ಗಡ್ಡ ಬೋಳಿಸಿ ಕಛೇರಿಗೆ ಬಂದ್ರೆ ಕಠಿಣ ಶಿಕ್ಷೆ : ತಾಲಿಬಾನ್ ಸರ್ಕಾರ!

taliban

ಮಂಗಳವಾರವಷ್ಟೇ ಅಫ್ಘಾನಿಸ್ತಾನದ(Afghansithan) ತಾಲಿಬಾನ್ ಸರ್ಕಾರ(Taliban Government) ಹಲವು ಕಟ್ಟುನಿಟ್ಟಿನ, ಶಿಸ್ತಿನ ಕ್ರಮ ಕೈಗೊಳ್ಳಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಹೌದು, ಕಠಿಣ ಶಿಕ್ಷೆಗಳಲ್ಲೇ ಅತ್ಯಂತ ಕಠಿಣ ಶಿಕ್ಷೆಗಳನ್ನು ವಿಧಿಸಲು ತಾಲಿಬಾನ್ ಸರ್ಕಾರ ಸಜ್ಜಾಗಿದೆ.

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡ ಬಳಿಕ ವಿಚಿತ್ರ, ವಿಭಿನ್ನ ನಿಯಮಗಳನ್ನು ಪಾಲಿಸುವಂತೆ ಜನರ ಮೇಲೆ ಹೇರಿದೆ. ತಾಲಿಬಾನ್ ಮಾರ್ಕ್ಸ್‌ವಾದಿ ಆಡಳಿತವು ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ನಿಯಮಗಳನ್ನು ಪಾಲಿಸಲು ತಿಳಿಸಿದೆ. ಸರ್ಕಾರಿ ನೌಕರರು ಕಛೇರಿಗೆ ಗಡ್ಡ ಬಿಟ್ಟುಕೊಂಡೆ ಬರಬೇಕೇ ವಿನಃ ಗಡ್ಡ ಬೋಳಿಸಿ ಬಂದರೆ ಅವರನ್ನು ಆ ಕ್ಷಣವೇ ಕೆಲಸದಿಂದ ಹೊರನೂಕಲಾಗುವುದು. ಅಫ್ಘಾನಿಸ್ತಾನದ, ಕಾಬೂಲ್ ನಲ್ಲಿರುವ ಅಷ್ಟು ಸರ್ಕಾರಿ ಕಛೇರಿಗಳಿಗೆ ಈ ನಿಯಮವನ್ನು ಜಾರಿಗೊಳಿಸಿದೆ ತಾಲಿಬಾನ್ ಸರ್ಕಾರ!

ಇದರ ಜೊತೆಗೆ ಪ್ರತಿಯೊಬ್ಬ ನೌಕರನ್ನು ಕೂಡ ಸಾಂಪ್ರದಾಯಿಕ ಬಟ್ಟೆಗಳನ್ನೇ ಧರಿಸಿ ಕಛೇರಿಗೆ ಹಾಜರಾಗಬೇಕು. ಇದಕ್ಕೂ ಮುನ್ನ ತಾಲಿಬಾನ್ ಸರ್ಕಾರ, ತಾಲಿಬಾನ್ ಆಡಳಿತದಲ್ಲಿರುವ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವನ್ನು ರದ್ದುಗೊಳಿಸಿದ್ದಾರೆ. ಇದು ಕೂಡ ಅಶ್ಚರ್ಯಕ್ಕೆ ಪ್ರಮುಖ ಕಾರಣವಾಗಿದೆ. ನೌಕರರು ಉದ್ದವಾದ, ಅಗಲವಾದ, ಸಡಿಲವಾದ ಮೇಲ್ಭಾಗ ಬಟ್ಟೆ ಮತ್ತು ಪ್ಯಾಂಟ್ ಧರಿಸಿರಲೇಬೇಕು. ಇದರ ಜೊತೆಗೆ ಅವಶ್ಯಕತೆ ಇದ್ದಲ್ಲಿ ಟೋಪಿ ಅಥವಾ ಪೇಟಾ ಧರಿಸಿ ಬರುವುದು ಅತ್ಯಗತ್ಯ ಎಂದು ತಿಳಿಸಿದೆ.

ಈ ಮಧ್ಯೆ ಪುರುಷರು ದಾಡಿ ಬಿಟ್ಟು ಸ್ಥಳೀಯ ಉಡುಗೆಯನ್ನು ತೊಟ್ಟು ಕಛೇರಿಗೆ ಬರುವುದು ನಿಯಮಕ್ಕೆ ಕೊಡುವ ಗೌರವ ಎಂದು ಹೇಳಿದೆ. ಈ ಹಿಂದೆಯೂ ಹೇಳಿದಂತೆ ತಾಲಿಬಾನ್ ಹೆಂಗಸರು ಮತ್ತು ಗಂಡಸರು ಒಟ್ಟಿಗೆ ಪಾರ್ಕ್‍ಗಳಿಗೆ ಹೋಗುವಂತಿಲ್ಲ! ಮಹಿಳೆಯರು ವಾರಕ್ಕೆ ಮೂರು ದಿನ ಮತ್ತು ಪುರುಷರು ವಾರಕ್ಕೆ ನಾಲ್ಕು ದಿನ ಮಾತ್ರ ಪ್ರವೇಶಿಸಬೇಕು ಎಂದು ಆದೇಶ ಹೊರಡಿಸಿತ್ತು. ಸದ್ಯ ಈಗ ಪುರುಷರ ಗಡ್ಡದ ಬಗ್ಗೆ ಕೂಡ ಗಂಭೀರ ನಿಯಮವನ್ನು ತಾಲಿಬಾನ್ ಸರ್ಕಾರ ಜಾರಿಗೊಳಿಸಿದೆ.

Exit mobile version