AAP ಸಚಿವ ಸತ್ಯೇಂದ್ರ ಜೈನ್ಗೆ ಜೈಲಿನಲ್ಲಿ ಮಸಾಜ್ ; ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ!

New Delhi : ಆಮ್ ಆದ್ಮಿ ಪಕ್ಷದ(Aam Aadmi Party) ಸಚಿವ ಸತ್ಯೇಂದ್ರ ಜೈನ್(Satyendra Jain Gets Treatment) ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಬಿಜೆಪಿ(BJP) ಬಿಡುಗಡೆ ಮಾಡಿದೆ.

ಜೈನ್‌ಗೆ ವಿಐಪಿ ಆತಿಥ್ಯ ನೀಡಿದ್ದಕ್ಕಾಗಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವು ದಿನಗಳ ನಂತರ ಈ ವಿಡಿಯೋ ಹೊರಬಂದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ(Satyendra Jain Gets Treatment) ವಿಐಪಿ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆ ಮಸಾಜ್,

ಪಾದ ಮಸಾಜ್ ಮತ್ತು ಬೆನ್ನಿನ ಮಸಾಜ್‌ನಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಸಚಿವರ ಐಷಾರಾಮಿ ಜೀವನಕ್ಕೆ ಸಂಬಂಧಿಸಿದ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಇದನ್ನೂ ಓದಿ : https://vijayatimes.com/artificial-meat/

ಇನ್ನು ಕರ್ಫ್ಯೂ ಅವಧಿ ಮೀರಿಯೂ ಅಪರಿಚಿತ ವ್ಯಕ್ತಿಗಳು ಜೈನ್‌ಗೆ ಮಸಾಜ್ ಮಾಡುತ್ತಿದ್ದರು.

ಅವರಿಗೆ ವಿಶೇಷ ಆಹಾರ ನೀಡಲಾಗಿದೆ ಎಂದು ಇಡಿ(ED) ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಹೇಳಿದ್ದಾರೆ. ಎಎಸ್‌ಜಿ ಕೆಲವು ಸಿಸಿಟಿವಿ ಚಿತ್ರಗಳನ್ನು ನ್ಯಾಯಾಲಯದೊಂದಿಗೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಮಯ ಜೈನ್ ಆಸ್ಪತ್ರೆಯಲ್ಲಿ ಅಥವಾ ಜೈಲಿನಲ್ಲಿ ವಿವಿಧ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಜೈಲಿನಲ್ಲಿ ವಿವಿಐಪಿ ಆತಿಥ್ಯ.. ಕೇಜ್ರಿವಾಲ್ ಅಂತಹ ಮಂತ್ರಿಯನ್ನು ಸಮರ್ಥಿಸಬಹುದೇ? ಅವರನ್ನು ವಜಾ ಮಾಡಬೇಕಲ್ಲವೇ? ಇದು ಎಎಪಿಯ ನಿಜವಾದ ಮುಖವನ್ನು ತೋರಿಸುತ್ತದೆ”.

ಇದನ್ನೂ ಓದಿ : https://vijayatimes.com/assam-cm-slams-rahul/

ಬಿಜೆಪಿಯ ಶೆಹಜಾದ್ ಅವರು ತಮ್ಮ ಟ್ವೀಟ್‌ನಲ್ಲಿ ಮಸಾಜ್ ಮಾಡುವ ಮತ್ತೊಂದು ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಜೈನ್‌ಗೆ ವಿಶೇಷ ಚಿಕಿತ್ಸೆ ನೀಡಿದ ಆರೋಪಗಳನ್ನು ಆಮ್ ಆದ್ಮಿ ಪಕ್ಷವು ತಳ್ಳಿಹಾಕಿತ್ತು, ಅವುಗಳನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಕರೆದಿತ್ತು.

https://youtu.be/LCKhdJWdt_0 ೪ ವರ್ಷಗಳಿಂದ ಅಭಿವೃದ್ಧಿ ಕಾಣದ ಬೆಂಗಳೂರಿಗೆ ಚುನಾವಣೆಯಿಂದ ಅಭಿವೃದ್ಧಿ ಭಾಗ್ಯ!

ಇದೀಗ ಬಿಜೆಪಿಯು ಆಧಾರಗಳೊಂದಿಗೆ ವಾಗ್ದಾಳಿ ನಡೆಸಿದೆ. ಈ ಕುರಿತು ಇದುವರೆಗೂ ಆಮ್‌ ಆದ್ಮಿ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Exit mobile version