Tech News : ದಿನ ನಿತ್ಯ ಜೀವನದಲ್ಲಿ ಈಗ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಹೇಗೆ ಮುಖ್ಯವಾಗಿದೆಯೋ ಹಾಗೆಯೇ ಡೆಬಿಟ್ ಕಾರ್ಡ್ ಸಹ ಆಗಿದೆ ಈ ಡೆಬಿಟ್ ಕಾರ್ಡ್ ಅನ್ನು (stolen SBI debit card) ನಮ್ಮ
ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಹಿಂಪಡೆಯಲು ಬಳಸುತ್ತೇವೆ.ಮತ್ತು ಶಾಪಿಂಗ್ ಮಾಡಿದಾಗ ಹಣ ಪಾವತಿಗೆ ಸಹ ಈ ಡೆಬಿಟ್ ಕಾರ್ಡ್ (Debit Card) ಅನ್ನು ಬಳಸುತ್ತೇವೆ.

ಕೆಲವು ಸಂದರ್ಭಗಳಲ್ಲಿ ನಾವು ಈ ಡೆಬಿಟ್ ಕಾರ್ಡ್ಗಳನ್ನು ಕಳೆದುಕೊಳ್ಳುವ ಸಂದರ್ಭ ಬರುತ್ತದೆ ಅಥವಾ ಕಳುವಾಗುವ ಸಂದರ್ಭ ಬರಬಹುದು. ಅಂತಹ ಸಂದರ್ಭಗಳಲ್ಲಿ ನಿಮ್ಮ ಕಾರ್ಡನ್ನು ಕೆಲವರು ದುರುಪಯೋಗಿಸಿಕೊಳ್ಳುವ
ಸಾಧ್ಯತೆ ತುಂಬಾ ಇರುತ್ತದೆ. ಅಂತಹ ಸಂದರ್ಭದಲ್ಲಿ ತತ್ ಕ್ಷಣಗಳಲ್ಲಿ ನಾವು ಏನು ಮಾಡಬೇಕು? ಕಳುವಾಗಿರುವ ಆ ಡೆಬಿಟ್ ಕಾರ್ಡನ್ನು ಕೂಡಲೇ ನಿಷ್ಕ್ರಿಯಗೊಳಿಸಬೇಕು.
ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್
ಒಂದು ವೇಳೆ ನಿಮ್ಮ ಕಳುವಾಗಿರುವ ಡೆಬಿಟ್ ಕಾರ್ಡ್ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ (SBI) ಡೆಬಿಟ್ ಕಾರ್ಡ್ ಆಗಿದ್ದಾರೆ ಅತ್ಯಂತ ಮೂರು ಸುಲಭ ವಿಧಾನಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು.
ಎಸ್ಬಿಐನ ಎಸ್ಸೆಮ್ಮೆಸ್ ಮತ್ತು ನೆಟ್ಬ್ಯಾಂಕಿಂಗ್ ಮೂಲಕ ಮತ್ತು ಎಸ್ಬಿಐನ ಟಾಲ್ಫ್ರೀ ನಂಬರ್ ಮೂಲಕ ಕಾರ್ಡ್ (stolen SBI debit card) ನಿಷ್ಕ್ರಿಯಗೊಳಿಸಲು ಸಾಧ್ಯ.

ಎಸ್ಬಿಐ ಡೆಬಿಟ್ ಕಾರ್ಡ್ ಅನ್ನು ಟಾಲ್ ಫ್ರೀ ನಂಬರ್ ಮೂಲಕ ಬ್ಲಾಕ್ ಮಾಡುವ ವಿಧಾನ
ಕಳುವಾಗಿರುವ ನಿಮ್ಮ ಎಸ್ಬಿಐ ಡೆಬಿಟ್ ಕಾರ್ಡನ್ನು ಅತ್ಯಂತ ಸುಲಭವಾಗಿ ನಿಷ್ಕ್ರಿಯಗೊಳಿಸುವ ವಿಧಾನ ಎಂದರೆ ಅದು ಟಾಲ್ ಫ್ರೀ ನಂಬರ್ಗೆ ಡಯಲ್ ಮಾಡುವುದು. ನೀವು 1800 4253800 ಅಥವಾ
1800 112211 ನಂಬರ್ಗೆ ಕರೆ ಮಾಡುವ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯ. ಇದರಲ್ಲಿ ನೀವು ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಬ್ಯಾಂಕ್ಗೆ
ಜೋಡಿತವಾದ ನಿಮ್ಮ ಮೊಬೈಲ್ ನಂಬರ್ನಿಂದ ಮಾತ್ರ ಕರೆ ಮಾಡಬೇಕು.
ಎಸ್ಬಿಐ ಡೆಬಿಟ್ ಕಾರ್ಡ್ ಅನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬ್ಲಾಕ್ ಮಾಡುವ ವಿಧಾನ
- ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ onlinesbi.com ಗೆ ಲಾಗಿನ್ ಆಗಿ.
- ನಂತರ ಅಲ್ಲಿ ಇ–ಸರ್ವಿಸ್ ಎಂಬ ಆಯ್ಕೆ ಏರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಇಲ್ಲಿ ನಿಮಗೆ ಎಟಿಎಂ ಕಾರ್ಡ್ ಸರ್ವಿಸ್ ಎಂಬ ಆಯ್ಕೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಬ್ಲಾಕ್ ಎಟಿಎಂ ಕಾರ್ಡ್ ಎಂಬ ಆಯ್ಕೆಯ ಮೇಲೆ ಒತ್ತಿರಿ
- ನಂತರ ಕಾರ್ಡ್ಗೆ ಜೋಡಿತವಾದ ನಿಮ್ಮ ಖಾತೆ ಸಂಖ್ಯೆಯನ್ನು ಆರಿಸಿ.
- ನಿಮ್ಮ ಖಾತೆಗೆ ಸಂಬಂಧಿತವಾಗಿರುವ ಎಲ್ಲಾ ಕಾರ್ಡ್ಗಳ ಪಟ್ಟಿ ಇಲ್ಲಿ ಕಾಣುತ್ತದೆ. ಇದರಲ್ಲಿ ನಿಮಗೆ ಚಾಲ್ತಿಯಲ್ಲಿರುವ,ಬ್ಲಾಕ್ ಆಗಿರುವ, ನಿಷ್ಕ್ರಿಯವಾಗಿರುವ ಎಲ್ಲಾ ಕಾರ್ಡ್ಗಳೂ ಸಹ ಕಾಣುತ್ತವೆ.
- ಇಲ್ಲಿ ನಿಮ್ಮ ಕಾರ್ಡ್ಗಳ ಮೊದಲ ನಾಲ್ಕು ಮತ್ತು ಕೊನೆಯ ನಾಲ್ಕು ಅಂಕಿಗಳು ಕಾಣಿಸುತ್ತವೆ.
- ಬ್ಲಾಕ್ ಮಾಡಬೇಕೆಂದಿರುವ ಕಾರ್ಡನ್ನು ನೀವು ಈ ಪಟ್ಟಿಯಲ್ಲಿ ಆರಿಸಿಕೊಳ್ಳಿ
- ನಂತರ ಬ್ಲಾಕ್ ಮಾಡುವುದಕ್ಕೆ ಕಾರಣ ಏನೆಂದು ಇಲ್ಲಿ ನಮೂದಿಸಿ.
- ನಂತರ, ಸಬ್ಮಿಟ್ ಕೊಡಿ.
ರಶ್ಮಿತಾ ಅನೀಶ್