ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22 ರಂದು ರಾಜ್ಯವ್ಯಾಪಿ ಮುಷ್ಕರಕ್ಕೆ KCC&I ಕರೆ..!

Bengaluru : ಗಣನೀಯ ಪ್ರಮಾಣದಲ್ಲಿ ವಿದ್ಯುತ್ ದರವನ್ನು ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್ (strike on Electricity rate) ಸರ್ಕಾರದ ಕ್ರಮವನ್ನು ಖಂಡಿಸಿ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ

strike on Electricity rate

ಜೂನ್ 22ರಂದು ರಾಜ್ಯವ್ಯಾಪಿ ಮುಷ್ಕಕ್ಕೆ ಕರೆ ನೀಡಿದೆ. ಜೂನ್ 22ರಂದು ನಡೆಯಲಿರುವ ರಾಜ್ಯವ್ಯಾಪಿ ಮುಷ್ಕರದಲ್ಲಿ ಭಾಗವಹಿಸುವಂತೆ ಸಂಘದ ಎಲ್ಲಾ ಸದಸ್ಯರಿಗೆ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್

(Chamber of Commerce) & ಇಂಡಸ್ಟ್ರ ಪತ್ರ ಬರೆದಿದ್ದು, ಜೂನ್ 22 ರಂದು ತಮ್ಮ ವ್ಯಾಪಾರವನ್ನು ಮುಚ್ಚುವಂತೆ ನಾವು ಎಲ್ಲಾ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ವಿನಂತಿಸುತ್ತೇವೆ.

ಎಸ್ಕಾಂನ ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ನಾವು ಈ ಕ್ರಮಕ್ಕೆ ಮುಂದಾಗಿದ್ದೇವೆ. ಕಳೆದ 8 ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದ ಪರಿಣಾಮದ ಗಂಭೀರತೆಯನ್ನು

ರಾಜ್ಯ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಪರಿಹಾರ ದೊರೆಯುತ್ತಿಲ್ಲ.

ಇದನ್ನು ಓದಿ: ಪೋಕ್ಸೊ ಕಾಯ್ದೆಯಡಿ ಪ್ರಧಾನಿ ಮೋದಿ ಕೂಡಾ ಶಿಕ್ಷಾರ್ಹ : ನಟ ಕಿಶೋರ್ ಗಂಭೀರ ಆರೋಪ

ಹೀಗಾಗಿ ಸರ್ಕಾರದ ಗಮನ ಸೆಳೆಯಲು ನಾವು ಈ ಬಂದ್ಗೆ ಕರೆ ನೀಡಿದ್ದೇವೆ. ನಾವು ಪರಿಹಾರವನ್ನು ಕಂಡುಕೊಳ್ಳಲು ಮತ್ತು ವಿದ್ಯುತ್ ಶುಲ್ಕದಲ್ಲಿ ಕಡಿತವನ್ನು ಪಡೆಯಲು ಬಯಸುತ್ತೇವೆ.

ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಪತ್ರದಲ್ಲಿ (strike on Electricity rate) ಬರೆಯಲಾಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್ಸಿ) ಮೇ 12 ರಂದು ರಾಜ್ಯದಲ್ಲಿ ಪ್ರತಿ ಯೂನಿಟ್ (Unit) ವಿದ್ಯುತ್ ದರವನ್ನು 70 ಪೈಸೆ ಹೆಚ್ಚಿಸಿತ್ತು. ಇನ್ನೊಂದೆಡೆ ಇಂಧನ ಮತ್ತು ವಿದ್ಯುತ್ ಖರೀದಿ

ವೆಚ್ಚ ಹೊಂದಾಣಿಕೆ ಶುಲ್ಕ’ (ಎಫ್ಪಿಪಿಸಿಎ) ನೆಪದಲ್ಲಿ ಪ್ರತಿ ಯೂನಿಟ್ಗೆ 51 ಪೈಸೆಯ ಮತ್ತೊಂದು ಹೆಚ್ಚಳವನ್ನು ಘೋಷಿಸಿತು. ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ರಚನೆಯಾದ

ನಂತರ ವಿದ್ಯುತ್ ದರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ.

ನಾವು ವಿದ್ಯುತ್ ದರವನ್ನು ಹೆಚ್ಚಿಸಲು ನಿರ್ಧರಿಸಿಲ್ಲ. ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರವಿದೆ, ಅದು ನಿರ್ಧರಿಸಿದೆ. ನಾವು ಅದನ್ನು ಜಾರಿಗೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ರಾಜ್ಯ ಸರ್ಕಾರದ ಅಡಿಯಲ್ಲೇ ಬರುವ ಸಂಸ್ಥೆಯಾಗಿದ್ದು, ಮುಖುಮಂತ್ರಿ ಸಿದ್ದರಾಮಯ್ಯ (Siddaramaiah) ವಿದ್ಯುತ್ ದರ ಏರಿಕೆಯನ್ನು ತಡೆ ಹಿಡಿಯುವ ಅಧಿಕಾರ

ಹೊಂದಿರುತ್ತಾರೆ. ನೂತನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆ ಮತ್ತು ಕಾಯ್ದೆಗಳನ್ನು ಹಿಂಪಡೆಯುತ್ತಿದೆ.

ಆದರೆ ವಿದ್ಯುತ್ ದರ ಏರಿಕೆ ಹಿಂಪಡೆಯಲು ಸಾಧ್ಯವಿಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

Exit mobile version