ನಿಮ್ಮಿಂದ ದೇಶಕ್ಕೆ ಬೆಂಕಿ ಬಿತ್ತು : ದೇಶದ ಮುಂದೆ ಕ್ಷಮೆಯಾಚಿಸಿ : ಸುಪ್ರೀಂಕೋರ್ಟ್

Nupur sharma

ಪ್ರವಾದಿಯ(Prophet) ವಿರುದ್ಧದ ಹೇಳಿಕೆ ಪ್ರಚೋದನೆಗೆ(Provoke) ಟಿವಿಯಲ್ಲೇ ಮೊದಲು ಕ್ಷಮೆಯಾಚಿಸಬೇಕಿತ್ತು ಎಂದು ನೂಪುರ್ ಶರ್ಮಾ(Nupur Sharma) ವಿರುದ್ಧ ಸುಪ್ರೀಂ(SupremeCourt) ವಾಗ್ದಾಳಿ ನಡೆಸಿದೆ. ಕಳೆದ ಒಂದು ತಿಂಗಳ ಹಿಂದೆ ಅಮಾನತುಗೊಂಡ ಬಿಜೆಪಿ ನಾಯಕಿ ಈ ಒಂದು ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಸದ್ಯ ಈ ಹೇಳಿಕೆಯಿಂದ ಉಂಟಾಗುತ್ತಿರುವ ಅಹಿತಕರ ಘಟನೆ ಕುರಿತು, ಪ್ರವಾದಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಪ್ರವಾದಿ ವಿರುದ್ಧ ಆಕೆಯ ಹೇಳಿಕೆಗಳನ್ನು “ಅಗ್ಗದ ಪ್ರಚಾರ, ರಾಜಕೀಯ ಕಾರ್ಯಸೂಚಿ ಅಥವಾ ಕೆಲವು ಕೆಟ್ಟ ಚಟುವಟಿಕೆಗಳಿಗಾಗಿ” ಮಾಡಲಾಗಿದೆ ಎಂದು ಸುಪ್ರೀಂ ಹೇಳಿದೆ. ಪ್ರವಾದಿ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಹಲವು ರಾಜ್ಯಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು(FIR) ತನಿಖೆಗಾಗಿ ದೆಹಲಿಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ಅವರ ಮನವಿಯನ್ನು ಆಲಿಸಿದ ಸುಪ್ರಿಂ, ಶುಕ್ರವಾರ “ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಕಿದ್ದಾರೆ” ಎಂದು ಹೇಳಿದೆ.

ನ್ಯಾಯಾಲಯವು ಆಕೆಯ ಮನವಿಯನ್ನು ವಜಾಗೊಳಿಸಿದೆ ಮತ್ತು ಯಾವುದೇ ಪರಿಹಾರವನ್ನು ಪಡೆಯಲು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಕೇಳಿದೆ. ಪೀಠವು, “ಈ ಅರ್ಜಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಲು ಯೋಗ್ಯವಾಗಿಲ್ಲ ಎಂದು ಅವರು ಭಾವಿಸುವುದನ್ನು ತೋರಿಸುತ್ತದೆ. ವಕ್ತಾರರು ಅಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ನೂಪುರ್ ಶರ್ಮಾ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮಣಿಂದರ್ ಸಿಂಗ್, ಅವರು ತನಿಖೆಗೆ ಹಾಜರಾಗುತ್ತಿದ್ದಾರೆ ಮತ್ತು ಓಡಿಹೋಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಅದಕ್ಕೆ ಪೀಠವು ನಿಮಗೆ ಕೆಂಪು ಕಾರ್ಪೆಟ್ ಹಾಕಿರಬೇಕು ಎಂದು ಹೇಳಿದೆ.

ನೂಪುರ್ ಶರ್ಮಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲಿ ಎಂದು ವಕೀಲ ಸಿಂಗ್ ಹೇಳಿದ್ದಾರೆ. ಇದಕ್ಕೆ ಸುಪ್ರೀಂ ಪೀಠವು, ಈ ಮೊದಲೇ ಟಿವಿಯಲ್ಲಿ ಹೋದಾಗ ರಾಷ್ಟ್ರದ ಮುಂದೆ ಕ್ಷಮೆ ಕೇಳಬೇಕಿತ್ತು ಎಂದು ಹೇಳಿದೆ. ಇನ್ನು ಆಕೆಗೆ ಜೀವ ಬೆದರಿಕೆ ಇದೆ ಎಂದು ನೂಪುರ್ ಶರ್ಮಾ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ನ್ಯಾಯಮೂರ್ತಿ ಸೂರ್ಯ ಕಾಂತ್, “ಅವರು ಬೆದರಿಕೆಯನ್ನು ಹೊಂದಿದ್ದಾರೆಯೇ ಅಥವಾ ಅವರೇ ಭದ್ರತೆಗೆ ಬೆದರಿಕೆ ಹಾಕಿದ್ದಾರೋ? ಎಂದು ಪ್ರಶ್ನಿಸಿದ್ದಾರೆ.

ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದಾಗಿ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಅನ್ನು ಇಬ್ಬರು ವ್ಯಕ್ತಿಗಳು ಹತ್ಯೆ ಮಾಡಿದ ಘಟನೆಯನ್ನು ಉಲ್ಲೇಖಿಸಿದ ಪೀಠ, ನೂಪುರ್ ಶರ್ಮಾ ಅವರ ಈ ಹೇಳಿಕೆ ಉದಯಪುರದಲ್ಲಿ ಹತ್ಯೆಗೂ ಕಾರಣವಾಗಿದೆ ಎಂದು ಹೇಳಿದೆ. ಒಟ್ಟಾರೆ ನೂಪುರ್ ಶರ್ಮಾ ವಿರುದ್ಧ ಸುಪ್ರಿಂ ಕೆಂಡಮಂಡಲವಾಗಿದೆ. ಈ ಕೂಡಲೇ ದೇಶದ ಮುಂದೆ ಕ್ಷಮೆಯಾಚಿಸಲು ಸೂಚನೆ ನೀಡಿದೆ.

Exit mobile version