ತವಾಂಗ್‌ನಲ್ಲಿ ಭಾರತೀಯ ಸೈನಿಕರು ‘ಕಾನೂನು ಬಾಹಿರವಾಗಿ’ ಗಡಿ ದಾಟಿ ದಾಳಿ ನಡೆಸಿದ್ದಾರೆ : ಚೀನಾ

Itanagar : ಭಾರತೀಯ ಸೇನಾ ಪಡೆಗಳು ಅರುಣಾಚಲ ಪ್ರದೇಶದ(Arunachal Pradesh) ತವಾಂಗ್‌ನಲ್ಲಿ(Tawang Border Dispute) ‘ಕಾನೂನು ಬಾಹಿರವಾಗಿ’ ಗಡಿಯನ್ನು ದಾಟಿ ಚೀನಾದ ಸೈನಿಕರ(China Army) ಮೇಲೆ ದಾಳಿ ಮಾಡಿವೆ ಎಂದು ಚೀನಾದ ಪಿಪಲ್ಸ್‌ ಲಿಬರೇಷನ್‌ ಆರ್ಮಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಡಿಸೆಂಬರ್ 9 ರಂದು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನೈಜ ನಿಯಂತ್ರಣ ರೇಖೆ ಅಥವಾ LAC(Tawang Border Dispute) ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿತ್ತು.

ಕೈ ಕೈ ಮಿಲಾಯಿಸಿ ನಡೆದ ಕದನದಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿವೆ. ಆದರೆ ಯಾವುದೇ ಸಾವು ಸಂಭವಿಸಲಿಲ್ಲ!

ಈ ನಡುವೆ ತವಾಂಗ್ ಸೆಕ್ಟರ್‌ನಲ್ಲಿ 200ಕ್ಕೂ ಹೆಚ್ಚು ಚೀನೀ ಸೈನಿಕರು ಮೊನಚಾದ ಕೋಲುಗಳೊಂದಿಗೆ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದ್ದಾರೆ.

ಚೀನಿ ಪಡೆಗಳು ತವಾಂಗ್ ಸೆಕ್ಟರ್‌ನಲ್ಲಿರುವ ಎಲ್‌ಎಸಿಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದೆ ಎನ್ನಲಾಗಿದೆ. ಆದರೆ ನಮ್ಮ ಸೈನಿಕರು ಎದುರಾಳಿಯ ದಾಳಿಯನ್ನು ಹಿಮ್ಮೆಟ್ಟಿಸಿದ್ದಾರೆ.

ಇದನ್ನೂ ಓದಿ : https://vijayatimes.com/messi-speaks-about-retirement/

ಈ ಮುಖಾಮುಖಿಯಲ್ಲಿ ಎರಡೂ ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಅಧಿಕೃತವಾಗಿ ಮಾಹಿತಿ ನೀಡಿದೆ.

ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ,

ತವಾಂಗ್ ಸೆಕ್ಟರ್‌ನಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾ ಪಡೆಗಳ ಪ್ರಯತ್ನವನ್ನು ಭಾರತೀಯ ಸೇನೆಯು ಧೈರ್ಯದಿಂದ ವಿಫಲಗೊಳಿಸಿತು.

ಘರ್ಷಣೆಯಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ ಎಂದು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/childwood-memories-jaggesh/

ಚೀನಿ ಪಡೆಗಳ ದಾಳಿಯ ನಂತರ ಭಾರತ-ಚೀನಾ ಗಡಿಯಲ್ಲಿ(India-China Border) ಸೇನೆಯ ನಿಯೋಜನೆಯನ್ನು ಹೆಚ್ಚಿಸಲಾಗಿದೆ.

ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಸೇನೆಯ ಮೂರು ಪಡೆಗಳಿಗೆ ಸೂಚನೆ ನೀಡಲಾಗಿದೆ.

ಇನ್ನು ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಹಂತದ ಮಾತುಕತೆಗಳ ಮೂಲಕ ಗಡಿ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಕಳೆದ ಶುಕ್ರವಾರದ ನಂತರ ಈ ಹೇಳಿಕೆ ನೀಡಿದ್ದರು. ಸದ್ಯ ಚೀನಾ-ಭಾರತ ನಡುವಿನ ಮಾತುಕತೆ ಇದೀಗ ಸ್ಥಗಿತಗೊಂಡಿದೆ.

Exit mobile version