• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಸಚಿವ ವಿ ಸೆಂಥಿಲ್ ಬಾಲಾಜಿಯನ್ನು ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ: ಆಕ್ರೋಶಕ್ಕೆ ಹೆದರಿ ಆದೇಶ ವಾಪಸ್

Rashmitha Anish by Rashmitha Anish
in ರಾಜಕೀಯ
ಸಚಿವ ವಿ ಸೆಂಥಿಲ್ ಬಾಲಾಜಿಯನ್ನು ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ: ಆಕ್ರೋಶಕ್ಕೆ ಹೆದರಿ ಆದೇಶ ವಾಪಸ್
0
SHARES
212
VIEWS
Share on FacebookShare on Twitter

Chennai: ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ (Tamilnadu Governor sacked SenthilBalaji) ಅವರನ್ನು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ರಾಜ್ಯಪಾಲ ಆರ್‌ಎನ್ ರವಿ(R.N Ravi), ಸಿಎಂ ಎಂಕೆ ಸ್ಟಾಲಿನ್ (M.K Stalin) ಅವರನ್ನು ಸಂಪರ್ಕಿಸದೆಯೇ ಬಂಧಿತರಾದ ವಿ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಿದ್ದಾರೆ.

ಈ ವಿಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಗುರುವಾರ ಕೇಂದ್ರ ಗೃಹ ಸಚಿವಾಲಯದ ಸಲಹೆ ಮೇರೆಗೆ ತಮ್ಮ ನಿರ್ಧಾರವನ್ನು ಅವರು ಹಿಂದಕ್ಕೆ ಪಡೆದುಕೊಂಡಿದ್ದಾರೆ.

Tamilnadu Governor sacked SenthilBalaji

ಸೆಂಥಿಲ್ ಬಾಲಾಜಿ ಎರಡು ವಾರಗಳ ಹಿಂದೆ ಬಂಧಿತರಾಗಿದ್ದರು ಸದ್ಯ ಇವರು ಬೈಪಾಸ್ ಸರ್ಜರಿಗೆ(Bypas Surgery) ಒಳಗಾಗಿರುವ ಕಾರಣ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. ಆದರೆ ಅವರು

ಇನ್ನೂ ಕೂಡ ಇ.ಡಿ(E.D) ವಶದಲ್ಲಿಯೇ ಇದ್ದಾರೆ. ಅವರು ಎಐಎಡಿಎಂಕೆ(AIADMK) ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆಯಲ್ಲೇ ಕೆಲಸಕ್ಕಾಗಿ ಲಂಚ ಪಡೆದ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆ;ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಸರ್ಕಾರ ತೀರ್ಮಾನ : ಎಷ್ಟು ಹಣ ಇಲ್ಲಿದೆ ಮಾಹಿತಿ

ಸ್ಟಾಲಿನ್ ಸಂಪುಟದಲ್ಲಿ ಅವರನ್ನು ಖಾತೆರಹಿತ ಸಚಿವರನ್ನಾಗಿ ಉಳಿಸಿಕೊಂಡಿದ್ದಾರೆ. ಅವರು ನಿರ್ವಹಿಸುತ್ತಿದ್ದ ಅಬಕಾರಿ ಖಾತೆಯನ್ನು ವಸತಿ ಸಚಿವ ಮುತ್ತುಸಾಮಿ (Muthu Swamy) ಅವರಿಗೆ ಮತ್ತು

ಇಂಧನ ಖಾತೆಯನ್ನು ಹಣಕಾಸು ಸಚಿವ ತಂಗಂ ತೆನ್ನರಸು(Tangam Tennarasu) ಅವರಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ . ಈ ನಡುವೆ ರಾಜ್ಯಪಾಲ ಆರ್‌ಎನ್ ರವಿ ಅವರು ತೆಗೆದುಕೊಂಡ ಏಕಪಕ್ಷೀಯ

ನಿರ್ಧಾರವು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ರಾಜ್ಯಪಾಲ ಆರ್‌ಎನ್ ರವಿ ಮತ್ತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನಡುವೆ ಹಲವು ಸಮಯದಿಂದ ಸಂಘರ್ಷ ನಡೆಯುತ್ತಿದೆ.

ಈಗ ಬಾಲಾಜಿ ಅವರಿಗೆ ನೀಡಿರುವ ದಿಢೀರಣೆ ವಜಾ ಆದೇಶದಿಂದ ಅದು ಮತ್ತಷ್ಟು (Tamilnadu Governor sacked SenthilBalaji) ಉಲ್ಬಣಗೊಂಡಿದೆ.

Tamilnadu Governor sacked SenthilBalaji

ರಾಜ್ಯಪಾಲರ ಆದೇಶದಲ್ಲಿ ಏನಿತ್ತು?

“ವಿ ಸೆಂಥಿಲ್ ಬಾಲಾಜಿ ಅವರು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಭ್ರಷ್ಟಾಚಾರದ ಅನೇಕ ಪ್ರಕರಣಗಳಲ್ಲಿ ಮತ್ತು ಕೆಲಸಕ್ಕಾಗಿ ಹಣ ಪಡೆದುಕೊಂಡಿರುವುದು ಮತ್ತು ಗಂಭೀರ ಅಪರಾಧ ಪ್ರಕ್ರಿಯೆಗಳನ್ನು

ಎದುರಿಸುತ್ತಿದ್ದಾರೆ” ಎಂದು ರಾಜಭವನದ ಅಧಿಕೃತ ಹೇಳಿಕೆ ತಿಳಿಸಿದೆ.”ಈ ಸನ್ನಿವೇಶಗಳಲ್ಲಿ ಸಚಿವ ಸಂಪುಟದಿಂದ (Cabinet of Ministers)ಸೆಂಥಿಲ್ ಬಾಲಾಜಿ ಅವರನ್ನು ತಕ್ಷಣದಿಂದಲೇ ಜಾರಿಗೆ

ಬರುವಂತೆ ರಾಜ್ಯಪಾಲರು ವಜಾಗೊಳಿಸಿದ್ದಾರೆ” ಎಂದು ಹೇಳಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಆದರೆ ರಾಜ್ಯಪಾಲರು ಇದು ವಿವಾದ ಸೃಷ್ಟಿಸುತ್ತಿರುವಂತೆಯೇ ಹೆಜ್ಜೆ ಹಿಂದೆ ಇರಿಸಿದ್ದಾರೆ.ಅಟಾರ್ನಿ ಜನರಲ್ ಜತೆ ರಾಜ್ಯಪಾಲರು ಈ ವಿಚಾರದ ಬಗ್ಗೆ ಚರ್ಚಿಸುತ್ತಿದ್ದು, ನಿರ್ಧಾರವನ್ನು ತಡೆಹಿಡಿದಿದ್ದಾರೆ ಎಂದು

ರಾಜ್ಯಪಾಲರ ಕಚೇರಿ ಮೂಲಗಳು ತಿಳಿಸಿದ್ದವು. ಹೀಗಾಗಿ ಸಚಿವರಾಗಿ ಬಾಲಾಜಿ ಮುಂದುವರಿಯಲಿದ್ದಾರೆ ಎಂದಿದ್ದವು. ರಾಜ್ಯಪಾಲರ ಮೂಲ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ

(Supreme Court) ಪ್ರಶ್ನಿಸಲು ಮತ್ತು ಕಡೆಗಣಿಸಲು ತಮಿಳುನಾಡು(Tamil Nadu) ಸರ್ಕಾರ ಚಿಂತನೆ ನಡೆಸಿತ್ತು.

ಡಿಎಂಕೆ ನಾಯಕರ ಆಕ್ರೋಶ

ರಾಜ್ಯಪಾಲರ ವಿರುದ್ಧ ಸುದ್ದಿಗಾರರ ಜತೆ ಮಾತನಾಡಿದ ಎಂಕೆ ಸ್ಟಾಲಿನ್, ಹರಿಹಾಯ್ದಿದ್ದರು. ಅವರಿಗೆ ಸಚಿವರನ್ನು ವಜಾಗೊಳಿಸಲು ಯಾವ ಅಧಿಕಾರವೂ ಇಲ್ಲ.ಸರ್ಕಾರವು ಈ ವಿಚಾರವಾಗಿ

ಎಂದು ತಿಳಿಸಿದ್ದರು.ಡಿಎಂಕೆ ನಾಯಕ ಎ ಸರವಣನ್(A.Saravanan) ರಾಜ್ಯಪಾಲರು ಸಂವಿಧಾನವನ್ನು ಕಡೆಗಣಿಸುತ್ತಿದ್ದಾರೆ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ

ಆದೇಶವು, ಯಾವುದಕ್ಕೂ ಯೋಗ್ಯವಾಗಿಲ್ಲ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ : ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಸೈಬರ್‌ ಸೆಂಟರ್‌ಗಳು ಎಂಬ ಆರೋಪ!

ರಾಜ್ಯಪಾಲರಿಗೆ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಲು ಸಂವಿಧಾನಬದ್ಧ ಅಧಿಕಾರವಿದೆಯೇ? ರಾಜ್ಯಪಾಲರು ಏನಂದುಕೊಂಡಿದ್ದಾರೆ? ಸನಾತನ ಧರ್ಮಕ್ಕಾಗಿ ಅವರು ಕೆಲಸ ಮಾಡುತ್ತಿದ್ದಾರೆ.

ರಾಜ್ಯಪಾಲರು ಸಂವಿಧಾನವನ್ನು ನಿರ್ಲಕ್ಷಿಸುತ್ತಿದ್ದಾರೆ. ಸನಾತನ ಧರ್ಮ ನೆಲದ ಕಾನೂನನ್ನು ನಿರ್ಧರಿಸುವುದಿಲ್ಲ. ರಾಜ್ಯಪಾಲರಿಗೆ ಸಂವಿಧಾನವೇ ಭಗವದ್ಗೀತೆ, ಬೈಬಲ್ (Bible) ಮತ್ತು ಕುರಾನ್

(Kuran). ವಿದೂಷಕನಂತೆ ಅವರು ವರ್ತಿಸುತ್ತಿದ್ದಾರೆ. ತಮ್ಮ ರಾಜಕೀಯ ದಣಿಗಳನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಅವರ ಆದೇಶವು ಮತ್ತು ಅದನ್ನು ಬರೆದ ಕಾಗದಕ್ಕೂ ಯೋಗ್ಯವಾಗಿಲ್ಲ.

ಮೊದಲು ಅದನ್ನು ಕಸದಬುಟ್ಟಿಗೆ ಹಾಕಬೇಕು” ಎಂದು ಸರವಣನ್ ವಾಗ್ದಾಳಿ ನಡೆಸಿದ್ದಾರೆ.

ರಶ್ಮಿತಾ ಅನೀಶ್

Tags: governorTamilnaduv senthil balaji

Related News

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ
ದೇಶ-ವಿದೇಶ

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ

October 2, 2023
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ
ಪ್ರಮುಖ ಸುದ್ದಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ

October 2, 2023
ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.