‘ಟೂರ್ನಿ ಶ್ರೇಷ್ಠ ಪ್ರಶಸ್ತಿ’ ವಿರಾಟ್ ಕೊಹ್ಲಿ ಪಡೆಯಬಲ್ಲ ಸಾಧ್ಯತೆಯಿಲ್ಲ ಎಂದ ಶೇನ್ ವಾಟ್ಸನ್.

2023 ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯಬಲ್ಲ ಆಟಗಾರನನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಶೇನ್ ವಾಟ್ಸನ್ ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ(Virat Kohil) , ಜಸ್ಪ್ರೆತ್ ಬೂಮ್ರಾ, ತನ್ನ ದೇಶದ ಆಟಗಾರರಾದ ಡೇವಿಡ್ ವಾರ್ನರ್ ಅವರನ್ನು ಬಿಟ್ಟು ಭಾರತದ ರೋಹಿತ್ ಶರ್ಮರನ್ನು (Rohit Sharma) ಆಯ್ಕೆ ಮಾಡಿದ್ದಾರೆ. ರೋಹಿತ್ 5 ಪಂದ್ಯಗಳಿಂದ 311 ಗಳಿಸಿದ್ದಾರೆ, ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ ಎಂದು ವಾಟ್ಸನ್ ಹೇಳಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಏಕದಿನ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಜಾಸ್ಪ್ರೆತ್ ಬೂಮ್ರಾ (Jasprit Bumrah) , ತನ್ನ ದೇಶದ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಅದ್ಭುತ ಫಾರ್ಮನಲ್ ಇದ್ದಾರೆ ಮತ್ತು ಡಿಕಾಕ್, ಕೊಹ್ಲಿ, ಹಾಗೂ ಡೇವಿಡ್ ವಾರ್ನರ್ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಗಳ ಸಾಲಿನಲ್ಲಿ ಅಗ್ರ ಮೂರನೇ ಸ್ಥಾನದಲ್ಲಿದ್ದರೂ, ಅಷ್ಟೇ ಅಲ್ಲದೆ ಆಡಂ ಚಂಪಾ(Ada Champa), ಮಿಸ್ಚಲ್ ಸ್ಯಾಂಟ್ನರ್, ಹಾಗೂ ಜಾಸ್ಪ್ರೆತ್ ಬೂಮ್ರಾ ಹೆಚ್ಚು ವಿಕೆಟ್ ಗಳನ್ನು ಪಡೆದ ಬೋಲರ್ ಗಳಾದರೂ ಅವರನ್ನು ಲೆಕ್ಕಿಸದೆ ರೋಹಿತ್ ಶರ್ಮ ರನ್ನು ಹೊಗಳಿದ್ದಾರೆ.

ರೋಹಿತ್ ಶರ್ಮ ಆಟ ನೋಡಲು ಅದ್ಭುತ : ಶೇನ್ ವ್ಯಾಟ್ಸನ್
2023ರ ವಿಶ್ವಕಪ್ ಏಕದಿನ ಟೂರ್ನಿಯಲ್ಲಿ ರೋಹಿತ್ ಶರ್ಮ ರವರ ಬ್ಯಾಟಿಂಗ್ (Batting) ನೋಡುವುದೇ ಕಣ್ಣಿಗೆ ಹಬ್ಬ, ಹಿಟ್ಮ್ಯಾನ್ ಸಾಮರ್ಥ್ಯವನ್ನು ಬೌಲರ್ಗಳನ್ನು ದಂಡಿಸುವ ಮೂಲಕ ಪ್ರದರ್ಶಿಸುತ್ತಾರೆ. ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. ” ನನ್ನ ಪ್ರಕಾರ ಈ ಸಾಲಿನ ವಿಶ್ವಕಪ್ ಟೂರ್ನಿಯಾ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ರೋಹಿತ್ ಶರ್ಮಾ ಸ್ವೀಕರಿಸಲಿದ್ದಾರೆ ಅವರು ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ ವಿಶ್ವ ಶ್ರೇಷ್ಠ ಬೌಲರ್ಗಳ ಎದುರು ಮೊದಲೇ ಸತ್ಯದಿಂದಲೂ ಸಿಡಿಲು ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ರೋಹಿತ್ ಶರ್ಮ ನೀಡುತ್ತಿದ್ದಾರೆ ಎಂದು ವ್ಯಾಟ್ಸನ್ ತಿಳಿಸಿದ್ದಾರೆ.

ರೋಹಿತ್ ಶರ್ಮ ಹೀಗೆ ಸಿಕ್ಕಿರುವ ಉತ್ತಮ ಆರಂಭವನ್ನು ಮುಂದುವರಿಸಿದರೆ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಖಂಡಿತ ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ಅವರೇ ನನ್ನ ಪಾಲಿನ ನಂಬರ್ 1 ಬ್ಯಾಟ್ಸ್ ಮ್ಯಾನ್ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಗುಣಗಾನ ಮಾಡಿದ್ದಾರೆ. ಈ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮ 5 ಪಂದ್ಯಗಳಿಂದ 133.48 ಸ್ಟ್ರೈಕ್ ರೇಟ್ (Strile Rate) ನಲ್ಲಿ 311 ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮ್ಯಾನ್ ಗಳ ಸಾಲಿನಲ್ಲಿ ಆರನೇ ಸ್ಥಾನ ಅಲಂಕರಿಸಿದ್ದಾರೆ.

ಭಾರತ ಈ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕಗಳನ್ನು ಗಳಿಸಿದೆ ಜೊತೆಯಲ್ಲಿ ಉತ್ತಮ ರನ್ ರೆಡ್ (+1353) ನಂದಿಗೆ ಟೀಮ್ ಇಂಡಿಯಾ (Team India) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ. ಅಕ್ಟೋಬರ್ 29 ಭಾನುವಾರ ಲಕ್ನೋ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಈಗಾಗಲೇ ಸೆಮಿ ಫೈನಲ್ ರೇಸ್ ನಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಭಾರತ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾರವರು ಉತ್ತಮ ಪ್ರದರ್ಶನವನ್ನು ತೋರುವ ಉಮ್ಮಸ್ಸಿನಲ್ಲಿದ್ದಾರೆ.

ಧನಂಜಯ್

Exit mobile version