ಅಭಿವೃದ್ಧಿಯ ಹೆಸರಿನಲ್ಲಿ JDS ಹಳೆ ಮೈಸೂರು ಭಾಗದಲ್ಲಿ ಮಾಡಿದ್ದೆಲ್ಲಾ ಜನರ ಲೂಟಿ : ರಾಜ್ಯ ಬಿಜೆಪಿ

Mysuru : ಮುಂಬರುತ್ತಿರುವ 2023ರ ವಿಧಾನಸಭಾ ಚುನಾವಣಾ (state bjp tweeted jds) ಹಿನ್ನೆಲೆ ಹಳೇ ಮೈಸೂರು ಭಾಗಕ್ಕೆ ಭೇಟಿ ನೀಡಿದ ಅಮಿತ್‌ ಶಾ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸ್ಥಳೀಯ ಜನರಿಗೆ ನೀಡಿದ ಭರವಸೆಗಳ ಬಗ್ಗೆ ಸರಣಿ ಟ್ವೀಟ್‌ ಮೂಲಕ ಜನತೆಗೆ ತಿಳಿಸಿದೆ.

ಕೇವಲ ಹಳೆ ಮೈಸೂರು ಭಾಗದ ಜನರಿಂದ ಬದುಕಿರುವ ಪಕ್ಷ ಅವರಿಗೇ ಇಂದು ದ್ರೋಹ ಬಗೆಯುತ್ತಿದೆ.

ಜಿ. ಪಂ.ಯಿಂದ ಹಿಡಿದು ಸಂಸತ್ತಿನ ತನಕ ಹುದ್ದೆ ಹೊಂದಿರುವ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ! ಅಭಿವೃದ್ಧಿಯ ಹೆಸರಿನಲ್ಲಿ ಜೆಡಿಎಸ್‌ ಹಳೆ ಮೈಸೂರು ಭಾಗದಲ್ಲಿ ಮಾಡಿದ್ದೆಲ್ಲಾ ಜನರ ಲೂಟಿ.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ‘ಬಿಯಾಂಡ್ ಬೆಂಗಳೂರು’(state bjp tweeted jds) ಆಶಯದ ಭಾಗವಾಗಿ ಮೈಸೂರು ಭಾಗವನ್ನು ಉದ್ಯಮ,

ಮೂಲಸೌಕರ್ಯ, ಕಲೆ-ಸಂಸ್ಕೃತಿ, ಎಲ್ಲ ರೀತಿಯಲ್ಲೂ ಬೆಳೆಸಲು ಪಣ ತೊಟ್ಟು ದುಡಿಯುತ್ತಾ ಒಡೆಯರು ಕಂಡ ಕನಸಿನ ಮೈಸೂರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಪಕ್ಷಗಳು ಹಳೆ ಮೈಸೂರು ಭಾಗವನ್ನು ಕೇವಲ ತಮ್ಮ ವೋಟ್ ಬ್ಯಾಂಕ್ ನಂತೆ ಉಪಯೋಗಿಸಿಕೊಂಡವು.

ಇಲ್ಲಿನ ಅಭಿವೃದ್ಧಿ ಮರೀಚಿಕೆಯಾಗಿತ್ತು. ಬಿಜೆಪಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’(Sab ka sath sab ka vikas) ಎಂಬ ಅಭಿವೃದ್ಧಿ ಮಂತ್ರದಂತೆ ಮೈಸೂರು ಭಾಗದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಸಾಕಾರಗೊಳಿಸುತ್ತಿದೆ.

ಇದನ್ನೂ ಓದಿ: https://vijayatimes.com/messi-gave-special-gift/

ಒಡೆಯರ ಮೈಸೂರು ಯೋಗದ ತವರೂರು, ಆಯುರ್ವೇದದ ಕೇಂದ್ರ, ಧರ್ಮ-ಸಂಸ್ಕೃತಿಗಳ ಶ್ರದ್ಧಾ ಕೇಂದ್ರ.

ಇದಕ್ಕೆ ಗರಿಯೆಂಬಂತೆ ಈ ಬಾರಿಯ ವಿಶ್ವ ಯೋಗ ದಿನದಂದು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು(Narendra Modi) ಮೈಸೂರಿನಲ್ಲಿ ಯೋಗಾಭ್ಯಾಸದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಮ್ಮೆಲ್ಲರ ಹೆಮ್ಮೆ.

ಒಡೆಯರ್ ರಾಜವಂಶಕ್ಕೆ ಮೈಸೂರು ರಾಜ್ಯದ ಬಗ್ಗೆ ಒಂದು ದೂರದೃಷ್ಟಿ ಇತ್ತು.

ಮೈಸೂರನ್ನು ಸಮೃದ್ಧ, ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ರಾಜ್ಯವಾಗಿಸುವ ಗುರಿಯಿತ್ತು.

ನಮ್ಮ ಸರ್ಕಾರ ಮೈಸೂರು ವಿಮಾನ ನಿಲ್ದಾಣಕ್ಕೆ “ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್”(Nalwadi krishnaraja odeyar) ಅವರ ಹೆಸರನ್ನು ನಾಮಕರಣ ಮಾಡಿ ಅವರ ಕೊಡುಗೆಯನ್ನು ಗೌರವಿಸಿದೆ.

ರಾಜ್ಯದ ರಾಜಧಾನಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ(Mysore) ದಶಪಥಗಳ ಹೆದ್ದಾರಿಯನ್ನು ಘೋಷಿಸಿದ್ದು ನಮ್ಮ ಸರ್ಕಾರ. ಅಲ್ಲದೇ ಇದರ ಕಾಮಗಾರಿಯು ಮುಗಿಯುವ ಹಂತದಲ್ಲಿದೆ.

ಇದು ಈ ಭಾಗದ ಜನರ ಸಂಚಾರ, ವಾಣಿಜ್ಯಾಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ.

ರಸ್ತೆ, ರೈಲು, ವಿಮಾನಯಾನ ಹೀಗೆ ಮೈಸೂರಿನ ಸಾರಿಗೆ ಸಂಪರ್ಕವನ್ನು ಉನ್ನತೀಕರಿಸಲು ನಮ್ಮ ಸರ್ಕಾರ ಹೆಜ್ಜೆಯಿಟ್ಟಿದೆ.

https://vijayatimes.com/amit-shah-visit-to-karnataka/

ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣಾ ಕಾಮಗಾರಿ ಭರದಿಂದ ಸಾಗಿದೆ. ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್’ ರೈಲು(Vande bharat train) ಬೆಂಗಳೂರು-ಮೈಸೂರು-ಚೆನ್ನೈ ಸಂಪರ್ಕಿಸಲಿದೆ.

ಮಂಡ್ಯದ(Mandya) ಕಬ್ಬು ಬೆಳೆಗಾರರ ಜೀವನಾಡಿಯಂತಿದ್ದ ಮೈ ಶುಗರ್ ಕಾರ್ಖಾನೆಯನ್ನು ಮುಚ್ಚಿ ರೈತರ ಕಣ್ಣೀರಿಗೆ ಕಾರಣವಾಗಿದ್ದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು.

ಆದರೆ ನಮ್ಮ ಸರ್ಕಾರವು ಮುತುವರ್ಜಿ ವಹಿಸಿ ‘ಮೈ ಶುಗರ್’ ಅನ್ನು ಮತ್ತೆ ಪ್ರಾರಂಭಿಸಿ ಈ ಭಾಗದ ರೈತರ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಚಾಚಿದೆ.

ಈ ಬಾರಿ, ಮಂಡ್ಯದ ಅಂಬಿಗರಹಳ್ಳಿಯ ‘ಕಾವೇರಿ-ಹೇಮಾವತಿ-ಲಕ್ಷ್ಮಣತೀರ್ಥ’ ನದಿಗಳ ತ್ರಿವೇಣಿ ಸಂಗಮದಲ್ಲಿ ‘ಮಹಾ ಕುಂಭಮೇಳ’ವನ್ನು ನಡೆಸಿದ್ದು ನಮ್ಮ ಸರ್ಕಾರದ ಸಾಂಸ್ಕೃತಿಕ ಬದ್ಧತೆಗೆ ಕೈಗನ್ನಡಿ.

ಮುಂದಿನ ಕುಂಭಮೇಳಕ್ಕೆ ಶಾಶ್ವತ ಮೂಲ ಸೌಕರ್ಯ ಕಲ್ಪಿಸಲು ಸೂಕ್ತ ಯೋಜನೆಯನ್ನೂ ಕೈಗೊಂಡಿದೆ ಎಂದು ಸರಣಿ ಟ್ವೀಟ್‌ ಮೂಲಕ ತಿಳಿಸಿದೆ.

Exit mobile version