಯಲ್ಲಿ ಪ್ರದರ್ಶಿಸಿವೆ.

Exit mobile version