ಬೀದಿಗಿಳಿದ ಪದ್ಮಶ್ರೀ : ಹಾಲಕ್ಕಿ ಬದುಕಿನ ಹಕ್ಕಿಗಾಗಿ ಸುಕ್ರಜ್ಜಿ, ತುಳಸಜ್ಜಿ ಹೋರಾಟ

ಹಾಲಕ್ಕಿ ಹಕ್ಕಿಗಾಗಿ ಸುಕ್ರಜ್ಜಿ(Sukrajji), ತುಳಸಜ್ಜಿ(Thulasajji) ಹೋರಾಟ. ಆಳೋ ಸರ್ಕಾರದ ಷಡ್ಯಂತ್ರ ಖಂಡಿಸಿ ಪ್ರತಿಭಟನೆ ಎಸ್‌ಟಿ(Sukrajji and Tulasajji Protest) ಸ್ಥಾನಮಾನ ಕೊಡಲು ಒತ್ತಾಯಿಸಿ ಧರಣಿ .

ಎಂಥಾ ನಾಚಿಕೆಯ ವಿಚಾರ. ಈ ಲಜ್ಜೆಗೆಟ್ಟ ಸರ್ಕಾರಗಳು ನಮ್ಮ ನಾಡಿನ ಹಿರಿಮೆಗಳಾದ ಪದ್ಮಶ್ರೀ(Padmashree awarded) ಪುರಸ್ಕೃತರಾದ ಸುಕ್ರಜ್ಜಿ ಹಾಗೂ ತುಳಸಜ್ಜಿಯನ್ನು ಬೀದಿಗಿಳಿಯುವಂತೆ ಮಾಡಿದೆ.

ದೆಹಲಿಯ ಗಣರಾಜ್ಯೋತ್ಸವ(Republic day) ಪರೇಡ್‌ನಲ್ಲಿ ರಾಜ್ಯದ ಟ್ಯಾಬ್ಲೋದಲ್ಲಿ ಮಿಂಚುತ್ತಿರುವ ನಾಡಿನ ಹೆಮ್ಮೆ ತುಳಸಜ್ಜಿ ತನ್ನ ಜನಾಂಗಕ್ಕೆ ಮೂಲಭೂತ ಸೌಕರ್ಯ ಕೊಡಿ ಅಂತ ಕೋರಿ ಜನವರಿ 25ರಂದು ಧರಣಿ ಕೂರುತ್ತಿದ್ದಾರೆ.
ಇದು ಕರುನಾಡಿನ ದುರಂತವೋ, ನಮ್ಮನ್ನಾಳುವವರ ಷಡ್ಯಂತ್ರವೋ ಗೊತ್ತಿಲ್ಲ.

ನಮ್ಮ ಕರುನಾಡಿನ ಕಣ್ಮಣಿಗಳು, ಇವತ್ತು ಬದುಕಿನ ಹಕ್ಕಿಗಾಗಿ (Sukrajji and Tulasajji Protest) ಬೀದಿಗಿಳಿಯಬೇಕಾದ ಅನಿವಾರ್ಯತೆ ಬಂದಿದೆ. ಹಾಲಕ್ಕಿ ಮಕ್ಕಳ ಹಕ್ಕಿಗಾಗಿ ಸರ್ಕಾರದಿಂದ ಭಿಕ್ಷೆ ಬೇಡುವಂತಾಗಿದೆ.

ಈ ಹಿರಿ ಜೀವಗಳು ಇವತ್ತು ಹೋರಾಟದ ಹಾದಿ ಹಿಡಿಯಲು ಮುಖ್ಯ ಕಾರಣ, ಸರ್ಕಾರದ ಮಹಾ ವಂಚನೆ , ದಿವ್ಯ ನಿರ್ಲಕ್ಷ್ಯ, ಆಳುವವರ ಕ್ರೂರ ಷಡ್ಯಂತ್ರ.

ಎಸ್‌ಟಿ ಸ್ಥಾನಮಾನವೇ ಕೊಟ್ಟಿಲ್ಲ: ಹೌದು ಹಾಲಕ್ಕಿ ಒಕ್ಕಲು ಜನಾಂಗ ಉತ್ತರ ಕನ್ನಡ(Uthara kannada) ಜಿಲ್ಲೆಯಲ್ಲೇ ಬಹುಸಂಖ್ಯಾತರು. ಆದ್ರೆ ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಆದಿವಾಸಿಗಳು.

ಇವರು ಪಕ್ಕಾ ಕಾಡಿನ ಮಕ್ಕಳು. ಬುಡಕಟ್ಟು ಜನಾಂಗದವರು. ಆದ್ರೆ ಇಂದಿಗೂ ಇವರಿಗೆ ಸರ್ಕಾರ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನೇ ಕೊಟ್ಟಿಲ್ಲ.

ಮೀಸಲಾತಿ ಕೊಡದೆ ಮೋಸ: ಹೌದು ಹಾಲಕ್ಕಿ ಮಕ್ಕಳಿಗೆ ಈ ಸರ್ಕಾರ ಹೆಜ್ಜೆ ಹೆಜ್ಜೆಗೆ ಮೋಸ ಮಾಡಿದೆ. ಹಾವನೂರು ವರದಿಯಿಂದ ಆರಂಭವಾದ ಮೋಸದ ಅಧ್ಯಾಯ ಇಂದಿಗೂ ಕೊನೆಯಾಗಿಲ್ಲ.

ಹಾಲಕ್ಕಿ ಒಕ್ಕಲು ಬುಡಕಟ್ಟು ಜನಾಂಗಕ್ಕೆ ಸೇರಿಸಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ ಅಂತ ಕುಲ ಶಾಸ್ತ್ರೀಯ ಅಧ್ಯಯನ ವರದಿ ಸ್ಪಷ್ಟವಾಗಿ ಹೇಳಿದೆ.

ಆದ್ರೆ 2018ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಅದನ್ನು ಖಡಾಖಂಡಿತವಾಗಿ ತಿರಸ್ಕರಿಸಿ ಹಾಲಕ್ಕಿ ಒಕ್ಕಲಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಕೊಡಲ್ಲ ಅಂತ ಹೇಳಿತು.

ಇದನ್ನು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವೂ ಮುಚ್ಚಿಟ್ಟು ಹಾಲಕ್ಕಿ ಮಕ್ಕಳಿಗೆ ಮಹಾ ವಂಚನೆ ಮಾಡಿದೆ.

ಮೀಸಲಾತಿ ನಿರಾಕರಣೆ ಹಿಂದೆ ಶಾಸಕ, ಸಂಸದರ ಕೈವಾಡ ?: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಲಕ್ಕಿ ಒಕ್ಕಲು(Okkalu) ಜನಾಂಗಕ್ಕೆ ಎಸ್‌ಟಿ ಮೀಸಲಾತಿ ಸಿಕ್ಕರೆ ತಮ್ಮ ಸೀಟಿ ಎಲ್ಲಿ ಕುತ್ತು ಬರುತ್ತೋ ಅನ್ನೋ ಆತಂಕದಿಂದ ಹಾಲಿ,

ಮಾಜಿ ಶಾಸಕರು, ಸಂಸದರು ಇವರಿಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ಸಿಗದಂತೆ ರಾಜಕೀಯ ಷಡ್ಯಂತ್ರಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.

ಭೂಮಿ ಕಿತ್ತುಕೊಂಡು, ಬೀದಿಗೆ ತಳ್ಳಿದ್ರು: ಈ ಸರ್ಕಾರಗಳು ಹಾಲಕ್ಕಿ ಒಕ್ಕಲು ಮಕ್ಕಳ ಮೇಲೆ ಮಾಡಿದ ಅನ್ಯಾಯ ಒಂದಲ್ಲಾ ಎರಡಲ್ಲಾ….. ಶ್ರಮ ಜೀವಿಗಳಾದ ಹಾಲಕ್ಕಿ ಮಕ್ಕಳು ಪಶ್ಚಿಮಘಟ್ಟದ ಕಾಡೋಳಗೆ ಕೃಷಿ ಮಾಡುತ್ತಿದ್ರು.

ಆದ್ರೆ ಯಾವಾಗ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾಯ್ತೋ ಆಗ ಇವರನ್ನೆಲ್ಲಾ ಕಾಡಿನಿಂದ ನಾಡಿಗೆ ದೌರ್ಜನ್ಯದಿಂದ ಹೊರಗಟ್ಟಲಾಯಿತು.

ಕಾಡಿನಿಂದ ನಾಡಿಗೆ ಬಂದು ಬದುಕು ಕಟ್ಟಿಕೊಂಡ ಇವರಿಗೆ ಶಾಪವಾಗಿ ಕಾಡಿದ್ದು ಕೈಗಾ ಅಣುಸ್ಥಾವರ, ಕದ್ರಾ ಜಲಾಶಯ, ಸೀ ಬರ್ಡ್‌ ನೌಕಾ ನೆಲೆ, ಕೊಂಕಣ ರೈಲ್ವೇ, ವಿಮಾನ ನಿಲ್ದಾಣದಂಥಾ ಬೃಹತ್‌ ಯೋಜನೆಗಳು.

ಈ ಯೋಜನೆಗಳು ಇವರ ಮನೆ ಮಠ ಜಮೀನನ್ನೆಲ್ಲಾ ಕಿತ್ತುಕೊಂಡಿತು. ಆದ್ರೆ ದುರಂತ ನೋಡಿ ಬದುಕನ್ನೇ ಕಳೆದುಕೊಂಡ ಹಾಲಕ್ಕಿ ಮಕ್ಕಳಿಗೆ ಅತ್ತ ಪರಿಹಾರವೂ ಸಿಕ್ಕಿಲ್ಲ,

ಉದ್ಯೋಗ ಭಾಗ್ಯವೂ ದೊರಕಿಲ್ಲ, ಜಮೀನು ಇಲ್ಲ. ಯಾಕಂದ್ರೆ ಇವರು ಅವಿದ್ಯಾವಂತರು ಇವರ ಬಳಿ ಜಮೀನಿನ ದಾಖಲೆಗಳೇ ಇರಲಿಲ್ಲ.

ಜೀತ ಇನ್ನೂ ಜೀವಂತ: ಹಾಲಕ್ಕಿ ಒಕ್ಕಲು ಮಕ್ಕಳ ಬದುಕಿನ ಇನ್ನೊಂದು ಕರಾಳ ಮುಖ ಅಂದ್ರೆ ಅದು ಜೀತ. ಯಸ್‌, ಹಾಲಕ್ಕಿ ಮಕ್ಕಳು ಇಂದಿಗೂ ಜೀತ ಅನ್ನೋ ಕ್ರೂರ ಪದ್ಧತಿಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಮನೆಯ ಗಂಡು ಮಕ್ಕಳು ಅಜ್ಜ, ಅಪ್ಪ ಮಾಡಿದ ಸಾಲದ ಹೊರೆಯನ್ನು ತೀರಿಸಲು ಶಿರಸಿ(Shirsi), ಶಿವಮೊಗ್ಗದ ಅಡಿಕೆ ತೋಟದಲ್ಲಿ ಜೀತದಾಳುವಾಗಿ ದುಡಿಯಬೇಕು.

ವರ್ಷದಲ್ಲಿ ಒಂದು ಬಾರಿ ಅಂದ್ರೆ ತುಳಸೀ ಹಬ್ಬಕ್ಕೆ ಮಾತ್ರ ಇವರಿಗೆ ಮನೆ ನೋಡೋ ಭಾಗ್ಯ. ಎಂಥಾ ದುಸ್ಥಿತಿ ನೋಡಿ.

ಜೀತದಿಂದಾಗಿ ಹಾಲಕ್ಕಿ ಯುವಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಲಕ್ಕಿ ಒಕ್ಕಲು ಜನಾಂಗದ ಶಿಕ್ಷಣ ಗುಣಮಟ್ಟ ಕೇವಲ 12 ಶೇ. ಆರ್ಥಿಕವಾಗಿ ಅತ್ಯಂತ ಹಿಂದುಳಿದ ಇವರು ಮೂಲಭೂತ ಸೌಕರ್ಯಗಳಿಂದ ವಂಚಿರಾಗುತ್ತಿದ್ದಾರೆ.

ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದ್ರೂ ಹಾಲಕ್ಕಿ ಒಕ್ಕಲು ಜನಾಂಗ ಅತ್ಯಂತ ಹೀನಾಯ ಬದುಕು ಸಾಗಿಸುತ್ತಿದೆ.

ಆಳುವವರ ಕ್ರೌರ್ಯ, ರಾಜಕಾರಣಿಗಳ ದುಷ್ಟ ನಡೆಯಿಂದ ಬದುಕಿನ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.

ತಮ್ಮ ಹಕ್ಕಿಗಾಗಿ ಹಾಲಕ್ಕಿ ಮಕ್ಕಳು ಮೂವತ್ತು ನಲ್ವತ್ತು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಆದ್ರೆ ಬಡವರ ಕೂಗು ಆಳುವವರ ಕಿವಿಗೆ ಬೀಳುತ್ತಲೇ ಇಲ್ಲ.

ಈಗ ಮತ್ತೆ ಹೋರಾಟಕ್ಕೆ ಕಾವು ಬಂದಿದೆ. ಸುಕ್ರಜ್ಜಿ, ತುಳಸಜ್ಜಿಯೇ ಬೀದಿಗಳಿಯುವ ನಿರ್ಧಾರ ಮಾಡಿದ್ದಾರೆ. ಇವರ ಹೋರಾಟಕ್ಕೆ ನಾಗರೀಕರೆಲ್ಲರೂ ಸಾಥ್‌ ಕೊಡಬೇಕು.

ದೇಶ ಉದ್ದಾರದ ಮಾತನಾಡುವ ಮೋದಿಯವರಿಗೆ(Narendra Modi) ಈ ಹಿರಿ ಜೀವಗಳ ಕೂಗು ಕೇಳಲಿ ಎಂದು ಆಶಿಸೋಣ.

Exit mobile version