ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ: ಹಸಿರು ಮಾರ್ಗದ ರೈಲು ಸಂಚಾರ ನಿಷೇಧ

Bengaluru: ಇಂದು ಮುಂಜಾನೆ (ಅ.3) ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ರಾಜಾಜಿನಗರ (Rajajinagar) ನಿಲ್ದಾಣಕ್ಕೆ ರೈಲುಗಳ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಎಂಆರ್‌ಸಿಎಲ್‌ (BMRCL) ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ನೀಡಿದ್ದು, ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ರೈಲುಗಳ ಸಂಚಾರ ಇರುವುದಿಲ್ಲ. ಹಸಿರು ಮಾರ್ಗದ ರೈಲುಗಳು ನಾಗಸಂದ್ರದಿಂದ ಯಶವಂತಪುರ (Yashavantapura) ಹಾಗೂ ರೇಷ್ಮೆ ಸಂಸ್ಥೆಯಿಂದ ಮಂತ್ರಿಸ್ಕ್ವೇರ್‌ ಸಂಪಿಗೆ ರಸ್ತೆವರೆಗೂ ಮಾತ್ರ ಸಂಚಾರ ನಡೆಸಲಿವೆ ಎಂದು ತಿಳಿಸಲಾಗಿದೆ.

ಈ ನಿಲ್ದಾಣದಲ್ಲಿ ಯಾವ ರೀತಿಯ ತಾಂತ್ರಿಕ ಸಮಸ್ಯೆಯಾಗಿದೆ. ಯಾವಾಗ ಮತ್ತೆ ರೈಲು ಸಂಚಾರ ಶುರುವಾಗುತ್ತದೆ ಎಂಬ ಬಗ್ಗೆ ಬಿಎಂಆರ್‌ಸಿಎಲ್‌ ತಿಳಿಸಿಲ್ಲ. ರೈಲುಗಳ ಸಂಚಾರ ವ್ಯತ್ಯಯವಾಗಲಿದೆ ಎಂದು ಎಂದಷ್ಟೇ ಹೇಳಲಾಗಿದೆ.

ಮಂಗಳವಾರ (ಅ.3) ಬೆಳಿಗ್ಗೆ ರಾಜಾಜಿನಗರ ಮೆಟ್ರೋ ನಿಲ್ದಾಣವನ್ನು ಸಂಚಾರ ವ್ಯತ್ಯಾಸ ಇರುವುದರಿಂದ ಬಂದ್‌ (Bandh) ಮಾಡಲಾಗಿದ್ದು, ಆಗಮಿಸುತ್ತಿರುವ ಪ್ರಯಾಣಿಕರಿಗೆ ಬದಲಿ ನಿಲ್ದಾಣದಿಂದ ಸಂಚಾರ ನಡೆಸುವಂತೆ ಮೆಟ್ರೋ ಭದ್ರತಾ ಸಿಬ್ಬಂದಿಗಳು ತಿಳಿಸುತ್ತಿದ್ದಾರೆ.

ನಾಗಸಂದ್ರ (Nagasandra) ಕಡೆ ಸಾಗುವವರು ಇತರೆ ಸಾರಿಗೆ ಅವಲಂಬನೆ ಅನಿವಾರ್ಯ
ಮೆಜೆಸ್ಟಿಕ್‌ನಿಂದ (Majestic) ರಾಜಾಜಿನಗರ ಮತ್ತು ಆ ನಂತರದ ನಿಲ್ದಾಣಗಳಿಗೆ ಗ್ರೀನ್‌ಲೈನ್‌ನಲ್ಲಿ (Greenline) ತೆರಳಬೇಕು ಎನ್ನುವವರು ಬದಲಿ ಸಾರಿಗೆ ವ್ಯವಸ್ಥೆಯನ್ನು ಬಳಸಬೇಕಿರುವುದು ಅನಿವಾರ್ಯವಾಗಿದೆ. ಇನ್ನು ನಾಗಸಂದ್ರ ಇಳಿದು ನಗರದ ಕೇಂದ್ರ ಭಾಗಕ್ಕೆ ಆಗಮಿಸುತ್ತೇನೆ ಎನ್ನುವವರು ಕೂಡ ಬದಲಿ ಮಾರ್ಗ ಬಳಸಬೇಕಾಗಿದೆ.

ಭವ್ಯಶ್ರೀ ಆರ್.ಜೆ

Exit mobile version