ಕೇರಳದ ‘ಪ್ರಖ್ಯಾತ’ ಉರಗ ಸಂರಕ್ಷಕ ವಾವಾ ಸುರೇಶ್‍ಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ!

snake

ಕೇರಳದ ಖ್ಯಾತ ಉರಗ ಸ್ನೇಹಿ ವಾವ ಸುರೇಶ್(Vava Suresh) ವಿಷಯುಕ್ತ ಹಾವಿನ ಕಡಿತಕ್ಕೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ವಾವ ಸುರೇಶ್ ಅವರ ಆರೋಗ್ಯ ಶೀಘ್ರವಾಗಿ ಚೇತರಿಸಿಕೊಳ್ಳಲ್ಲಿ ಎಂದು ಲಕ್ಷಾಂತರ ಉರಗ ಪ್ರೇಮಿಗಳು ಪ್ರಾರ್ಥಸಿಕೊಳ್ಳತ್ತಿದ್ದಾರೆ. ಕಪ್ಪು ಮೈಬಣ್ಣ, ಏತ್ತರದ ದೇಹವುಳ್ಳ ವಾವಾ ಸುರೇಶ್ ಅವರ ಕೆಲಸವೇ ಬಹಳ ಭಯಾನಕವಾದದ್ದು, ತಮ್ಮ ಬಾಲ್ಯದ ಶಾಲಾ ದಿನಗಳನ್ನು ಮೆಲುಕು ಹಾಕಿರುವ ಅವರು ಹೇಳಿಕೊಂಡಿದ್ದು ಹೀಗೆ. ನಾನು ಶಾಲೆಗೆ ಹೋಗೋ ದಾರಿಯಲ್ಲಿ ಬುಸ್ಸೆಂದು ಬುಸುಗುಡೋ ಹಾವಿನ ಶಬ್ದ ಕೇಳಿ ಸಣ್ಣ ಕಡ್ಡಿ ಹಿಡಿದು ಹಾವನ್ನು ಓಡಿಸಲು ಮುಂದಾದಾಗ, ಎಡೆ ಎತ್ತಿದ್ದ ಸರ್ಪ ತನ್ಪಾಡಿಗೆ ಹೊರಟು ಹೋಯಿತು. ಅಂದಿನಿಂದಲೇ ಮಲಬಾರಿ ಜನರ ಮನಸ್ಸು ಗೆದ್ದಿದ್ದೇ ನಾನು. ಹುಡುಗನಾಗಿದ್ದಾಗಲಿಂದಲೇ ಹಾವುಗಳೊಂದಿಗೆ ಬೆರೆಯತೊಡಗಿದೆ, ಹಾವುಗಳೊಂದಿಗೆ ಆಡ ತೊಡಗಿದೆ, ಬುಸುಗುಡೋ ಹಾವಿನ ನಾದವನ್ನ ಕರ್ಣಬುಡಗಳಲ್ಲಿ ಕೇಳತ್ತಿದ್ದೇ . ಬರಬರುತ್ತ ಹಾವಿನ ಜೊತೆ ತುಂಬಾ ಬೆರೆಯತೊಡಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವರ್ಷಗಳಿಂದ ವಾವಾ ಸುರೇಶ್ ಕೇರಳದಲ್ಲಿ ಕಾಳಿಂಗ ಸರ್ಪ ಸೇರಿ ಹಲವು ಹಾವುಗಳ ಸಂರಕ್ಷಕನಾಗಿ ಕಾರ್ಯ ಮಾಡುತ್ತಿದ್ದು, ಹಲವು ಸಂದರ್ಭಗಳಲ್ಲಿ ಇವರು ವಿಷಕಾರಿ ಹಾವುಗಳೊಂದಿಗೆ ನೀಡುತ್ತಿದ್ದ ಪೋಸ್, ಅಸುರಕ್ಷಿತ ಹಾಗೂ ಅವೈಜ್ಞಾನಿಕವಾಗಿ ಹಾವುಗಳನ್ನು ಹಿಡಿಯುತ್ತಿದ್ದ ರೀತಿಯನ್ನು ಹಲವರು ಆಕ್ಷೇಪಿಸುತ್ತಿದ್ದರು. ನಾಗರಹಾವಿನ ದಾಳಿಗೊಳಗಾಗಿರುವ ಈ ವಿಡಿಯೋದಲ್ಲಿಯೂ ಕೂಡ ಅವರ ಸಂರಕ್ಷಕ ವಿಧಾನ ತೀರಾ ಅಸುರಕ್ಷಿತ ಹಾಗೂ ಅವೈಜ್ಞಾನಿಕವಾದ್ದದ್ದಾಗಿದೆ. ಯಾವುದೇ ವನ್ಯಜೀವಿಗಳ ಗುಣ ಸ್ವಭಾವವನ್ನು ನಿಖರವಾಗಿ ಅಂದಾಜಿಸುವುದು ಎಂತಹ ವನ್ಯಜೀವಿ ತಜ್ಞರಿಗೂ ಸಾಧ್ಯವಿಲ್ಲ. ಹಾಗಾಗಿ ಎಷ್ಟೆ ಪರಿಣಿತಿ, ಅನುಭವ ಇದ್ದರೂ ವನ್ಯಜೀವಿಗಳ ಜೊತೆ ಕೆಲಸ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸಬೇಕು.

ಹಾಗೆಯೇ ಹಾವುಗಳು ಸೇರಿ ಯಾವುದೇ ವನ್ಯಜೀವಿಗಳ ಜೊತೆಗೆ ಸಾಹಸ ಪ್ರದರ್ಶನ ಅಥವಾ ಪೋಟೋ, ವಿಡಿಯೋ ಆಸೆಗಾಗಿ ವನ್ಯಜೀವಿಗಳ ರಕ್ಷಣಾ ಕಾರ್ಯಚರಣೆಯನ್ನು ಮಾಡಲು ಹೋದಾಗ ಬಹಳಷ್ಟು ಸಂಧರ್ಭದಲ್ಲಿ ಅನಗತ್ಯ ರಂಜಿತ ಎನಿಸುವಂತಹ‌ ಕೆಲವು ಚಟುವಟಿಕೆಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಆ ಅಂಶಗಳನ್ನು ಮನದಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆ ನಮಗೆಲ್ಲರಿಗೂ ಇದೆ. ಇಂದು ಕೇರಳದ ಖ್ಯಾತ ಹಾವು ಸಂರಕ್ಷಕನಾಗಿ ಖ್ಯಾತಿ ಪಡೆದಿರುವ ವಾವಾ ಅವರಿಗೆ ಹದಿನೈದು ವರ್ಷಗಳಿಂದ ಕೇರಳದ ಮೂಲೆ ಮೂಲೆಯಿಂದ ಜನ ಕರೆಮಾಡಿ ಹಾವು ಹಿಡಿಯಲು ಆಹ್ವಾನಿಸುತ್ತಾರೆ. ಆರಂಭದಲ್ಲಿ ಒಂದಿಷ್ಟು ಆರ್ಥಿಕ ಕಾರಣದಿಂದ ಜನರ ಕರೆಗೆ ಉತ್ತರಿಸಲು ಹಿಂದೇಟು ಹಾಕುತ್ತಿದ್ದರು, ಆದರೆ ಕಳೆದ ಎಂಟು ವರ್ಷದಿಂದ 24 ಘಂಟೆಯು ಹಾವು ಸಂರಕ್ಷಣೆಯ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಯಾವ ಹಣ ನಿರೀಕ್ಷೆ ಮಾಡದೆ ತಮ್ಮ ಕಾರ್ಯವನ್ನು ಉತ್ತಮವಾಗಿ ಮಾಡುತ್ತಿದ್ದಾರೆ.

ತನ್ನ ಕಾರ್ಯವನ್ನ ನಿಸ್ವಾರ್ಥತೆಯಿಂದ ಮಾಡುತ್ತಿರುವ ವಾವಾ ಅವರು, ಸುಮಾರು 11800 ಹಾವಿನ ಮೊಟ್ಟೆಯನ್ನ ರಕ್ಷಿಸಿ ಅದನ್ನ ಕೃತಕವಾಗಿ ಮರಿಮಾಡಿಸಿದ್ದಾರೆ. ಇವರ ಸೇವಗೆ ಹೆಗ್ಗಳಿಕೆಯ ಮಹಾಪೂರವೇ ಹರಿದುಬಂದಿದೆ. ತಮ್ಮ 27 ವರ್ಷದ ಅನುಭವದಲ್ಲಿ ವಿಷ ರಹಿತ, ವಿಷ ಸಹಿತ ಸೇರಿದಂತೆ ಸುಮಾರು 3700 ಪ್ರಭೇದದ ಹಾವುಗಳನ್ನು ರಕ್ಷಿಸಿದ್ದಾರೆ. ಆದರೆ ಹಾವಿನ ಕಡಿತಕ್ಕೆ ಎಷ್ಟೋ ಬಾರಿ ಒಳಗಾಗಿರುವ ವಾವಾ ಸುರೇಶ್ ಅವರು 10 ಬಾರಿ ತೀವ್ರ ನಿಗಾಘಟಕದಲ್ಲಿ, 8 ಬಾರಿ ವೆಂಟಿಲೇಟರ್ನಲ್ಲಿಯೂ ಇದ್ದರು. ಅದೃಷ್ಟವಷಾತ್ ಪ್ರಾಣಪಾಯದಿಂದ ಪಾರಾಗಿ ಬಂದಿದ್ದಾರೆ. ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಶಾಲಾ ಕಾಲೇಜುಗಳಲ್ಲಿ ಹಾವಿನ ಕುರಿತು ಜಾಗೃತಿ ಮೂಡಿಸಿರುವ ಅವರಿಗೆ ಹೆಚ್ಚು ಖ್ಯಾತಿ ಲಭಿಸಿದೆ. ವಾವ ಸುರೇಶ್ ಅವರು ಶೀಘ್ರ ಗುಣಮುಖರಾಗಿ ಹೊರಬರಲಿ ಎಂದು ಆಶಿಸೋಣ.

Exit mobile version