ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಬಾಬುಗೆ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

Vijay babu

ಲೈಂಗಿಕ ದೌರ್ಜನ್ಯ(Sexual Assault) ಪ್ರಕರಣದಲ್ಲಿ ಮಲಯಾಳಂ(Malyalam) ನಟ-ನಿರ್ಮಾಪಕ ವಿಜಯ್ ಬಾಬು(Vijaya Babu) ಅವರಿಗೆ ಕೇರಳ ಹೈಕೋರ್ಟ್(Kerala Highcourt) ನೀಡಿದ್ದ ನಿರೀಕ್ಷಣಾ ಜಾಮೀನನ್ನು(Bail) ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ಆದಾಗ್ಯೂ, ನ್ಯಾಯಾಲಯವು ಕೇರಳ ಹೈಕೋರ್ಟ್ ಆದೇಶದ ವಿಚಾರಣೆಯ ಭಾಗವನ್ನು ಮಾರ್ಪಡಿಸಿದೆ ಮತ್ತು ಅಗತ್ಯವಿದ್ದರೆ ಜುಲೈ 3, 2022 ರ ನಂತರ ನಟನನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ತಿಳಿಸಿದೆ. ಜೂನ್ 27 ರಂದು ಎರ್ನಾಕುಲಂ(Enarkulam) ಸೌತ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದಾಗ ವಿಜಯ್ ಬಾಬು ಅವರನ್ನು ಬಂಧಿಸಲಾಗಿತ್ತು. ಜೂನ್ 22 ರಂದು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ನಟರೂ ಆಗಿರುವ ಮಹಿಳೆಯೊಬ್ಬರು ಚಲನಚಿತ್ರ ಪಾತ್ರಗಳಿಗಾಗಿ ತನ್ನನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು.

ಈ ಹಿಂದೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವಾಗ, ಕೇರಳ ಹೈಕೋರ್ಟ್ ವಿಜಯ್ ಬಾಬುಗೆ ರಾಜ್ಯವನ್ನು ತೊರೆಯದಂತೆ ಮತ್ತು ತಮ್ಮ ಪಾಸ್‌ಪೋರ್ಟ್ ಸಲ್ಲಿಸುವಂತೆ ಕೇಳಿತ್ತು. ಸೋಮವಾರದಿಂದ ಜುಲೈ 3 ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿತ್ತು. ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಅವರಿಗೆ ಬೆಂಬಲವನ್ನು ನೀಡಿ, ನ್ಯಾಯಾಲಯದ ತೀರ್ಪಿನ ನಂತರವೇ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವಿಜಯ್ ಬಾಬು ಏಪ್ರಿಲ್ ಅಂತ್ಯದಲ್ಲಿ ದುಬೈಗೆ ತೆರಳಿದ್ದರು, ಅದೇ ಸಮಯದಲ್ಲಿ ನಟಿಯೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ಕೊಚ್ಚಿ ಪೊಲೀಸರು ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲಿಸಿದ ನಂತರ ನಟ ವಿದೇಶಕ್ಕೆ ತೆರಳಿ, 39 ದಿನಗಳ ಬಳಿಕ ಜೂನ್ 1 ರಂದು ಕೊಚ್ಚಿಗೆ ಮರಳಿದ್ದರು ಎನ್ನಲಾಗಿದೆ.

Exit mobile version