ಬಾಯಿ ಕ್ಯಾನ್ಸರ್ ಬಂದಿದೆ ಎಂದು ತಿಳಿಸುವ ಲಕ್ಷಣಗಳು ಯಾವುವು?? ಈ ಲಕ್ಷಣಗಳಿದ್ದರೆ ಆದಷ್ಟು ಬೇಗನೆ ವೈದ್ಯರ ಬಳಿ ತೋರಿಸಿಕೊಳ್ಳಿ.

Health Tips: ಬಾಯಿ ಕ್ಯಾನ್ಸರ್ ಸಮಸ್ಯೆ ಧೂಮಪಾನ (symptoms of mouth cancer)ಅಥವಾ ಮಧ್ಯಪಾನ ಮಾಡುವುದರಿಂದ ಬರುತ್ತದೆ. ಇದರ ಜೊತೆಗೆ ವರ್ಷಗಳಿಂದ ಈ ಕೆಟ್ಟ ಅಭ್ಯಾಸಗಳನ್ನು

ಮುಂದು ವರಿಸಿಕೊಂಡು ಬಂದರೆ ಮತ್ತು ಬಾಯಿಯ ಸ್ವಚ್ಛತೆ ಸರಿಯಾಗಿ ಕಾಪಾಡಿಕೊಳ್ಳದೆ ಇದ್ದರೆ ಕೂಡ ಬಾಯಿ ಕ್ಯಾನ್ಸರ್ ಬರಬಹುದಾದ ಎಲ್ಲಾ ಲಕ್ಷಣಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನ ಶೈಲಿ ಕೂಡ ಬಾಯಿ ಕ್ಯಾನ್ಸರ್ ಸಮಸ್ಯೆಗೆ ಕಾರಣ ವಾಗುತ್ತಿದೆ ಎಂಬ ಶಾಕಿಂಗ್ ಸುದ್ದಿಯನ್ನು ವೈದ್ಯರು ನೀಡಿದ್ದಾರೆ.

ಬಾಯಿ ಕ್ಯಾನ್ಸರ್ ಸಮಸ್ಯೆಯ ಲಕ್ಷಣಗಳ ಬಗ್ಗೆ ಈ ಲೇಖನದಲ್ಲಿ (symptoms of mouth cancer) ತಿಳಿಸಿಕೊಟ್ಟಿದ್ದೇವೆ.

ಸಂಶೋಧನೆ ಹೇಳಿರುವ ಪ್ರಕಾರ

ಸಂಶೋಧನೆ ಹೇಳಿರುವ ಪ್ರಕಾರ ಬಾಯಿಯ ಕ್ಯಾನ್ಸರ್ ಬರುವ ಲಕ್ಷಣವು ಯಾವ ವ್ಯಕ್ತಿಯು ಅತಿ ಯಾಗಿ ಬೀಡಿ-ಸಿಗರೇಟು, ಕುಡಿತ ಮತ್ತು ತಂಬಾಕು ಸೇವನೆಯ ಚಟವನ್ನು ಹೊಂದಿರುತ್ತಾರೆಯೋ,

ಅಂತಹ ವರಲ್ಲಿ ಶೇಕಡ 100 ರಷ್ಟು ಅಧಿಕವಾಗಿರುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ.

ಈ ಕಾಯಿಲೆಯ ಪ್ರಮುಖ ರೋಗಲಕ್ಷಣಗಳು, ಏನೆಂದರೆ ಬಾಯಿಯ ಒಳಗಿನ ಭಾಗ ಇದ್ದಕ್ಕಿದ್ದಂತೆ ಊದಿಕೊಳ್ಳು ವುದು ಅಥವಾ ಬಾಯಿಯ ಒಳಗಿನ ಭಾಗದಲ್ಲಿ ಅನಿರೀಕ್ಷಿತವಾದ ಮಾಂಸಖಂಡದ ಬೆಳವಣಿಗೆ ಕಂಡು ಬರುವುದು.

ಬನ್ನಿ ಈ ಕಾಯಿಲೆಯ ಇನ್ನಷ್ಟು ರೋಗಲಕ್ಷಣಗಳ ಬಗ್ಗೆ ನೋಡೋಣ…

ಇದನ್ನೂ ಓದಿ : ಹೈಡ್ರಾಫೇಶಿಯಲ್ ಮಾಡಿಸಿಕೊಳ್ಳುವವರೇ ಎಚ್ಚರ : 17,000ರೂ ಕೊಟ್ಟು ಫೇಶಿಯಲ್‌ ಮಾಡಿಸಿ ಮುಖವೇ ಸುಟ್ಟೋಯ್ತು!

ಈ ಮೇಲಿನ ಲಕ್ಷಣಗಳು ಬಾಯಿಯ ಯಾವುದೇ ಭಾಗದಲ್ಲಿ ಅಂದರೆ ದವಡೆ ಹಾಗೂ ಕುತ್ತಿಗೆ ಭಾಗವನ್ನು ಸೇರಿಕೊಂಡು ಕಂಡು ಬಂದರೆ ಮತ್ತು ದುಗ್ದರಸ ಗ್ರಂಥಿ ಗಳಲ್ಲಿ ಈ ರೀತಿಯ ಗಂಟುಗಳು ಇದ್ದರೆ ಅದನ್ನು ಯಾವತ್ತಿಗೂ ನಿರ್ಲಕ್ಷ್ಯ ಮಾಡಬೇಡಿ.

ನಿಮ್ಮ ವೈದ್ಯರ ಬಳಿ ಇದನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಈ ರೀತಿಯ ಬಿಳಿ ಬಣ್ಣದ ಗಾಯದ ಅಥವಾ ಕೆಂಪು ಬಣ್ಣದ ಗಾಯ ಇದ್ದರೆ ಅದನ್ನು ಬಾಯಿ ಕ್ಯಾನ್ಸರ್ ಎಂದು ಕರೆಯ ಲಾಗುತ್ತದೆ. ಯಾವುದಕ್ಕೂ ಡಾಕ್ಟರ್ ಬಳಿ ಒಮ್ಮೆ ಚೆಕ್ ಮಾಡಿಸಿಕೊಳ್ಳಿ.

ಕೆಲವರಿಗೆ ಸರಿಯಾಗಿ ಬಾಯಿ, ದವಡೆ ಅಥವಾ ನಾಲಿಗೆಯನ್ನು ಆಡಿಸಲು ಊಟ ಮಾಡುವಾಗ ಬರುವುದಿಲ್ಲ. ಅಂದ್ರೆ ತುಂಬಾ ಕಷ್ಟ ವಾಗುತ್ತದೆ.


ಒಂದು ವೇಳೆ ಇದು ತಾತ್ಕಾಲಿಕವಾಗಿ ಇದ್ದರೆ ಯಾವುದೇ ತೊಂದರೆ ಇಲ್ಲ.ಅಂದರೆ ಕನಿಷ್ಠ ಆರು ವಾರಗಳಿಗಿಂತ ಹೆಚ್ಚಾಗಿದ್ದರೆ ಮತ್ತು ನಿರಂತರವಾಗಿ ಮುಂದುವರೆದರೆ ನಿಮ್ಮ ವೈದ್ಯರ ಬಳಿ ತೋರಿಸಿಕೊಳ್ಳಿ.​

ಹಲ್ಲುಗಳು ಉದುರಿ ಹೋಗುವುದು

ಬಾಯಿ ಕ್ಯಾನ್ಸರ್ ನ ಇದು ಕೂಡ ಒಂದು ಪ್ರಮುಖ ಲಕ್ಷಣ. ನಾಲಿಗೆ ಅಥವಾ ಬಾಯಿಯ ಯಾವುದೇ ಭಾಗವನ್ನು ಆಡಿಸಲು ಕಷ್ಟವಾಗುವುದು ಮತ್ತು ಹಲ್ಲುಗಳು ಉದುರುವುದು ಇವೆಲ್ಲವೂ ಬಾಯಿ ಕ್ಯಾನ್ಸರ್ ಲಕ್ಷಣಗಳು. ಈ ರೀತಿ ಸಮಸ್ಯೆಗಳು ಯಾವುದೇ ವಯಸ್ಸಿನಲ್ಲಿ ಕೂಡ ಆಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು.

ವೈದ್ಯರನ್ನು ಯಾವಾಗ ನೋಡಬೇಕು

ಮೂರು ವಾರಗ ಳಿಗಿಂತ ಹೆಚ್ಚು ಸಮಯ ಮೇಲಿನ ಯಾವುದೇ ಬಗೆಯ ರೋಗ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ವೈದ್ಯರನ್ನು ನೋಡಿ. ಏಕೆಂದರೆ ಆರಂಭ ದಲ್ಲಿಯೇ ಈ ಬಾಯಿ ಕ್ಯಾನ್ಸರ್ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಬಹಳ ಬೇಗನೆ ಇದರಿಂದ ಪರಿಹಾರ ಹೊಂದಬಹುದು.

ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ 3624 ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಬಾಯಿ ಕ್ಯಾನ್ಸರ್ ಬರಲು ಪ್ರಮುಖ ಕಾರಣ

ಬಾಯಿ ಕ್ಯಾನ್ಸರ್ ಸಮಸ್ಯೆಗೆ ಮೊದಲ ಆದ್ಯತೆಯ ಕಾರಣಗಳು ಏನೆಂದರೆ ಧೂಮಪಾನ ಮತ್ತು ಮಧ್ಯಪಾನ.ಬಾಯಿ ಕ್ಯಾನ್ಸರ್ ಸಮಸ್ಯೆ ಯನ್ನು ಅತಿ ಯಾದ ಆಲ್ಕೋ ಹಾಲ್ ಸೇವನೆ ಹೆಚ್ಚು ಮಾಡುತ್ತದೆ.

ಇದರ ಜೊತೆಗೆ ಸೂರ್ಯನ ಬಿಸಿಲಿನಲ್ಲಿ ಹೆಚ್ಚು ಓಡಾಡುವುದು, ಸರಿಯಾದ ಆಹಾರ ಪದ್ಧತಿ ಇಲ್ಲದೆ ಇರು ವುದು, ಮತ್ತು ಎಚ್ ಪಿ ವಿ ವೈರಸ್ ಮೂಲಕ ಸಹ ಬಾಯಿ ಕ್ಯಾನ್ಸರ್ ಬರ ಬಹುದು.

ವೈದ್ಯರ ಸಲಹೆ

ಕ್ಯಾನ್ಸರ್ ಎಂಬ ಪದವನ್ನು ಕೇಳಿದ ಕೂಡಲೇ ಭಯಭೀತ ರಾಗಲು ಹೋಗಬೇಡಿ! ಯಾಕೆಂದ್ರೆ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಿ ಕೊಂಡು ಹೋದರೆ ಈ ಕಾಯಿಲೆಯನ್ನು ಕೂಡ ನಿಯಂತ್ರಣ ಮಾಡಿ ಕೊಳ್ಳಬಹುದು ಎಂದು ಕ್ಯಾನ್ಸರ್ ತಜ್ಞರು ಸಲಹೆ ನೀಡುತ್ತಾರೆ.

ಸುಮಾರು 100 ಜನ ಕ್ಯಾನ್ಸರ್ ರೋಗಿಗಳನ್ನು ಪರೀಕ್ಷಿಸಿ ದಾಗ, ಅವರಲ್ಲಿ ಕ್ಯಾನ್ಸರ್ ಏನಾದರೂ ಮೊದಲನೇ ಹಂತದಲ್ಲಿ ಇದ್ದರೆ ಅವರಲ್ಲಿ ಸರಿ ಸುಮಾರು 80 ರಿಂದ 90 ಜನರು ಗುಣಮುಖರಾಗುವ ಸಂಖ್ಯೆ ಹೆಚ್ಚಾಗಿರುತ್ತದೆ.


ಹಾಗಾಗಿ ನಿಮ್ಮಲ್ಲಿ ಏನಾದರೂ ಕ್ಯಾನ್ಸರ್ ಲಕ್ಷಣಗಳು ಕಾಣಿಸಿ ಕೊಂಡರೆ ತಡ ಮಾಡದೇ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಮಾಡಿಕೊಳ್ಳಿ.

ರಶ್ಮಿತಾ ಅನೀಶ್

Exit mobile version