ನಿಂಬೆ ಹಣ್ಣನ್ನು ಹೆಚ್ಚಾಗಿ ಉಪಯೋಗಿಸ್ತಿದ್ದೀರಾ? ಹಾಗಾದ್ರೆ ಇದನೊಮ್ಮೆ ಓದಿ

ಆರೋಗ್ಯಕ್ಕೆ ನಿಂಬೆಹಣ್ಣು ಬಹಳ ಉಪಯೋಗಕಾರಿಯಾಗಿದ್ದು, ಬೇಸಿಗೆಯ (Side effects of overuse lemon) ಬಿಸಿ ಮತ್ತು ಧಗೆಯಿಂದ ಮುಕ್ತಿ ಪಡೆಯಲು ಜನರು ನಿಂಬೆ ನೀರನ್ನು ಹೆಚ್ಚಾಗಿ ಸೇವಿಸುತ್ತಾರೆ.

ಇದು ದೇಹವನ್ನು ತೇವಾಂಶದಿಂದ ಇಡುವುದಲ್ಲದೆ ತೂಕವನ್ನು ಸಹ ನಿಯಂತ್ರಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೆ ಕೆಲವೊಮ್ಮೆ

ನಿಂಬೆ ನೀರನ್ನು ಕುಡಿಯುವುದು ಸಹ ಹಾನಿ ಉಂಟುಮಾಡುತ್ತದೆ. ಹಾಗಾಗಿ (Side effects of overuse lemon) ಅದರ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳೋಣ.

ಅಡ್ಡ ಪರಿಣಾಮಗಳು:
ನಿಂಬೆ ನೀರಿನ ಅತಿಯಾದ ಸೇವನೆಯು ಎದೆಯುರಿಯನ್ನು ಉಂಟುಮಾಡಬಹುದು. ಏಕೆಂದರೆ ಇದು ಪೆಪ್ಸಿನ್, ಪ್ರೋಟೀನ್-ಬ್ರೇಕಿಂಗ್ (Pepsin, protein-breaking) ಕಿಣ್ವವನ್ನು ಸಕ್ರಿಯಗೊಳಿಸುತ್ತದೆ.

ನಿಂಬೆ ನೀರನ್ನು ಸೇವಿಸಿದಾಗ ಮೂತ್ರದ ಮೂಲಕ ಅದು ದೇಹವನ್ನು ನಿರ್ವಿಷಗೊಳಿಸುವುದಲ್ಲದೆ ಈ ಪ್ರಕ್ರಿಯೆಯಲ್ಲಿ ಅನೇಕ ಎಲೆಕ್ಟ್ರೋಲೈಟ್‌ಗಳು ಮತ್ತು ಸೋಡಿಯಂನಂತಹ (Electrolytes and sodium)

ಅಂಶಗಳು ಮೂತ್ರದ ಮೂಲಕ ಬಿಡುಗಡೆಯಾಗುತ್ತವೆ. ಆಗ ನೀವು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸಬಹುದು. ಅತಿಯಾದ ನಿಂಬೆ ಸೇವನೆಯಿಂದ ಪೊಟ್ಯಾಸಿಯಮ್ ಕೊರತೆಗೆ ಕಾರಣವಾಗಬಹುದು.

ಇದರಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ (Vitamin C) ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಹೆಚ್ಚಿಸುವುದಲ್ಲದೆ ಅಪಾಯಕಾರಿಯಾಗಿದ್ದು, ನಿಮ್ಮ ಆಂತರಿಕ ಅಂಗಗಳು ಹಾನಿಗೊಳಗಾಗಬಹುದು.

ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದು, ಇದರ ಹೊರತಾಗಿ ಸಾಕಷ್ಟು ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಹರಳುಗಳ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತದೆ.

ಇದು ಕಿಡ್ನಿ ಸ್ಟೋನ್ (Kidney stone) ಅಪಾಯವನ್ನು ಹೆಚ್ಚಿಸುತ್ತದೆ.

ಇನ್ನು ಹೆಚ್ಚಾಗಿ ನಿಂಬೆ ನೀರು ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ ಮತ್ತು ನಿಂಬೆ ಆಮ್ಲೀಯತೆಯನ್ನು ಹೊಂದಿದೆ. ಇದರಿಂದಾಗಿ ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇದನ್ನು ಓದಿ: ಹೆಚ್.​ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್ ವಾರ್

Exit mobile version