ಬಿಲ್ಕಿಸ್ ಬಾನೊ ಪ್ರಕರಣ : 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸುತ್ತಾ ಸುಪ್ರೀಂ?

ನವದೆಹಲಿ, ಆಗಸ್ಟ್ ,24, 2022 : ಬಿಲ್ಕಿಸ್ ಬಾನೊ(Bilkis Bano) ಸಾಮೂಹಿಕ ಅತ್ಯಾಚಾರ(Gang Rape) ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ(Gujarat Government) ವಿನಾಯತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್(Supremecourt) ಇಂದು ವಿಚಾರಣೆ ನಡೆಸಲಿದೆ.

ಬಿಲ್ಕಿಸ್ ಬಾನೊ

ಇನ್ನು ಸಿಪಿಐ(ಎಂ) ಪಾಲಿಟ್ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ(Mahou Moitra) ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿತ್ತು.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ(NV Ramana) ನೇತೃತ್ವದ ಪೀಠವು, ಈ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ವಿನಾಯತಿ ನೀಡಿರುವ ಕ್ರಮದ ಕುರಿತು ವಿಚಾರಣೆ ನಡೆಸಲಿದೆ. ಹಿರಿಯ ವಕೀಲ ಕಪಿಲ್ ಸಿಬಲ್(Kapil Sibal) ಮತ್ತು ವಕೀಲೆ ಅಪರ್ಣಾ ಭಟ್ ಅವರ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಇಂದು ಅವರ ವಾದವನ್ನು ಆಲಿಸಲಿದೆ.

https://fb.watch/f5QKV88jZ6/

ಬಿಲ್ಕಿಸ್ ಬಾನೊ ಪ್ರಕರಣ : ಬಿಲ್ಕಿಸ್ ಬಾನೋ ಎಂಬ ಮಹಿಳೆ ಗರ್ಭಿಣಿಯಾಗಿದ್ದಾಗ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕುಟುಂಬ ಸದಸ್ಯರ ಕೊಲೆ ಮಾಡಲಾಗಿತ್ತು. ಜನವರಿ 2008 ರಲ್ಲಿ ಮುಂಬೈನ ಸಿಬಿಐ ನ್ಯಾಯಾಲಯವು ಈ ಪ್ರಕರಣದ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್(Bombay Highcourt) ಎತ್ತಿ ಹಿಡಿದು, ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಸಂಚು, ಕೊಲೆ, ಕಾನೂನು ಬಾಹಿರ ಸಭೆ ನಡೆಸಿದ ಕೃತ್ಯಗಳಿಗಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿತು.

ಮಹುವಾ ಮೊಯಿತ್ರಾ

ಆರೋಪಿಗಳನ್ನು ರಕ್ಷಿಸಲು “ತಪ್ಪಾದ ದಾಖಲೆಗಳನ್ನು” ಮಾಡಿದ್ದಕ್ಕಾಗಿ ಹೆಡ್ ಕಾನ್ಸ್ಟೆಬಲ್ಗೆ ಶಿಕ್ಷೆ ವಿಧಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 20 ಆರೋಪಿಗಳ ಪೈಕಿ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

Exit mobile version