ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ : ಶೇ 74.64 ವಿದ್ಯಾರ್ಥಿಗಳು ಉತ್ತೀರ್ಣ – ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್

Bengaluru: 2022-23 ನೇ ದ್ವಿತೀಯ ಪಿಯುಸಿ (PUC) ವಾರ್ಷಿಕ ಪರೀಕ್ಷೆಯ ಫಲಿತಾಂಶವು ಇಂದು ಶುಕ್ರವಾರ ಪ್ರಕಟವಾಗಿದೆ. ಈ ಬಾರಿ ದಕ್ಷಿಣ ಕನ್ನಡ (Daksina Kannada) ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ ಹಾಗೂ ಕೊಡಗು ಜಿಲ್ಲೆ ತೃತೀಯ ಸ್ಥಾನ (Second PUC Exam Result) ಪಡೆದುಕೊಂಡಿದೆ.

ಅಲ್ಲದೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡ 80.25% ರಷ್ಟು ಮಂದಿ ಪಾಸಾಗಿದ್ದಾರೆ.


ಇದೇ ತಿಂಗಳು ಮಾರ್ಚ್ (March) 9 ರಿಂದ 29ರ ವರೆಗೆ ಈ ಪರೀಕ್ಷೆಯು ನಡೆದಿತ್ತು. 2022-23ನೆ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಒಟ್ಟು 7,02,067 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು.

ಈ ಪೈಕಿ 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 74.67% ಫಲಿತಾಂಶವು ದಾಖಲಾಗಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು (95.33%) ಮೊದಲ ಸ್ಥಾನವನ್ನು ಬಾಚಿಕೊಂಡಿದೆ,

ಹಾಗೂ ಉಡುಪಿ (Udupi) ಜಿಲ್ಲೆಯು ( 95.24%) 2ನೇ ಸ್ಥಾನದಲ್ಲಿದ್ದರೆ ಕೊಡಗು (90.55%) ಮೂರನೇ ಸ್ಥಾನ ಪಡೆದುಕೊಂಡಿದೆ ಹಾಗೂ ಯಾದಗಿರಿಗೆ (78.97%)

ಕೊನೆಯ ಸ್ಥಾನ ಸಿಕ್ಕಿದೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರಿತೀಶ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು.


ಶೇಕಡ 80.25% ಪಾಸ್ (Pass) ಆಗುವ ಮೂಲಕ ಈ ಬಾರಿ ಎಂದಿನಂತೆ ಬಾಲಕೀಯರೇ ಮೇಲುಗೈ ಸಾಧಿಸಿದ್ದರೆ,ಮತ್ತು ಬಾಲಕರು 69.05% ಪಾಸ್ ಆಗಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ಒಟ್ಟು 74.79% ಮಕ್ಕಳು ತೇರ್ಗಡೆಯಾಗಿದ್ದಾರೆ ಮತ್ತು 74.63% ನಗರ ಭಾಗದ ವಿದ್ಯಾರ್ಥಿಗಳು (Second PUC Exam Result) ತೇರ್ಗಡೆಯಾಗಿದ್ದಾರೆ.


ಇಂದಿನ ಫಲಿತಾಂಶವನ್ನು ವಿದ್ಯಾರ್ಥಿಗಳು https://karresults.nic.in/ ಈ ವೆಬ್‌ಸೈಟ್‌ನಲ್ಲಿ (Website) ಬೆಳಗ್ಗೆ 11 ಗಂಟೆಯ ನಂತರ ವೀಕ್ಷಿಸಬಹುದು.

ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಏಪ್ರಿಲ್ 27 ಕೊನೆ ದಿನವಾಗಿದೆ, ಮರು ಮೌಲ್ಯ ಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆಗೆ ಅರ್ಜಿ ಸಲ್ಲಿಸುವವರು ಮೇ 8ರ ಒಳಗೆ ಸಲ್ಲಿಸಬೇಕು ಕೊನೆ ದಿನವಾಗಿದೆ .


ಫಲಿತಾಂಶ ಪರಿಶೀಲಿಸುವುದು ಹೇಗೆ?
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ www.karresults.nic.in ಗೆ ಲಾಗಿನ್‌ ಮಾಡಿ ಹೋಮ್‌ ಪೇಜ್‌ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಸಂಬಂಧಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಆ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಹಾಕಿ ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ನಂತರ ಡೌನ್‌ಲೋಡ್ (Download) ಮಾಡಿಕೊಂಡು,ಬೇಕಾದಲ್ಲಿ ಪ್ರಿಂಟ್ ತೆಗೆದುಕೊಳ್ಳಿ.


ಎಷ್ಟು ವಿದ್ಯಾರ್ಥಿಗಳು ಯಾವ ಯಾವ ದರ್ಜೆಯಲ್ಲಿ ಪಾಸ್ ಆಗಿದ್ದಾರೆ?

ಡಿಸ್ಟಿಂಕ್ಷನ್ (Distinction) – 1,09,509

ಪ್ರಥಮ ದರ್ಜೆ – 2,47,315 —

ದ್ವಿತೀಯ ದರ್ಜೆ – 90,014

ತೃತೀಯ ದರ್ಜೆ – 77,371

ಕಲಾ ವಿಭಾಗದಲ್ಲಿ ಒಟ್ಟು 2,20,305 ವಿದ್ಯಾರ್ಥಿಗಳಲ್ಲಿ 1,34,876 ವಿದ್ಯಾರ್ಥಿಗಳು ತೇರ್ಗಡೆಯಾಗಿ ಒಟ್ಟು 61.22% ಫಲಿತಾಂಶ ದಾಖಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು2,40,146 ವಿದ್ಯಾರ್ಥಿಗಳಲ್ಲಿ 1,82,246 ವಿದ್ಯಾರ್ಥಿಗಳು ತೇರ್ಗಡೆಯಾಗಿ 75.89% ಫಲಿತಾಂಶವು ದಾಖಲೆಯಾಗಿದೆ. ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳಲ್ಲಿ 2,07,087 ವಿದ್ಯಾರ್ಥಿಗಳು ಪಾಸ್ ಆಗಿ 85.71% ಫಲಿತಾಂಶ ದಾಖಲಾಗಿದೆ.

Exit mobile version