ಸೌಜನ್ಯಾ ಕೇಸ್ ಕ್ಲೋಸಾ? ಈ ಕೇಸ್ ರೀ ಓಪನ್ ಮಾಡಲು ಸಾಧ್ಯವೇ ಇಲ್ವಾ? ದೊಡ್ಡವರ ಪ್ರಭಾವಕ್ಕೆ ಒಳಗಾದ್ರಾ ಗೃಹ ಸಚಿವರು?

ಸೌಜನ್ಯಾ (Soujanya) ಕೇಸ್ ಕ್ಲೋಸ್ ಆಗಿದೆ. ಕೇಸ್ ರೀ ಓಪನ್ (soujanya case reopen) ಮಾಡಲು ಸಾಧ್ಯವಿಲ್ಲ ಇದರಲ್ಲಿ ಸರ್ಕಾರದ ಪಾತ್ರ ಏನು ಇಲ್ಲ ಎಂದು ಗೃಹ ಸಚಿವರಾದ


ಪರಮೇಶ್ವರ್ (Parameshwar) ಅವರು ಈ ಹೇಳಿಕೆ ನೀಡಿದಾಗ ಇದು ಗೃಹ ಸಚಿವರ ನಿಸ್ಸಹಾಯಕತನವೋ ,ಬೇಜವಾಬ್ದಾರಿತನವೋ ಅಥವಾ ಸರ್ಕಾರದ ಒತ್ತಡಕ್ಕೆ ಸಿಲುಕಿ ಬಚಾವಾಗಲು

ಮುಂದಾಗಿದಿಯೋ ಆ ದೇವರಿಗೆ ಗೊತ್ತು. ನಿನ್ನೆ ಧಾರವಾಡದಲ್ಲಿ (Dharwad) ಮಾತನಾಡಿದ ಸಚಿವರು ಸೌಜನ್ಯಾ ಪ್ರಕರಣದ ಬಗ್ಗೆ ನೀಡಿದ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಡ್ಡಿ ಮುರಿದಷ್ಟೇ ಸುಲಭದಲ್ಲಿ ಕೇಸ್ ಕ್ಲೋಸ್ (Case Close) ಎಂದು ಹೇಳಿ ಗೃಹ ಸಚಿವರು ಅಲ್ಲಿಂದ ಕಣ್ಮರೆಯಾದ್ರು .

ಹನ್ನೆರಡು ವರ್ಷ ಕಳೆದರು ತಾರ್ಕಿಕ ಅಂತ್ಯ ಕಾಣದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತು ಹೇಳಿಕೆ ನೀಡುವ ಭರದಲ್ಲಿ ಗೃಹ ಸಚಿವರು. ಮಾನವೀಯತೆ ಮರೆತಿದ್ದಾರಾ. ಇದು ಸೌಜನ್ಯಾಳ

ಪೋಷಕರ ಮನಸ್ಸಿಗೆ ಪರಿಣಾಮ ಬಿರುವುದಲ್ಲದೆ ಜೊತೆಗೆ ರಾಜ್ಯದಲ್ಲಿನ ಲಕ್ಷಾಂತರ ಜನರು ಸೌಜನ್ಯಾ ಪರ ನಿಂತಿದ್ದು, ಅವರ ಆಕ್ರೋಶ ಬೇರೆಯೇ ತಿರುವು ಪಡೆದುಕೊಳ್ಳಬಹುದು ಎಂಬ

ಯೋಚೆನೆಯು (soujanya case reopen) ಇಲ್ಲದಂತಾಯಿತೆ.

ಇನ್ನು ಗೃಹ ಸಚಿವರ ಹೇಳಿಕೆ ನೀಡುವಾಗ ಅವರ ಮಾತಿನಲ್ಲಿ ನಡುಕ ಇದ್ದಂತ್ತಿತ್ತು. ಸೌಜನ್ಯ (Soujanya) ಕೊಲೆ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದ್ದು, ಅದು ಸಾರ್ವಜನಿಕ

ಆಗ್ರಹದಲ್ಲಿದೆ. ಜನರ ಅಭಿಪ್ರಾಯದಲ್ಲಿ ಪರ‌ ವಿರೋಧ ಇದ್ದೇ ಇರುತ್ತೆ. ಅದಕ್ಕೆ ಏನು ಮಾಡಲು ಆಗುವುದಿಲ್ಲ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಹಲವರು ಈ ಕೇಸನ್ನು ಮರು ತನಿಖೆ

ಮಾಡಲು ಒತ್ತಾಯ ಮಾಡುತ್ತಿದ್ದು, ಈ ಕೇಸನ್ನು ಸದ್ಯ ಸರ್ಕಾರ ಓಪನ್ ಮಾಡಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.

ಇವರ ಸ್ನೇಹಿತ ಡೊಲ್ಯಾಂಡ್ ಟ್ರಂಪ್ ಅಲ್ಲಿ ಮಾಡಿದ ತಪ್ಪಿಗೆ ದೋಷಾರೋಪಣೆಗೆ ಒಳಗಾಗುತ್ತಾರೆ.. ಆದರೆ ಇಲ್ಲಿ ನಾವು ; ಮೋದಿ ವಿರುದ್ದ ನಟ ಕಿಶೋರ್ ಟೀಕೆ

ಸೌಜನ್ಯಾ ಪ್ರಕರಣಕ್ಕೆ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಪ್ರಭಾವಿಗಳು ರಕ್ಷಣೆ ಪಡೆಯುತ್ತಿದ್ದಾರೆ ಅನ್ನೋ ಅನುಮಾನಕ್ಕೂ ನಿಮ್ಮ ಮಾತು ಕಾರಣವಾಗುವಂತಿದೆ. ಧಾರವಾಡದಲ್ಲಿ

ಕುಳಿತು ಭಾವನಾತ್ಮಕ ದಾಳಿ ಮಾಡಿ ಸೌಜನ್ಯಾ ಕುಟುಂಬಕ್ಕೂ ಮತ್ತು ರಾಜ್ಯದ ನ್ಯಾಯ ನಿರೀಕ್ಷಿಕರಿಗೆ ಘಾಸಿ ಮಾಡಿರೋ ಗೃಹ ಸಚಿವರು ಕೂಡ ಈ ಕಾನೂನು ಸಲಹೆಯನ್ನ ಕೇಳಬೇಕಿದೆ.

ಕಾನೂನು ಸಲಹೆ :
ಈ ಪ್ರಕರಣದಲ್ಲಿ ಸಿ.ಬಿ.ಐ (CBI) ನ್ಯಾಯಾಲಯವು ವಿಚಾರಣೆ ನಡೆಸಿ ಈ ಕೇಸಿಗೆ ಸಂಬಂಧಪಟ್ಟ ಅಂದರೆ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ತನಿಖಾ ತಂಡಗಳು ಹೆಸರಿಸಿದಂತ

ವ್ಯಕ್ತಿಗೂ ಅಂದ್ರೆ ಸಂತೋಷ್ ರಾವಿಗೂ (Santhosh Rao) ಯಾವುದೇ ಸಂಬಂಧವಿಲ್ಲ ಎಂದು ಖಡಾಖಂಡಿತವಾಗಿ ತನ್ನ ತೀರ್ಪಿನ ಪ್ಯಾರ ಸಂಖ್ಯೆ 142ರಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ನ್ಯಾಯಾಲಯವು

ತನ್ನ ತೀರ್ಪಿನಲ್ಲಿ ಪ್ರಾಥಮಿಕ ತನಿಖಾ ಹಂತದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಅಂದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸರಿಯಾಗಿ ತನಿಖೆಯನ್ನು ನಡೆಸಿಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು.

ಅಲ್ಲದೆ ಕರ್ನಾಟಕ ಅಕ್ಯೂಟಲ್ ಕಮಿಟಿ (Karnataka Acutel Committee) ಮುಂದೆ ಇಟ್ಟು ಸೂಕ್ತವಾದ ಕಾನೂನು ಕ್ರಮವನ್ನು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಜರುಗಿಸಬೇಕೆಂದು ತನ್ನ ತೀರ್ಪಿನಲ್ಲಿ

ಮಹತ್ವದ ಆದೇಶವನ್ನು ನೀಡಿರುತ್ತದೆ. ಅಂದರೆ ಈ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನ್ಯಾಯಾಲಯವು ಖಡಾಖಂಡಿತವಾಗಿ

ತನ್ನ ತೀರ್ಪಿನಲ್ಲಿ ಹೇಳಿದೆ.

ಸಂವಿಧಾನದ ಆರ್ಟಿಕಲ್‌ (Article) 32 ಅಡಿಯಲ್ಲೂ ಸೌಜನ್ಯಳ ಕುಟುಂಬದವರೂ ಅಥವಾ ನೊಂದವರೂ ಸರ್ವೋಚ್ಛ ನ್ಯಾಯಾಲಯಕ್ಕೆ ಒಂದು ಅರ್ಜಿಯನ್ನು ಸಲ್ಲಿಸಿ, ಈ ಪ್ರಕರಣದಲ್ಲಿ

ನ್ಯಾಯೋಚಿತ ತನಿಖೆ ಆಗದೇ ಇರುವುದರಿಂದ ನಮ್ಮ ಮೂಲಭೂತ ಹಕ್ಕು ಮೊಟಕ್ಕಾಗಿದೆ. ಆದ್ದರಿಂದ ಈ ಪ್ರಕರಣವನ್ನು ಪುನರ್ ತನಿಖೆ ನಡೆಸಬೇಕು ಎಂದು ಮೇಲ್ಕಂಡ ಸೆಕ್ಷನ್‌ (Section)

ಮತ್ತು ಆರ್ಟಿಕಲ್‌ ಅಡಿಯಲ್ಲಿ ಕೋರಿಕೊಳ್ಳಲು ಅವಕಾಶವಿದೆ.

ಭವ್ಯಶ್ರೀ ಆರ್.ಜೆ

Exit mobile version