Health : ಎಚ್ಚರ! ಈಗಿನ ಯಂಗ್‌ಸ್ಟರ್ಸ್‌ಗೆ(Youngsters) ಈ ಸ್ಮೋಕ್ ಐಸ್ ಕ್ರೀಂ(Smoke ice cream) ತಿನ್ನೋದು ಒಂದು ಕ್ರೇಜ್ ಆಗಿದೆ. ಅದ್ರೆ ಈ ಕ್ರೇಜ್ ನಿಮ್ಮ ಪ್ರಾಣಕ್ಕೇ ಕುತ್ತಾಗಬಹುದು ಜೋಕೆ. ಯಾಕಂದ್ರೆ ಹೀಗೆ ಬಾಯಲ್ಲಿ ಹೊಗೆ ಬಿಟ್ಕೊಂಡು ನೀವು ಐಸ್‌ಕ್ರೀಮು, ಸ್ಟೀಟ್ ಕ್ಯಾಂಡಿ, ಫ್ರೂಟ್ ಬೌಲ್ ತಿನ್ನುತ್ತಾ ಹೋದ್ರೆ ಬೇಗ ಹೊಗೆ ಹಾಕಿಸ್ಕೊಳ್ಬೇಕಾಗುತ್ತೆ ಎಚ್ಚರ!

ಮಕ್ಕಳಿಗೆ ತಿನ್ನಿಸ್ಲೇಬೇಡಿ ಸ್ಮೋಕ್ ಐಸ್ ಕ್ರೀಮ್
ಇಂದಿನ ಮಕ್ಕಳ, ಯುವಕರ ಫೇವರೇಟ್ ಫುಡ್ಡಾಗಿರೋ ಸ್ಮೋಕ್ ಐಸ್ ಅನೇಕರ ಪ್ರಾಣಕ್ಕೆ ಕಂಟಕ ಆಗಿರೋ ವರದಿಗಳು ಬರುತ್ತಿವೆ.
ಅಲ್ಲದೆ ಆಹಾರ ತಜ್ಞರು, ವೈದ್ಯರು ಇದೊಂದು ಅತ್ಯಂತ ಅಪಾಯಕಾರಿ ಆಹಾರ ಅಂತ ಅಭಿಪ್ರಾಯಪಟ್ಟಿದ್ದಾರೆ. ಹಾಗಾದ್ರೆ ಈ ಸ್ಮೋಕ್ ಐಸ್‌ಕ್ರೀಮ್ ಒಳಗೆ ಏನಿದೆ? ಯಾಕೆ ಇದು ಇಷ್ಟೊಂದು ಅಪಾಯಕಾರಿ?
ಈ ಐಸ್‌ಕ್ರೀಮ್ ಹೇಗೆ ಪ್ರಾಣಕ್ಕೆ ಕಂಟಕ ತರುತ್ತೆ? ಅಪಾಯಕಾರಿಯಾಗಿದ್ರೂ ಸಹ ಯಾಕೆ ಜನರಿಗೆ ತಿನ್ನಲು ಕೊಡಲಾಗುತ್ತಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಏನಿದು ನೈಟ್ರೋಜನ್ ಐಸ್ ಕ್ರೀಮ್ :
ನೈಟ್ರೋಜನ್ ಐಸ್ ಕ್ರೀಮ್(Nitrogen ice cream) ಅಥವಾ ಸ್ಮೋಕ್ ಐಸ್‌ಕ್ರೀಮ್ ಅಂದ್ರೆ ದ್ರವರೂಪದ ನೈಟ್ರೋಜನ್(Nitrogen) ಅನ್ನು ಬಳಸಿ ಮಾಡುವ ಐಸ್ ಕ್ರೀಮ್.
ಈ ಐಸ್ ಕ್ರೀಮ್ ವಿಶಿಷ್ಟವಾದ ಕೆನೆ ಮತ್ತು ಮೃದುವಾದ ವಿನ್ಯಾಸವನ್ನು ಹೊಂದಿದ್ದು ಸಾಂಪ್ರದಾಯಕ ಐಸ್ ಕ್ರೀಮ್ ಗಿಂತ ಚಿಕ್ಕದಾಗಿರುತ್ತದೆ ಮತ್ತು ಇದರಲ್ಲಿ ಹೇರಳವಾಗಿ ನೈಟ್ರೋಜನ್ ಅಂಶ ಹೊಂದಿರುವುದರಿಂದ ಹೊಗೆ ಪ್ರಮಾಣ ಹೆಚ್ಚಿರುತ್ತದೆ.
ಇದನ್ನೂ ಓದಿ : https://vijayatimes.com/tejaswisurya-controversial-statement/
ನೈಟ್ರೋಜನ್ ನಮ್ಮ ವಾತಾವರಣದಲ್ಲಿ ದೊರೆಯುವ ಅನಿಲ(Gas). ಇದರ ಉಷ್ಣಾಂಶ -196c -321F ಇರುತ್ತೆ. ಅಂದ್ರೆ ಭಯಾನಕ ಕೋಲ್ಡ್ ಆಗಿರುತ್ತೆ.
ಎಷ್ಟು ಕೋಲ್ಡ್ ಅಂದ್ರೆ ನಾವೇನಾದ್ರೂ ಈ ಅನಿಲದೊಳಗೆ ಕೈಇಟ್ರೆ ಕೈ ಫ್ರೀಜ್ ಆಗಿ ಹೋಗಿಬಿಡುತ್ತೆ. ಎಲೆ ಹಾಕಿದ್ರೆ ಎಲೆ ಕ್ಷಣ ಮಾತ್ರದಲ್ಲಿ ಕೋಲ್ಡ್ ಆಗಿ ಪುಡಿಪುಡಿಯಾಗಿ ಬಿಡುತ್ತೆ.
ಇಷ್ಟೊಂದು ಕೊಲ್ಡ್ ಆಗಿರೋ ಅನಿಲವನ್ನು ಕೊಠಡಿಯ ತಾಪಮಾನಕ್ಕೆ ತಂದಾಗ ಇದು ಹೊಗೆಯ ರೂಪವನ್ನು ಪಡೆದುಕೊಳ್ಳುತ್ತದೆ.
ಇನ್ನು ಈ ನೈಟ್ರೋಜನ್ ಲಿಕ್ವಿಡ್(Liquide) ಅನ್ನು ಫುಡ್ ಇಂಡಸ್ಟ್ರಿಯಲ್ಲಿ ಬಾರಿ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆಹಾರ ಉತ್ಪನ್ನ ಕೊಳೆಯದಂತೆ.
ಯಾವುದೇ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳದಂತೆ ತಡೆಗಟ್ಟಲು ಫ್ರೀಜಿಂಗ್ ಪ್ರಿಸರ್ವೇಟಿವ್(Freezing Preservative) ರೀತಿ ಲಿಕ್ವಿಡ್ ನೈಟ್ರೋಜನ್ ಅನ್ನು ಬಳಸಲಾಗುತ್ತದೆ.

ಇನ್ನು ನಮ್ಮ ಶರೀರ ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಇನ್ನು ನಾವು ಸೇವಿಸುವ ಐಸ್ ಕ್ರೀಮ್ ನಲ್ಲಿ ಬಳಸುವ ನೈಟ್ರೋಜನ್ -196c ಹೊಂದಿರುತ್ತದೆ.
ಇದನ್ನು ಸೇವಿಸುವುದರಿಂದ ಶರೀರದ ತಾಪಮಾನ ಸಡನ್ ಆಗಿ ತಣ್ಣಗಾಗುತ್ತದೆ. ಈ ಅನಿಲ ವಿಪರೀತ ತಣ್ಣಗಿರೋದ್ರಿಂದ ಅನಿಲ ಸ್ಪರ್ಶದಿಂದ ಜೀವಕಣಗಳೇ ಸತ್ತು ಹೋಗಬಹುದು.
ಬಾಯಿ, ಗಂಟಲಿನೊಳಗೆ ಐಸ್ ಬೈಟ್ ಅಂದ್ರೆ ಹುಣ್ಣುಗಳಾಗಬಹುದು.
ಇನ್ನೊಂದು ಗಂಭೀರ ವಿಚಾರವನ್ನು ತಜ್ಞರ ಹೇಳಿದ್ದಾರೆ. ಅದೇನಂದ್ರೆ ಈ ನೈಟ್ರೋಜನ್ ಸೇವನೆ ಅನ್ನ ನಾಳದ ಮೇಲೆ ನೇರವಾದ ಪ್ರಭಾವ ಬೀರುತ್ತೆ.
ದೇಹದೊಳಗೆ ಅತಿ ಕಡಿಮೆ ತಾಪಮಾನವಿರುವ ನೈಟ್ರೋಜನ್ ಸೇರುವುದರಿಂದ ನೆಕ್ರೋಸಿಸ್(Necrosis) ಅಂದರೆ ದೇಹ ಕೊಳೆಯುವ ಅಪಾಯ ಇದೆ ಅಂತ ಎಚ್ಚರಿಸಿದ್ದಾರೆ. .
ಇದನ್ನೂ ಓದಿ : https://vijayatimes.com/shershah-couple-in-dubai/
ಈ ಐಸ್ ತಿಂದ್ರೆ ಸಾವೂ ಬರಬಹುದು!
ಯಸ್ ಈ ಹೊಗೆ ಐಸ್ ಹೊಗೆನೂ ಹಾಕಿಸಬಹುದು ಗೊತ್ತಾ? ಈ ನೈಟ್ರೋಜನ್ ಅನಿಲ ಯಾವುದೇ ವ್ಯಕ್ತಿಯ ದೇಹದೊಳಗೆ ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ಸೇರಿದರೆ ಅದು ರಕ್ತವನ್ನು ಹೆಪ್ಪುಗಟ್ಟಿಸಿ ಆ ವ್ಯಕ್ತಿಯು ಅದೇ ಕ್ಷಣದಲ್ಲಿ ಸಾವನ್ನಪ್ಪ ಬಹುದು.

ಇದು ಈ ನೈಟ್ರೋಜನ್‌ಯುಕ್ತ ಐಸ್‌ಕ್ರೀಮ್‌ನ ಮತ್ತೊಂದು ದುಷ್ಪರಿಣಾಮ.
ಈ ಸ್ಮೋಕ್ ಐಸ್‌ಕ್ರೀಮ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ತಿಂದು ಶರೀರದ ತಾಪಮಾನ ತೀರಾ ಕಡಿಮೆಯಾದ್ರೆ ಇಮ್ನೇಶಿಯ(Amnesia) ಅಂದರೆ ಮೆಮೊರಿ ಲಾಸ್ ಅಂದ್ರೆ ಸ್ಮರಣ ಶಕ್ತಿಯೇ ಮಾಯವಾಗಬಹುದು.
ಈಗ ಗೊತ್ತಾಯ್ತಾ ಈ ಸ್ಮೋಕ್ ಐಸ್ ಕ್ರೀಮ್ ನಿಂದ ಎಷ್ಟೆಲ್ಲಾ ಸಮಸ್ಯೆಗಳಿವೆ ಅಂತ. ಹಾಗಾಗಿ ಪೋಷಕರೇ ಇಂಥಾ ಅಪಾಯಕಾರಿ ಆಹಾರದಿಂದ ಮಕ್ಕಳನ್ನು ದೂರ ಇಡೋದೇ ಒಳ್ಳೆಯದು. ಒಂದು ಕ್ಷಣದ ಖುಷಿಗಾಗಿ,
ಜೀವವನ್ನು ಬಲಿ ಪಡೆಯುವ ಇಂಥಾ ಆಹಾರಗಳನ್ನು ಬ್ಯಾನ್ ಮಾಡಬೇಕು ಅನ್ನೋದು ಸಾರ್ವಜನಿಕರ ಆಗ್ರಹವೂ ಆಗಿದೆ.