ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಪಶು ಇಲಾಖೆ ಖಾಲಿ ಖಾಲಿ : ಹಲವು ವರ್ಷಗಳಿಂದ ಭರ್ತಿಯಾಗದ 413 ಹುದ್ದೆಗಳು !

Shimoga: ಮಲೆನಾಡು ಶಿವಮೊಗ್ಗ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ (Shimoga Veterinary department vacant) ಸಿಬ್ಬಂದಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ.

ಪ್ರತಿ ವರ್ಷ ಇಲಾಖೆಗೆ ಹಲವಾರು ಹೊಸ ಯೋಜನೆಗಳ ಸೇರ್ಪಡೆಗಳ ಹೊರತಾಗಿಯೂ, ಮಂಜೂರಾದ ಅರ್ಧದಷ್ಟು ಹುದ್ದೆಗಳು ದೀರ್ಘಕಾಲದವರೆಗೆ ಭರ್ತಿಯಾಗದೆ ಉಳಿದಿವೆ.

ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದ ಹೊಣೆಯನ್ನು ಪ್ರಸ್ತುತ ಇರುವ ಸಿಬ್ಬಂದಿಗಳೇ ಹೊತ್ತಿದ್ದಾರೆ ಆದರೆ, ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಸಾಧ್ಯವಾಗುತ್ತಿಲ್ಲ.

ಜಿಲ್ಲೆಯ ಹಲವು ತಾಲೂಕುಗಳಲ್ಲಿ ನಾಲ್ಕೈದು ಪಶು ಆಸ್ಪತ್ರೆಗಳಿಗೆ ಒಬ್ಬರೇ ವೈದ್ಯರು ಲಭ್ಯವಿದ್ದು, ಈ ವೈದ್ಯರು ವಾರಕ್ಕೊಮ್ಮೆ ಆಸ್ಪತ್ರೆಗಳಿಗೆ ಭೇಟಿ ನೀಡಿ ತಮ್ಮ ಕೈಲಾದ ಆರೈಕೆಯನ್ನು ನೀಡುತ್ತಾರೆ.

ಇದನ್ನೂ ಓದಿ : ಜೂನ್ 16 ರಂದು ಚಾಲನೆ ಆಗಬೇಕಿದ್ದ ಗೃಹಲಕ್ಷ್ಮೀ ಯೋಜನೆ ಮುಂದೂಡಿಕೆ

ಜಾನುವಾರುಗಳಿಗೆ ರೋಗ ಬಂದಾಗ ಅನೇಕ ಕಡೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ ಆದ್ದರಿಂದ ಹಲವೆಡೆ ಜಾನುವಾರುಗಳು ಮೃತಪಟ್ಟಿವೆ. ಇದರಿಂದ ರೈತರು ಅಧಿಕಾರಿಗಳ

ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಹೊರತಾಗಿಯೂ, ಅನೇಕ ಆಸ್ಪತ್ರೆಗಳಲ್ಲಿ ಒಬ್ಬ ವೈದ್ಯರೇ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಆದ್ದರಿಂದ ಅವರ ಮೇಲೆ ಗೂಬೆ

ಕೂರಿಸುವುದರಲ್ಲಿ ಅರ್ಥವಿಲ್ಲ ಎಂದು ರೈತರು ಸಮಾಧಾನ ಮಾಡಿಕೊಳ್ಳುವಂತಹ ಪರಿಸ್ಥಿತಿ (Shimoga Veterinary department vacant) ಬಂದಿದೆ.

ಕುರಿ, ಮೇಕೆ, ದನ ಹಾಗೂ ಕರುಗಳಿಗೆ ಕಾಲಕಾಲಕ್ಕೆ ಲಸಿಕೆ (Vaccine) ಹಾಕಲಾಗುತ್ತಿಲ್ಲ.ಇನ್ನೂ ಹಲವೆಡೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ಹಾಕಿಸಿಕೊಳ್ಳಲು ದೂರದ ಕೇಂದ್ರಗಳಿಗೆ ತೆರಳುತ್ತಿದ್ದಾರೆ.

ಶಿವಮೊಗ್ಗ ಮಲೆನಾಡು (Malnadu) ಪ್ರದೇಶ ಇಲ್ಲಿ ಕೃಷಿ ಆಧಾರಿತ ಚಟುವಟಿಕೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ

ಹೊಣೆಯೂ ಇಲಾಖೆ ಮೇಲಿದೆ. ಆದರೆ, ಅಂತಹ ಕೆಲಸ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೆ ಏನು ಮಾಡಲು ಸಾಧ್ಯ.

ಇದನ್ನೂ ಓದಿ : ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ

ಜಿಲ್ಲೆಯ ಪಶು ಇಲಾಖೆಯಲ್ಲಿ 682 ಮಂಜೂರಾದ ಹುದ್ದೆಗಳಿದ್ದು, ಕೇವಲ 269 ಉದ್ಯೋಗದಲ್ಲಿರುವ ಸಿಬ್ಬಂದಿ ಇದ್ದಾರೆ. ಅಂದರೆ 413 ಹುದ್ದೆಗಳು ಖಾಲಿ ಇವೆ. ಈ ಪ್ರದೇಶದಲ್ಲಿ 639,216 ಜಾನುವಾರುಗಳಿವೆ.

167 ಪಶು ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಂಜೂರಾದ 121 ಪಶುವೈದ್ಯಾಧಿಕಾರಿ ಹುದ್ದೆಗಳಲ್ಲಿ 86 ಹುದ್ದೆ ಭರ್ತಿಯಾಗಿದ್ದು, 35 ಖಾಲಿ ಇವೆ. ತಾಂತ್ರಿಕ ಸಿಬ್ಬಂದಿ ವರ್ಗ 265 ಹುದ್ದೆಗಳ ಪೈಕಿ 123

ಭರ್ತಿಯಾಗಿದ್ದು, 142 ಖಾಲಿ ಇವೆ. 27 ಲಿಪಿಕ ಸಿಬ್ಬಂದಿ ವರ್ಗ ಹುದ್ದೆಯಲ್ಲಿ 17 ಹುದ್ದೆಗಳು ಭರ್ತಿಯಾಗಿದ್ದು, 10 ಹುದ್ದೆಗಳು ಖಾಲಿ ಇವೆ. 269 ​​ಡಿ.ದರ್ಜೆ ನೌಕರರ ಪೈಕಿ 43 ಹುದ್ದೆಗಳು ಭರ್ತಿಯಾಗಿದ್ದು, 226 ಖಾಲಿ ಇವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹುದ್ದೆಗಳ ವಿವರ

167- ಪಶು ಆರೋಗ್ಯ ಕೇಂದ್ರಗಳು
682-ಮಂಜೂರಾದ ಹುದ್ದೆ
269- ಭರ್ತಿಯಾದ ಹುದ್ದೆ
413 -ಖಾಲಿ ಉಳಿದ ಹುದ್ದೆ

ರಶ್ಮಿತಾ ಅನೀಶ್

Exit mobile version