ಪ್ರಬಲ ಭೂಕಂಪಕ್ಕೆ ತತ್ತರಿಸಿದ ತೈವಾನ್: 25 ವರ್ಷಗಳಲ್ಲೇ ಶಕ್ತಿಶಾಲಿ ಕಂಪನ, ಸುನಾಮಿ ಎಚ್ಚರಿಕೆ.

Taiwan: ತೈವಾನ್ (Taiwan) ಕರಾವಳಿ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ (Tsunami) ಸಂಭವಿಸುವ ಎಚ್ಚರಿಕೆ ನೀಡಲಾಗಿದ್ದು ಕಂಪನದಿಂದಾಗಿ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಕರಾವಳಿ ಪ್ರದೇಶಗಳ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಮತ್ತು ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಹಾಗೂ ಹಠಾತ್ ಅಲೆಗಳ ಹೆಚ್ಚಳದಿಂದ ಎದುರಾಗಬಹುದಾಗಿ ಅಪಾಯಗಳ ಬಗ್ಗೆ ಜಾಗ್ರತೆ ವಹಿಸುವಂತೆ ಮೆಸೇಜ್ ರವಾನಿಸಲಾಗುತ್ತಿದೆ.

ಇನ್ನು ವರದಿಯ ಪ್ರಕಾರ ಭೂಕಂಪನದ ಕೇಂದ್ರ ಬಿಂದು ಹುವಾಲಿನ್‌ ನಗರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ರಸ್ತೆಗಳು ಒಡೆದಿವೆ. ಹಲವು ಕಟ್ಟಡಗಳು ಬಿದ್ದಿದ್ದು, ಇದರ ಅಡಿ ಸಿಲುಕಿರುವ ಜನರ ಬಗ್ಗೆಯೂ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ತೈಪೆಯ್‌ ಸ್ಥಳಿಯ ಆಡಳಿತ ಇನ್ನು ಹಾನಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಭೂಕಂಪದಿಂದಾಗಿ (Earthquake) ರೈಲು ಸಂಚಾರಕ್ಕೆ ಹಾಗೂ ವಿಮಾನ ಸಂಚಾರ ಸ್ಥಗಿತಗೊಂಡಿದೆ.

ಕಂಪನದ ತೀವ್ರತೆಗೆ ಪೂರ್ವ ತೈವಾನ್‌, ತೈಪೆ, ಓಕಿನಾವಾ (Taiwan, Taipei, Okinawa) ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದಿವೆ, 25ಕ್ಕು ಹೆಚ್ಚು ಕಟ್ಟಡಗಳು ನೆಲಸಮವಾಗಿವೆ.ಇಲ್ಲಿನ ಕಟ್ಟಡ ಕುಸಿದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ತೈವಾನ್‌ನಲ್ಲಿ ಮತ್ತಷ್ಟು ಭಾರಿ ಭೂಮಿ ಕಂಪಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಜನರು ಅಪಾಯದ ಸ್ಥಿತಿಗೆ ಸನ್ನದ್ದರಾಗಿ ಇರುವಂತೆ ಸೂಚಿಸಲಾಗಿದೆ.

ಭೂಮಿಯ ಮೇಲ್ಮೈಯಿಂದ ಸುಮಾರು 16 ಕಿ.ಮೀ ಆಳದಲ್ಲಿ ತೈಪೆಯ ಸಮೀಪ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತೈವಾನ್‌ ಹವಮಾನ ಇಲಾಖೆ ವರದಿ ಮಾಡಿದೆ . ಇದು ಕಳೆದ 25 ವರ್ಷಗಳಲ್ಲಿಯೇ ಅತ್ಯಂತ ಪ್ರಬಲ ಭೂಕಂಪನ ಎಂದು ತೈಪೆಯ ಕೇಂದ್ರ ಹವಾಮಾನ ಆಡಳಿತದ ಭೂಕಂಪ ಕೇಂದ್ರದ ನಿರ್ದೇಶಕ ವು ಚಿಯೆನ್- ಫು ತಿಳಿಸಿದ್ದಾರೆ. 1999ರ ಸೆಪ್ಟೆಂಬರ್‌ನಲ್ಲಿ ಉಂಟಾಗಿದ್ದ 7.6 ತೀವ್ರತೆಯ ಭೂಕಂಪನವು 2,400 ಜನರ ಜೀವ ಬಲಿ ತೆಗೆದುಕೊಂಡಿತ್ತು. ಇದು ದ್ವೀಪ ರಾಷ್ಟ್ರದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ನೈಸರ್ಗಿಕ ಅವಘಡ ಎನಿಸಿದೆ. ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ (Philippines) ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

Exit mobile version