ಕೈ ಸನ್ನೆ, ಬಾಯಿ ಸನ್ನೆಯಿಂದಲೇ ಮಾತನಾಡುತ್ತಾರೆ ಈ ಹಳ್ಳಿಯ ಜನ!

ಅಚ್ಚರಿಗಳ ಆಗರವಾಗಿರುವ ಈ ಪ್ರಪಂಚದಲ್ಲಿ ನಮಗೆ ಗೊತ್ತಿರದ ಅನೇಕ ಅದ್ಭುತ ಹಾಗೂ ನಿಗೂಢ ರಹಸ್ಯಗಳಿವೆ, ಮೂಗಿನ ಮೇಲೆ ಬೆರಳಿಡುವಂತೆ ಮಾಡುವ ಅದೆಷ್ಟೋ ವಿಚಾರಗಳಿವೆ.

ನಮ್ಮ ವಿಶ್ವದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಲ್ಲವೂ ಬದಲಾಗುತ್ತದೆ.

ಭಾಷೆ, ಸಂಸ್ಕೃತಿ, ಜೀವನಶೈಲಿ(Lifestyle), ಆಚರಣೆ ಎಲ್ಲವೂ ಬದಲಾಗುತ್ತದೆ. ಕೆಲವು ಕಡೆಗಳಲ್ಲಿ ನಿಗೂಢ ಸ್ಥಳಗಳು ಹಾಗೂ ಜನರು ವಿಚಿತ್ರವಾಗಿ ಇರುತ್ತಾರೆ.

ಇಂತಹ ವಿಚಿತ್ರ ಜನ ಹಾಗೂ ನಿಗೂಢ ಸ್ಥಳಗಳ ಬಗ್ಗೆ ನಿಮಗೂ ಕುತೂಹಲವಿದ್ದಲ್ಲಿ ಈ ವರದಿ ನೋಡಿ.


ಚೀನಾ(China) ದೇಶದಲ್ಲೊಂದು ಊರಿದೆ. ಇಲ್ಲಿನ ಮಹಿಳೆಯರಿಗೆ ಉದ್ದ ಕೂದಲನ್ನು ಬೆಳೆಸುವುದು ಹಾಗೂ ಅದನ್ನು ಆರೈಕೆ ಮಾಡುವುದು ಬಹಳ ಸುಲಭ.

ಇಂತಹ ಉದ್ದನೆಯ ಕಪ್ಪನೆಯ ಕೂದಲು ಅವರ ಸಂಪ್ರದಾಯದ ಭಾಗವೂ ಆಗಿದೆಯಂತೆ.

ಇವರ ಕೂದಲನ್ನು ನೋಡಿದರೆ ಎಂಥವರೂ ಒಂದು ಕ್ಷಣ ಮೂಕವಿಸ್ಮಿತರಾಗುವುದು ಖಂಡಿತ.

ಇದನ್ನೂ ಓದಿ : https://vijayatimes.com/kamal-haasan-likes-kantara/


ಹೌದು, ದಕ್ಷಿಣ ಚೀನಾದ ಗುಲಿನ್ ನಗರದಿಂದ ಹ್ಯುಂಗ್ಲೌ ಗ್ರಾಮಕ್ಕೆ 2 ತಾಸಿನ ಹಾದಿಯಿದ್ದು,

ಇಲ್ಲಿನ ಎಲ್ಲಾ ಮಹಿಳೆಯರೂ ಐದರಿಂದ ಏಳು ಅಡಿ ಉದ್ದದ ಕೂದಲನ್ನು ಹೊಂದಿರುವುದು ಅತ್ಯಂತ ಸಾಮಾನ್ಯ.

ಕೆಲವೊಮ್ಮೆ ಇವರ ಕೂದಲಿನ ಭಾರ ಬರೋಬ್ಬರಿ 1 ಕೆಜಿ ತೂಗುವುದೂ ಉಂಟು!

ಈ ಮಹಿಳೆಯರ ಕೂದಲಿನ ಕಾರಣದಿಂದಾಗಿಯೇ, ಈ ಗ್ರಾಮ ‘ವಿಶ್ವದ ಅತಿ ಉದ್ದದ ಕೂದಲುಳ್ಳ ಗ್ರಾಮ’ ಎಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಸೇರ್ಪಡೆಯಾಗಿದೆ.

ಯಾವೋ ಜನಾಂಗಕ್ಕೆ ಸೇರಿದ ಈ ಮಹಿಳೆಯರಿಗೆ ಕೂದಲನ್ನು ಬೆಳೆಸುವುದು ಹವ್ಯಾಸವೇನಲ್ಲ, ಬದಲಿಗೆ ಇದೊಂದು ಸಂಪ್ರದಾಯವಂತೆ!

https://fb.watch/gX2zCLlZO2/ ಧೂಳಿನಿಂದ ಕೂಡಿದ ವನಹಟ್ಟಿ ರಸ್ತೆ!

ಈ ಸಂಪ್ರದಾಯದ ಪ್ರಕಾರ, ಹೆಣ್ಣುಮಕ್ಕಳಿಗೆ 17 ರಿಂದ 18 ವರ್ಷವಾದಾಗ ಸಮಾರಂಭವೊಂದನ್ನು ಆಯೋಜಿಸಲಾಗುತ್ತದಂತೆ.

ಆ ಸಮಯದಲ್ಲಿ ಮಾತ್ರವೇ ಅವರ ಕೂದಲನ್ನು ಕತ್ತರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಅಜ್ಜಿ ಅಥವಾ ಮನೆಯ ಹಿರಿಯ ಮಹಿಳೆಯರು ಹುಡುಗಿಯ ಕೂದಲನ್ನು ಕತ್ತರಿಸುತ್ತಾರೆ.

ಈ ಸಮಾರಂಭದ ಮುಖ್ಯ ಉದ್ದೇಶವೇನೆಂದರೆ, ಹುಡುಗಿ ಮದುವೆಯಾಗಲು ಸಿದ್ಧಳಾಗಿದ್ದಾಳೆ ಎನ್ನುವ ಸಂದೇಶ ನೀಡುವುದಂತೆ.

ಅದೇ ಕೊನೆಯಂತೆ, ಆ ಹುಡುಗಿ ಜೀವನದಲ್ಲಿ ಮತ್ತೆಂದೂ ತನ್ನ ಕೂದಲನ್ನು ಕತ್ತರಿಸುವ ಅವಕಾಶವಿಲ್ಲ.

ಯುವತಿಯರ ಮದುವೆಯ ಸಂದರ್ಭದಲ್ಲಿ, ಅವರ ಕತ್ತರಿಸಿದ ಕೂದಲನ್ನು ಗಿಫ್ಟ್ ಬಾಕ್ಸ್ ನಲ್ಲಿಟ್ಟು, ಉಡುಗೊರೆಯಾಗಿ ನೀಡಲಾಗುತ್ತದೆ.

ಇದನ್ನೂ ಓದಿ : https://vijayatimes.com/dalit-woman-water-issue/


ಕೂದಲನ್ನು ಹೀಗೆ ಉದ್ದ ಬೆಳೆಸುವುದಕ್ಕೆ ಒಂದು ವಿಚಿತ್ರವಾದ ಕಾರಣವಿದೆ.

ಉದ್ದ ಕೂದಲೆಂದರೆ, ಕುಟುಂಬದ ಹಿರಿಯರೊಂದಿಗೆ ಬೆಸೆಯುವ ಮಾಧ್ಯಮವೆಂದೇ ಅವರು ಪರಿಗಣಿಸುತ್ತಾರೆ!

ಕೂದಲು ಉದ್ದ ಬೆಳೆಯುತ್ತಿರುವ ಸಮಯದಲ್ಲಿ ಹುಡುಗಿಯರು ತಮ್ಮ ಪೂರ್ವಜರ ಆಶೀರ್ವಾದ ಕೋರುತ್ತಾರೆ.

ಆಶ್ಚರ್ಯವೆಂದರೆ, ಹೀಗೆ ಆಶೀರ್ವಾದ ಕೋರಿದ ಬಳಿಕ ಕೂದಲು ಚೆನ್ನಾಗಿ ಬೆಳೆಯುವುದಷ್ಟೇ ಅಲ್ಲ,

ಅವರಿಗೆ 80 ವರ್ಷವಾಗುವವರೆಗೂ ನೆರೆಯುವುದೇ ಇಲ್ಲ! ಜಡೆಯ ಉದ್ದ ಹೆಚ್ಚಿದ್ದರೆ ಸುಂದರವಾಗಿ ಕಾಣುತ್ತೇವೆ ಎಂಬುದೂ ಕೂಡ ಇಲ್ಲಿರುವವರ ನಂಬಿಕೆ.


ಬೆಂಗ್ ಕಲಾ : ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಬೆಂಗ್ ಕಲಾ ಇಂಡೋನೇಶ್ಯದ(Indonesia) ಬಾಲಿಯಲಿರುವ ಪುಟ್ಟ ಹಳ್ಳಿಯಾಗಿದ್ದು, ಪ್ರವೋಸೋದ್ಯಮಕ್ಕೆ ಜನಪ್ರಿಯವಾಗಿರುವ ಪ್ರದೇಶ.

ಆದರೆ ಈ ಪ್ರದೇಶದಲ್ಲಿ ವಿಚಿತ್ರ ಜನರಿದ್ದಾರೆ, ಇವರು ವಿಚಿತ್ರ ಭಾಷೆಯಲ್ಲಿ ಮಾತನಾಡುತ್ತಾರೆ.

https://youtu.be/OT0-6Mbfd0Q ಎಂ ಈ ಐ ಸರ್ಕಲ್ ನಿಂದ ನಂದಿನಿ ಬಡಾವಣೆ ಗೇ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ

ಇದಕ್ಕೆ ಸೈನ್ ಲ್ಯಾಂಗ್ವೇಜ್ ಎಂದೂ ಕರೆಯುತ್ತಾರೆ. ವಿಚಿತ್ರ ಎಂದರೆ ಕೇವಲ ಕೈ ಸನ್ನೆ ಬಾಯಿ ಸನ್ನೆಯಿಂದಲೇ ಇಲ್ಲಿನ ಜನ ಮಾತನಾಡುತ್ತಾರಂತೆ.

ಇನ್ನು, ಈ ಭಾಷೆಗೂ ಒಂದು ಹೆಸರಿದ್ದು ‘ಕಾಟ ಬೊಲೊಗ್’ ಎಂದೂ ಕರೆಯುತ್ತಾರೆ.

Exit mobile version