ಹುಟ್ಟುಹಬ್ಬ ಶುಭಾಶಯ ಬೇಡ : ನನ್ನ ಜನ್ಮದಿನ ನನಗೇ ಸರಿಯಾಗಿ ಗೊತ್ತಿಲ್ಲ, ಆಗಸ್ಟ್‌ 3 ಮತ್ತು ಆಗಸ್ಟ್‌ 12 ಎರಡೂ ಕೂಡ ತಪ್ಪು

Mysore: ನನ್ನ ಜನ್ಮದಿನ ನನಗೇ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಯಾವ ಆಸಕ್ತಿ ಕೂಡ (siddaramaiah about his birthday) ನನಗಿಲ್ಲ. ಆಗಸ್ಟ್ 3 ಮತ್ತು ಆಗಸ್ಟ್ 12

ಎರಡೂ ಸಹ ತಪ್ಪು ದಿನಾಂಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಆಗಸ್ಟ್ 3, 1947 ದಾಖಲೆಗಳ ಪ್ರಕಾರ ನನ್ನ ಜನ್ಮ ದಿನಾಂಕ. ಆದರೆ,

ಎರಡೂ ದಿನಾಂಕ ಕೂಡ ಸರಿಯಲ್ಲ (siddaramaiah about his birthday) ಎಂದು ಹೇಳಿದರು.

ಮೈಸೂರಿನಲ್ಲಿ(Mysore) ಹುಟ್ಟುಹಬ್ಬದ ಕುರಿತು ಮಾತನಾಡಿದ ಅವರು, ಆಗಸ್ಟ್ 3 ಮತ್ತು ಆಗಸ್ಟ್ 12 ಎರಡೂ ತಪ್ಪು ದಿನಾಂಕಗಳಾಗಿವೆ. ಒಂದನ್ನು ನನ್ನ ಮೇಷ್ಟ್ರು ಬರೆದಿದ್ದಾರೆ. ಇನ್ನೊಂದು ನಮ್ಮ

ತಂದೆ ತಾಯಿ ಯಾವುದೋ ಒಂದು ಡೇಟ್(Date) ಬರೆಸಿರೋದು. ಆದ್ದರಿಂದ ಎರಡೂ ದಿನಾಂಕಗಳು ತಪ್ಪಾಗಿವೆ. ನನ್ನ ಜನ್ಮ ದಿನಾಂಕ ನನಗೆ ಗೊತ್ತಿಲ್ಲ. ಹಾಗಾಗಿ ನನಗೆ ಹುಟ್ಟು ಹಬ್ಬದ ಬಗ್ಗೆ

ಯಾವುದೇ ತರಹದ ಆಸಕ್ತಿ ಕೂಡ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : 1,695 ಅನಧಿಕೃತ ಶಾಲೆಗಳ ವಿರುದ್ಧ ಏಕಾಏಕಿ ಕ್ರಮದ ಬದಲು, ಹಂತ ಹಂತವಾಗಿ ಮುಚ್ಚಲು ಕ್ರಮ

ಅಲ್ಲದೆ, ಗೃಹಲಕ್ಷ್ಮಿ ಯೋಜನೆ(Gruha Lakshmi) ಅನುಷ್ಠಾನದಲ್ಲಿ ವಿಳಂಬವಾದ ಬಗ್ಗೆ ಮಾತನಾಡಿ ನೋಂದಣಿ(Registration) ಪೂರ್ಣಗೊಂಡ ನಂತರ ಗೃಹಲಕ್ಷ್ಮೀ ಯೋಜನೆಯನ್ನು ಹೊರತರಲಾಗುತ್ತದೆ.

1.33 ಕೋಟಿ ಜನರು ಗೃಹಲಕ್ಷ್ಮಿ ಯೋಜನೆಯಾಗಿ ನೋಂದಾಯಿಸಿಕೊಳ್ಳಬೇಕು. ಆದರೆ ಇಲ್ಲಿಯವರೆಗೆ 1.33 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಇನ್ನೂ ಬಾಕಿ ಇದೆ. ನೋಂದಣಿ

ಪ್ರಕ್ರಿಯೆಯು ಪೂರ್ಣವಾಗಿರಬೇಕು. ನಾವು ಆಗಸ್ಟ್(August) ಅಂತ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸುತ್ತೇವೆ. ದಿನಾಂಕವನ್ನು ಮುಂದೂಡಲಾಗಿಲ್ಲ. ಸಮಯ ಮೀಸಲಿಡುವಂತೆ ನಾವು

ರಾಹುಲ್ ಗಾಂಧಿ (Rahul Gandhi) ಅವರನ್ನು ಕೇಳಿದ್ದೇವೆ. ಸಮಯ ನಿಗದಿಯಾಗಿಲ್ಲ ಎಂದರು.

ಬಿಲ್‌ ಬಿಡುಗಡೆ ತನಿಖೆಯಾಗದೇ ಹೇಗೆ ಸಾಧ್ಯ?
ಗುತ್ತಿಗೆದಾರರ ಬಿಲ್ ಬಾಕಿ ವಿಚಾರಕ್ಕೆ ಪ್ರತಿಕ್ರಿಯೆಯಾಗಿ, 40% ಕಮಿಷನ್ ಅನ್ನು ಟ್ರ್ಯಾಕ್ (Track) ಮಾಡದೆ ಆದೇಶವನ್ನು ಬಿಡುಗಡೆ ಮಾಡಲು ಹೇಗೆ ಸಾಧ್ಯ? ಸದ್ಯ ತನಿಖೆ ನಡೆಯುತ್ತಿದೆ. ತಪ್ಪು ಮಾಡದ ಜನರಿಗೆ

ಬಿಲ್‌ಗಳ(Bill) ಸಮಸ್ಯೆ ಇರುವುದಿಲ್ಲ. ತಪ್ಪು ಮಾಡುವ ಜನರು ಭಯಪಡುತ್ತಾರೆ. ಬಿಜೆಪಿಯವರಿಗೆ(BJP) ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲದ ಕಾರಣ ಹೋರಾಟ

ಮಾಡುತ್ತೇವೆ ಎನ್ನುತ್ತಾರೆ. ಜನರು ಅವರ 40% ಕಮಿಷನ್ ಗಾಗಿಯೇ ಅವರನ್ನು ತಿರಸ್ಕರಿಸಿದರು. ನಾವು ಅಂದು ಮಾಡಿದ ಆರೋಪಗಳನ್ನು ಈಗ ಸಾಬೀತು ಮಾಡಬೇಕು. ಆ ನಿಟ್ಟಿನಲ್ಲಿ ನಾಲ್ಕು ತಂಡಗಳು ತನಿಖೆ

ನಡೆಸುತ್ತಿವೆ. ಮೂರು ವರ್ಷಗಳ ಹಿಂದೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಈಗ ಬಿಲ್‌ಗಾಗಿ ಆತುರವಾದರೆ ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : BBMP ಬೆಂಕಿ: ಕೇಂದ್ರ ಕಚೇರಿ ಆವರಣದ ಲ್ಯಾಬ್‌ನಲ್ಲಿ ಬೆಂಕಿ ದುರಂತ : ಮುಖ್ಯ ಎಂಜಿನಿಯರ್‌ ಸೇರಿ 9 ಮಂದಿ ಸ್ಥಿತಿ ಗಂಭೀರ

ಬಿಬಿಎಂಪಿ(BBMP) ಕಚೇರಿ ಬೆಂಕಿ ಅವಘಡದ ಕುರಿತು ಮಾತನಾಡಿದ ಅವರು, ಗಾಯಾಳುಗಳ ಆರೋಗ್ಯದ ಬಗ್ಗೆ ಕೇಳಿದ್ದೇನೆ. 40% ಕ್ಕಿಂತ ಕಡಿಮೆ ಗಾಯವಾಗಿರುವವರಿಗೆ ಏನೂ ತೊಂದರೆಯಿರುವುದಿಲ್ಲ

ಅವರು ಚೆನ್ನಾಗಿರುತ್ತಾರೆ. ಅವರಲ್ಲಿ ಒಬ್ಬರು 40% ಕ್ಕಿಂತ ಹೆಚ್ಚು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಮಿಳುನಾಡು(Tamil nadu) ಮತ್ತೆ ಕಾವೇರಿ(Cauvery) ನೀರು ಬಿಡುವಂತೆ ಖ್ಯಾತೆ ಆರಂಭಿಸಿದೆ. ಆದರೆ, ನಿರೀಕ್ಷಿತ ಮಟ್ಟದ ಮಳೆ ಈ ಬಾರಿ ಆಗಿಲ್ಲ. ಹೀಗಾಗಿ ಎರಡು ರಾಜ್ಯಗಳು ಕೂಡ ಸಂಕಷ್ಟದ

ಸೂತ್ರವನ್ನು ಪಾಲಿಸಬೇಕಿದೆ. ತಮಿಳುನಾಡು ನೀರು ಬಿಡುವಂತೆ ಆದರೂ ಕೂಡ ಖ್ಯಾತೆ ಶುರು ಮಾಡಿದೆ. ನಮ್ಮ ತಜ್ಞರ ಜೊತೆ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಶ್ಮಿತಾ ಅನೀಶ್

Exit mobile version