ಹೋಟೆಲ್ ಮಾಲೀಕರೇ ಎಚ್ಚರ: ಬೆಂಗಳೂರಿನ ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು

Bengaluru: ಬೆಂಗಳೂರಿನ (Security Rules for Blore Hotels) ರಾಮೇಶ್ವರಂ ಕೆಫೆಯಲ್ಲಿ (Rameshwaram Café) ಬಾಂಬ್ ಸ್ಫೋಟ ಪ್ರಕರಣಕ್ಕೆ

ಸಂಬಂಧಿಸಿದಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Bengaluru Hotel Association) ಅಲರ್ಟ್ ಆಗಿದ್ದು, ನಗರದ ಹೋಟೆಲ್​​ಗಳಲ್ಲಿ ಭದ್ರತೆ

ವಿಚಾರವಾಗಿ ಕಟ್ಟೆಚ್ಚರ ವಹಿಸಲು ಹೋಟೆಲ್ (Security Rules for Blore Hotels) ಮಾಲೀಕರು ಮುಂದಾಗಿದ್ದಾರೆ.

ಇದೇ ಮೊದಲ ಬಾರಿಗೆ ಹೋಟೆಲ್​ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಹೋಟೆಲ್

ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ (PC Rao) ನೇತೃತ್ವದಲ್ಲಿ ಅಸೋಸಿಯೇಷನ್ ಸಭೆ ಸೇರಿದೆ.

ಒಂದು ವೇಳೆ ಇದು ಜಾರಿಯಾಗಿದ್ದೇ ಆದರೆ ಇನ್ಮುಂದೆ ಹೋಟೆಲ್​​ಗಳಲ್ಲಿಯೂ ಕಠಿಣ ಭದ್ರತಾ ನಿಯಮಗಳು ಅನ್ವಯವಾಗಲಿವೆ. ಬೇರೆ ರಾಜ್ಯಗಳಲ್ಲಿರುವ

ಭದ್ರತಾ ಕ್ರಮಗಳನ್ನು ಅನುಸರಿಸಲು ಕೂಡ ಚಿಂತನೆ ಮಾಡಲಾಗಿದೆ. ಹೋಟೆಲ್ ತಜ್ಞರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಸಂಬಂಧ

ಹೋಟೆಲ್ (Hotel) ಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಏನೆಲ್ಲಾ ಕಠಿಣ ಭದ್ರತಾ ನಿಯಮಗಳು ಜಾರಿಯಾಗಲಿವೆ?
ಅನುಮಾನ್ಪದ ಗ್ರಾಹಕರನ್ನು ವಾಚಿಂಗ್ ಮಾಡಲು ಸ್ಪೇಷಲ್ ಸಿಬ್ಬಂದಿಗಳನ್ನ ನೇಮಿಸುವುದು
ಹೈ ಟೆಕ್ನಿಕ್ ಸಿಸಿಟಿವಿ ಕ್ಯಾಮರಗಳ ಅಳವಡಿಕೆ ಹೆಚ್ಚಿಸುವುದು
ಹೋಟೆಲ್​ಗಳಲ್ಲಿಯೂ ಪೊಲೀಸ್ (Police) ಮಾರ್ಗಸೂಚಿ ಅನುಸರಿಸುವುದು
ಬ್ಯಾಗ್​​ಗಳನ್ನ ಹೊರಗಿಟ್ಟು ಗ್ರಾಹಕರು ಒಳಗೆ ಬರುವಂತೆ ನಿಯಮ ರೂಪಿಸಿವುದು

ಹೋಟೆಲ್​​ಗಳಲ್ಲಿ ಸೈರನ್ ಅಳವಡಿಸುವುದು
ಮೈಕ್ ವಾಕ್ ಟಾಕಿ ಅಳವಡಿಸುವುದು
ಪೈರಿಸ್ಟಿಂಗ್ ಮಿಷನ್ ಅಳವಡಿಸಿಸುವುದು
ಪೋಲಿಸ್ ನಂಬರ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಯ ನಂಬರ್ ನೋಟಿಸ್ (Notice) ಬೋರ್ಡ್​ಮೇಲೆ ಹಾಕುವುದು
ಮೆಟಲ್ ಸ್ಕ್ರೀನಿಂಗ್ ಅಳವಡಿಸುವುದು

ಸಣ್ಣಪುಟ್ಟ ಹೋಟೆಲ್​​ಗಳಿಗೆ ಹೊರೆಯಾಗದಂತೆ ನಿಯಮವಳಿಗಳನ್ನು ಜಾರಿಗೊಳಿಸಲಾಗುವುದು ಎಂದು ಪಿಸಿ ರಾವ್ ತಿಳಿಸಿದ್ದಾರೆ. ಆದರೆ, ಕಡ್ಡಾಯವಾಗಿ

ಪ್ರತಿಯೊಂದು ಹೋಟೆಲ್‌ಗಳು ಸಿಸಿಟಿವಿ ಕ್ಯಾಮರಾ (CCTV) ಅಳವಡಿಕೆ‌ ಮಾಡಲೇಬೇಕು ಎಂದು ಅಸೋಸಿಯೇಷನ್ ಹೇಳಿದೆ. ಭದ್ರತೆ ಹಾಗೂ ಗ್ರಾಹಕರ

ಸುರಕ್ಷತಾ ದೃಷ್ಟಿಯಿಂದ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲು ಹೋಟೆಲ್ ಅಸೋಸಿಯೇಷನ್ (Hotel Association) ಮುಂದಾಗಿದೆ.

ಇದನ್ನು ಓದಿ: ಶಾಸಕರು, ಸಂಸದರು ಲಂಚ ಪಡೆದರೆ ಯಾವುದೇ ರಕ್ಷಣೆ ಇಲ್ಲ: ಸುಪ್ರೀಂ ಮಹತ್ವದ ತೀರ್ಪು

Exit mobile version