ವಿದೇಶಿ ಸಾಲ ಮರುಪಾವತಿ ಸಾಧ್ಯವಿಲ್ಲ : ಶ್ರೀಲಂಕಾ!

srilanka crisis

ಶ್ರೀಲಂಕಾ(Srilanka) ಆರ್ಥಿಕ ಸ್ಥಿತಿ(Finanacial Crisis) ಮತ್ತಷ್ಟು ಬಿಗಡಾಯಿಸಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಅರಾಜಕತೆಯ ಪರಿಣಾಮ ಆರ್ಥಿಕ ಸ್ಥಿತಿ ಮತ್ತಷ್ಟು ದುರ್ಬಲಗೊಂಡಿದ್ದು, ವಿದೇಶಿ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಘೋಷಿಸಿದೆ. ಶ್ರೀಲಂಕಾದ ವಿದೇಶಿ ವಿನಿಮಯವು ಇಂಧನ, ಆಹಾರ, ಔಷಧಿಗಳನ್ನು ಖರೀದಿಸಲು ಸಾಧ್ಯವಿಲ್ಲದಷ್ಟು ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಇನ್ನು ಶ್ರೀಲಂಕಾ ಸದ್ಯ 3.87ಲಕ್ಷ ಕೋಟಿ ರೂಪಾಯಿಗಳ ವಿದೇಶಿ ಸಾಲವನ್ನು ಪಡೆದಿದೆ. ಒಟ್ಟು ಸಾಲದಲ್ಲಿ ಶೇಕಡಾ10% ರಷ್ಟು ಸಾಲವನ್ನು ಚೀನಾದಿಂದ ಪಡೆದಿದೆ. ಇನ್ನುಳಿದಂತೆ ಜಪಾನ್ ಮತ್ತು ಭಾರತ ಶ್ರೀಲಂಕಾಕ್ಕೆ ಹೆಚ್ಚಿನ ಸಾಲ ನೀಡಿವೆ. 5100 ಕೋಟಿ ಡಾಲರ್ ಮೊತ್ತದ ವಿದೇಶಿ ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಶ್ರೀಲಂಕಾದ ಕೇಂದ್ರೀಯ ಬ್ಯಾಂಕಿನ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

ನಾವು ವಿದೇಶಿ ಸಾಲವನ್ನು ತೀರಿಸಲು ನಮ್ಮ ವಿದೇಶಿ ವಿನಿಮಯ ನಿಧಿಯನ್ನು ಕೂಡಾ ಬಳಸಿದ್ದೇವೆ. ಆದರು ಸಾಲವನ್ನು ತೀರಿಸಲು ನಮಗೆ ಸಾಧ್ಯವಾಗಿಲ್ಲ. ನಮ್ಮ ಕೆಟ್ಟ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ವಿದೇಶಿ ಸಾಲವನ್ನು ತೀರಿಸಲು ನಮಗೆ ಸಾಧ್ಯವಿಲ್ಲ ಎಂದು ಶ್ರೀಲಂಕಾ ಸ್ಪಷ್ಟವಾಗಿ ಹೇಳಿದೆ. ಇನ್ನು ಸಾಲ ತೀರಿಸಲು ಸಾಧ್ಯವಾಗದಿದ್ದರೂ ನಿಮಗೆ ಬೇಕಾದ ನೆರವನ್ನು ನೀಡಲು ನಾವು ಈಗಲೂ ಸಿದ್ದರಿದ್ದೇವೆ ಎಂದು ಚೀನಾ ಹೇಳಿದೆ. ಇನ್ನು ಶ್ರೀಲಂಕಾಗೆ ಕಡಿಮೆ ಬಡ್ಡಿ ದರದಲ್ಲಿ ಮತ್ತಷ್ಟು ಸಾಲ ನೀಡಲು ಭಾರತ ಮತ್ತು ಚೀನಾ ಮುಂದಾಗಿವೆ. ಆದರೆ ಸಾಲ ಮರುಪಾವತಿ ಮಾಡಲು ಬೇರೆ ವಿಧಾನಗಳನ್ನು ನೀಡಲು ಶ್ರೀಲಂಕಾ ಮನವಿ ಮಾಡಿತ್ತು,

ಶ್ರೀಲಂಕಾ ಪ್ರಸ್ತಾಪವನ್ನು ಒಪ್ಪದ ಭಾರತ, ಕಡಿಮೆ ದರದಲ್ಲಿ ಇನ್ನಷ್ಟು ಸಾಲ ನೀಡಲು ಮುಂದಾಗಿದೆ. ಒಟ್ಟಾರೆಯಾಗಿ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. ವಿದೇಶದಿಂದ ಏನನ್ನೂ ಖರೀದಿ ಮಾಡುವ ಸಾಮರ್ಥ್ಯ ಶ್ರೀಲಂಕಾಗೆ ಉಳಿದಿಲ್ಲ. ಹೀಗಾಗಿ ದ್ವೀಪರಾಷ್ಟ್ರದಲ್ಲಿ ಆಹಾರ, ಔಷಧ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆಯೂ ತೀವ್ರ ಮಟ್ಟದಲ್ಲಿ ಹೆಚ್ಚಳವಾಗಿದೆ. ಈ ನಡುವೆ ಭಾರತ ಇಂಧನ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಶ್ರೀಲಂಕಾಕ್ಕೆ ನೆರವಿನ ರೂಪದಲ್ಲಿ ನೀಡಿದೆ.

Exit mobile version