ಕಾವೇರಿ ಕ್ಲೈಮ್ಯಾಕ್ಸ್: ಕರ್ನಾಟಕಕ್ಕೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ

ತಮಿಳುನಾಡಿಗೆ ಪ್ರತಿದಿನ (೧೫ ದಿನ) ೫೦೦೦ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ (SC shocking order to Karnataka) ಕರ್ನಾಟಕಕ್ಕೆ ಆದೇಶ ಹೊರಡಿಸಿದ್ದು, ಇದು ರಾಜ್ಯಕ್ಕೆ ಬಿಗ್

ಶಾಕಿಂಗ್‌ ನ್ಯೂಸ್‌ (Shocking News) ಅಂತಾನೇ ಹೇಳಬಹುದು. ಕಾವೇರಿ ವಿಚಾರದಲ್ಲಿ ಯಾವುದು ಆಗಬಾರದು ಅಂತ ರಾಜ್ಯದ ಜನರು ಬಯಸಿದ್ದರೋ ಈಗ ಅದೇ ಆಗಿದ್ದು, ಕಾವೇರಿ ವಿಚಾರದಲ್ಲಿ

ಸುಪ್ರಿಂಕೋರ್ಟ್‌ ಕರ್ನಾಟಕದ ಪಾಲಿಗೆ ಕರಾಳ ಆದೇಶ ಹೊರಡಿಸಿದೆ.

ಈ ರೀತಿ ಭಾರತದ ಸರ್ವೋಚ್ಛನ್ಯಾಯಾಲಯವು ಕರ್ನಾಟಕದ ಮುಖಕ್ಕೆ ಹೊಡೆದ ಹಾಗೆ ತೀರ್ಪು ನೀಡಿದ್ದು, ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡಬೇಕು ಎಂದು ಆದೇಶಿಸಿದೆ.

ಈ ಆದೇಶದಿಂದ ಕರುನಾಡಿನ ಮೈಸೂರು (Mysore) ಬಯಲುಸೀಮೆ ಹಾಗೂ ಬೆಂಗಳೂರಿನ ಮಂದಿಯ ಪಾಲಿಗೆ ಮರಣ ಶಾಸನವಾಗಲಿದೆಯಾ ಎಂಬ ಆತಂಕ ಜನರಲ್ಲಿ ಮೂಡಿದೆ. ಕರುನಾಡನ್ನು

ಬರದ ಛಾಯೆ ಭೀಕರವಾಗಿ ಆವರಿಸುತ್ತಿದ್ದು, ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಉರುಳಾಗಲಿದೆಯಾ ಅದರಲ್ಲೂ ಕಾವೇರಿ ನೀರನ್ನೇ ನಂಬಿರುವ ರಾಜಧಾನಿ

ಬೆಂಗಳೂರಿನ ಮಂದಿಗೆ ಕುಡಿಯುವ ನೀರಿಗೆ (SC shocking order to Karnataka) ಹಾಹಾಕಾರ ಉಂಟಾಗಲಿದೆ.

ಎಲ್ಲೆಡೆ ಸುಪ್ರೀಂ ಕೋರ್ಟ್‌ ಆದೇಶ ಹೊರ ಬೀಳುತ್ತಿದ್ದಂತೆ ಜನರು ಬೀದಿಗಿಳಿದು ಹೋರಾಟ ಪ್ರಾರಂಭಿಸಿದರು. ರಾಜ್ಯದ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳ ಆಕ್ರೋಶ ಭುಗಿಲೆದಿದ್ದು,

ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕರ್ನಾಟಕಕ್ಕೆ ಹಿನ್ನಡೆ ಆಗಲು ಕಾರಣ ಎಂದು ಸರ್ಕಾರದ ವಿರುದ್ಧವೇ ಜನಾಕ್ರೋಶ ಶುರುವಾಗಿದೆ.

ಈ ಬಾರಿ ರಾಜ್ಯದಲ್ಲಿ ಅತ್ಯಲ್ಪ ಮಳೆಯಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಕಾವೇರಿ

ಜಲಸಂಚಾರ ಪ್ರದೇಶದಲ್ಲಿ ಬರದ ತೀವ್ರತೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ (Tamilnadu) ನೀರು ಬಿಡುವ ಪರಿಸ್ಥಿತಿಯಲ್ಲಿ ರಾಜ್ಯ ಇಲ್ಲ ಅನ್ನೋದು ಅಕ್ಷರಶ: ಸತ್ಯವಾಗಿದೆ.

ಕಳೆದ ಕೆಲ ವರ್ಷಗಳಿಂದ ಸದ್ದಿಲ್ಲದೆ ಅಡಗಿದ್ದ ಕಾವೇರಿ ನೀರಿನ ವಿವಾದ ಈಗ ಮತ್ತೆ ಭುಗಿಲೆದ್ದಿದ್ದು, ಆ.14ರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ (ಕೆಆರ್ ಎಸ್ ಡ್ಯಾಂ) ತಮಿಳುನಾಡಿಗೆ ಕಾವೇರಿ

ನೀರು ಹರಿಸಲಾಗುತ್ತಿದೆ. ಇದು ಮೈಸೂರು, ಮಂಡ್ಯ ಭಾಗದ ರೈತರನ್ನು ಕೆರಳುವಂತೆ ಮಾಡಿದ್ದು, ನೀರು ಹರಿಸುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆಗಳು ಸಹ ನಡೆಯುತ್ತಿದೆ.

ನೀರು ಬಿಟ್ಟ ಮೇಲೆ ಸಭೆ ಕರೆದು ಏನು ಫಲ :ಪ್ರಹ್ಲಾದ್ ಜೋಶಿ
ಸುಪ್ರೀಂ ಆದೇಶಕ್ಕೂ ಮುನ್ನ ಕಾವೇರಿ ನದಿ ನೀರು ಬಿಕ್ಕಟ್ಟು ದೆಹಲಿ ಅಂಗಳ ತಲುಪಿತ್ತು. ದೆಹಲಿಯಲ್ಲಿ ರಾಜ್ಯ ಸಂಸದರ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.

ಸಭೆಯಲ್ಲಿ ಕೇಂದ್ರ ಸಚಿವರು, ಸಂಸದರು ಭಾಗಿಯಾಗಿದ್ದರು. ಈ ಸಭೆಯಲ್ಲಿ ರಾಜ್ಯದ ವಾಸ್ತವ ಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದರೂ ತದ ಬಳಿಕ ಬಿಜೆಪಿ ಸಂಸದರು ರಾಜ್ಯ ಸರ್ಕಾರದ

ವಿರುದ್ಧ ಟೀಕೆಯನ್ನು ಮಾಡಿದರು. ನೀರು ಹರಿಸಿದ ನಂತರ ರಾಜ್ಯದ ಜನರ ಆಕ್ರೋಶಕ್ಕೆ ಹೆದರಿ ಸಭೆ ಕರೆದರೆ ಏನು ಫಲ ಎಂದು ಸಂಸದರು ಆಕ್ರೋಶ ವ್ಯಕ್ತ ಪಡಿಸಿದರು.

ಇನ್ನು ಸಂಸದರ ಹೇಳಿಕೆಗೆ ತಿರುಗೇಟು ನೀಡಿರುವ ಡಿ ಕೆ ಶಿವುಕುಮಾರ್ ಅವರು ಬಿಜೆಪಿಯ ಅಧಿಕಾರದ ಅವಧಿಯಲ್ಲೂ ನೀರನ್ನು ಹರಿಸಲಾಗುತ್ತಿತ್ತು ಎಂದು ಪ್ರತಿಕ್ರಿಯಿಸಿದರು.

ರಾಜ್ಯದಲ್ಲೆಲ್ಲಿದೆ ಅಷ್ಟು ಪ್ರಮಾಣದ ನೀರು ?
ರಾಜ್ಯವು ತಮಿಳುನಾಡಿಗೆ ಆಗಸ್ಟ್.14 ರಿಂದ 16 ರವರೆಗೆ 27,093 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು,ಕೇವಲ 26.811 ಟಿಎಂಸಿ (TMC)ನೀರಿನ ಸಂಗ್ರವಷ್ಟೇ ಇತ್ತು. ಜೊತೆಗೆ ಕಾವೇರಿ ನದಿ ನೀರು ಹಂಚಿಕೆ

ವಿಚಾರದಲ್ಲಿ ಎದುರಾಗಿದ್ದ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯದ ಹಿತ ಕಾಪಾಡುವ ದೃಷ್ಟಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ನಿರ್ಧಾರಗಳ ಕುರಿತಾಗಿ ಸಾಲು ಸಾಲು

ಸಭೆಯನ್ನ ಸಿದ್ದರಾಮಯ್ಯನವರ ಸರ್ಕಾರ ಮಾಡಿದ್ದರು ಕಾವೇರಿ ನದಿ ನೀರು ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಮಾಡಿತ್ತು .

ಆ ಆದೇಶದ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಆದೇಶದಲ್ಲಿ ಕರುನಾಡಿಗೆ ಹಿನ್ನೆಡೆ ಮತ್ತೆ ಭುಗಿಲೆದ್ದ ಆಕ್ರೋಶ
KRSನಿಂದ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿದ್ದು, CWMA ಆದೇಶದಲ್ಲಿ ಮಧ್ಯ ಪ್ರವೇಶಿಸಲ್ಲ ಎಂದು ಹೇಳಿರುವ ಸುಪ್ರೀಂ, CWMA ಆದೇಶ ಪಾಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ಹೊರಡಿಸಿದೆ. ಮುಂದಿನ 15 ದಿನಗಳವರೆಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶಿಸಿದ್ದು, 15 ದಿನಕ್ಕೆ

ಸಭೆ ನಡೆಸುವಂತೆ ಪ್ರಾಧಿಕಾರಕ್ಕೆ ಸುಪ್ರಿಂ ಸೂಚನೆಯನ್ನು ನೀಡಿದೆ.

ಸುಪ್ರೀಂ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ಪ್ರಾಣ ಬೇಕಾದರೂ ಬಿಡುತ್ತೇವೆ ಆದರೆ ನೀರು ಮಾತ್ರ ಬಿಡುವುದಿಲ್ಲ ಎಂಬಂತೆ ಹೋರಾಟಗಳು ಶುರುವಾಗಿದೆ.

ಕಾವೇರಿ ಕದನವು ಕರುನಾಡಿನ ಜನತೆಗೆ ಕೆಡುಕಾಗದಿರಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಇದನ್ನು ಓದಿ: ಸನಾತನ ಹೇಳಿಕೆ ; ಉದಯನಿಧಿ ಸ್ಟಾಲಿನ್, ಎ ರಾಜಾ ಸೇರಿ 12 ಜನರಿಗೆ ನೊಟೀಸ್ ಜಾರಿ ಮಾಡಿದ ಸುಪ್ರೀಂಕೋರ್ಟ್

Exit mobile version