ಕೇಂದ್ರ ಬಜೆಟ್ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ : ಕಾಂಗ್ರೇಸ್‌

Bengaluru : ಕೇಂದ್ರ ಸರ್ಕಾರ ಘೋಷಿಸಿದ ಬಜೆಟ್‌ ಸಂಪೂರ್ಣ ಜನ ವಿರೋಧಿ ಬಜೆಟ್‌(Budget), ಬಡವರ ವಿರೋಧಿ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ(siddaramaiah about union budget) ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರವು ತನ್ನ ಜನವಿರೋಧಿ ನೀತಿಗಳನ್ನು ಮುಂದುವರೆಸುತ್ತಿರುವುದರಿಂದ ಕೇಂದ್ರ ಬಜೆಟ್ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್’ ಅಂದ್ರೆ ಶ್ರೀಮಂತರೊಂದಿಗೆ ನಿಲ್ಲುವುದು,

ಬಡವರನ್ನು ನಾಶಮಾಡುವುದು ಎಂಬ ಉದ್ದೇಶವನ್ನು ಇಟ್ಟುಕೊಂಡು ಮಾಡಿದೆ ಎಂದು ಹೇಳಿದ್ದಾರೆ.

ದೇಶದೆಲ್ಲೆಡೆ ಮಾರಕವಾಗಿ ಹಬ್ಬಿದ ಕೋವಿಡ್‌ ವೈರಸ್‌(Covid 19) ನಿಂದ ಜರ್ಜರಿತರಾದ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಯಾವುದೇ ಪರಿಹಾರವನ್ನು ಇಲ್ಲಿಯವರೆಗೂ ಇವರಿಂದ ನೀಡಲು ಸಾಧ್ಯವಾಗಿಲ್ಲ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು 2023-24ರ ಬಜೆಟ್‌ನಲ್ಲಿ ಕಳೆದ ಎಂಟು ವರ್ಷಗಳಿಂದ ಅನುಸರಿಸುತ್ತಿರುವ ‘ಟ್ರಬಲ್-ಎಂಜಿನ್’ ಸರ್ಕಾರದ ‘ಅಮೀರ್ ಕೆ ಸಾಥ್,

ಗರೀಬ್ ಕಾ ವಿನಾಶ್’ ನೀತಿ ಈ ಬಾರಿಯೂ ಮುಂದುವರಿಕೆಯಾಗಿದೆ ಎಂದು ಸಿದ್ದರಾಮಯ್ಯ (siddaramaiah about union budget) ಆರೋಪಿಸಿದರು. ಬಿಜೆಪಿಯದ್ದು ಟ್ರಬಲ್‌ ಇಂಜಿನ್‌ ಸರ್ಕಾರ!

ಕೇಂದ್ರದ ಬಜೆಟ್‌ ಬಡವರ ವಿರೋಧಿಯಾಗಿದೆ. ಬಡವರಿಗೆ ಅಗತ್ಯವಾದ ಯಾವುದೇ ಪ್ರಯೋಜನ ಈ ಬಜೆಟ್‌ ನಲ್ಲಿ ಇಲ್ಲ ಎಂದು ಹೇಳಿದ ಅವರು,

ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 54% ರಷ್ಟು ಕೊಡುಗೆ ನೀಡುವ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ

ಕೃಷಿ ಕ್ಷೇತ್ರಕ್ಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಬಜೆಟ್‌ನಲ್ಲಿ 8,468.21 ಕೋಟಿ ರೂ. ಕಡಿತವಾಗಿದೆ.ಎಂದು ಆರೋಪಿಸಿದರು.

ಈ ಹಿಂದೆ ಹಲವು ಬಾರಿ ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು, ಆದ್ರೆ, ಅದನ್ನು ಮಾಡಲಿಲ್ಲ! ರೈತರ ಸಾಲವನ್ನು ಮನ್ನ ಮಾಡಬಹುದಿತ್ತು.

ಆದರೆ ಆ ಕೆಲಸವನ್ನು ಕೂಡ ಈಡೇರಲಿಲ್ಲ. ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರೂಪಿಸಿದ ಈ ಬಜೆಟ್‌ ಬಡವರ ವಿರುದ್ಧವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್ ಅನ್ನು ವಿರೋಧಿಸಿ, ಆರೋಪಿಸಿದಕ್ಕೆ ರಾಜ್ಯ ಬಿಜೆಪಿ ಯಾವುದೇ ಪ್ರತಿಕ್ರಿಯೇ ನೀಡಿಲ್ಲ.

Exit mobile version