ಇಂದು ಹೈದರಾಬಾದ್ Vs ಆರ್ಸಿಬಿ ಪಂದ್ಯಾಟ: ಗೆಲುವಿಗಾಗಿ ಆರ್‌ಸಿಬಿ ಆಟಗಾರರಿಂದ ಭರ್ಜರಿ ತಯಾರಿ

Hyderabad: ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು ಎದುರಿಸಲಿದೆ. ಇಂದು ನಡೆಯಲಿರುವ ಈ ಪಂದ್ಯವು ಅತೀ ಮಹತ್ವದಾಗಿದೆ.ಆರ್ ಸಿಬಿ ತಂಡವು ಇಂದು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದೆ. ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುನ್ನುಗ್ಗುಲಿದೆ.

ರಾಜೀವ್ ಗಾಂಧಿ (Rajeev Gandhi) ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನ ಪಂದ್ಯವನ್ನು ಏರ್ಪಡಿಸಲಾಗಿದೆ.ಈ ಸ್ಟೇಡಿಯಂ ಹೈದರಾಬಾದ್‌ನಲ್ಲಿದೆ.ಆರ್‌ಸಿಬಿ (RCB) ಆಟಗಾರರು ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.ಬೆಂಗಳೂರಿನ ಎಲ್ಲ ಆಟಗಾರರು ಅಲ್ಲದೆ ಕೊಹ್ಲಿ, ಫಾಫ್ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಪ್ರಾಕ್ಟಿಸ್ ನಡೆಸುತ್ತಿದ್ದಾರೆ.

ಆರ್‌ಸಿಬಿ ತಂಡ ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ.ಏಕೆಂದರೆ ಪ್ಲೇ ಆಫ್ (Play Off) ರೇಸ್‌ನಲ್ಲಿ ಉಳಿಯಬೇಕಾದರೆ ಗೆಲ್ಲುವ ಅನಿವಾರ್ಯತೆ ಇಂದು ಆರ್‌ಸಿಬಿ (RCB) ತಂಡಕ್ಕೆ ಇದೆ. ಸದ್ಯ ಇಲ್ಲಿವರೆಗೆ ಆಡಿರುವ 12 ಪಂದ್ಯಗಳಲ್ಲಿ ಒಟ್ಟು 6 ಪಂದ್ಯ ಗೆದ್ದು 12 ಅಂಕ ಸಂಪಾದಿಸಿ ಪ್ರಸ್ತುತ ಐದನೇ ಸ್ಥಾನದಲ್ಲಿದೆ.

ಈ ಹಿಂದೆ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals) ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿ ಆರ್‌ಸಿಬಿ ತಂಡ ಗೆದ್ದು ಬೀಗಿತ್ತು.ಕೇವಲ 59 ರನ್‌ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆಲೌಟ್ ಮಾಡಿತ್ತು.ಫಾಫ್ ಪಡೆ ಬೌಲಿಂಗ್‌ನಲ್ಲಿ (Bowling) ಉತ್ತಮ ಪ್ರದರ್ಶನವನ್ನು ಕೊಟ್ಟಿತ್ತು.

ಸದ್ಯ ವಿರಾಟ್ ಕೊಹ್ಲಿ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ಕೊಡುತ್ತಿದ್ದಾರೆ.ದಿನೇಶ್ ಕಾರ್ತಿಕ್ (Dinesh Karthik) , ಅನುಜ್ ರಾವತ್ ಕಡೆಯಿಂದ ಇನ್ನಷ್ಟು ರನ್ ತಂಡಕ್ಕೆ ಬೇಕಾಗಿದೆ. ಬ್ಯಾಟಿಂಗ್‌ನಲ್ಲಿ (Batting) ಮಹಿಪಾಲ್ ಲುಗ್ರೂರ್ ಮತ್ತೊಮ್ಮೆಅಬ್ಬರಿಸಬೇಕಿದೆ.

ಆರ್‌ಸಿಬಿ ತಂಡ ಬೌಲಿಂಗ್‌ನಲ್ಲಿ ಉತ್ತಮವಾಗಿ ಪ್ರದರ್ಶನ ಕೊಡುತ್ತಿದ್ದಾರೆ.ಅತ್ಯುತ್ತಮ ತಂತ್ರದೊಂದಿಗೆ ಮೊಹಮ್ಮದ್ ಸಿರಾಜ್ (Mohammad Siraj) ಮತ್ತು ವೇಯ್ ಪಾರ್ನೆಲ್ ಬೌಲಿಂಗ್ ಮಾಡುತ್ತಿದ್ದಾರೆ.ಉತ್ತಮ ಬೌಲಿಂಗ್ ಮಾಡುವಲ್ಲಿ ಬ್ರೆಸ್‌ವೆಲ್ (Bracewell) ಕೂಡ ಮಿಂಚುತ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version