ತೃತೀಯಲಿಂಗಿ ಜೋಡಿಯ ಮದುವೆಗೆ ಅನುಮತಿ ನಿರಾಕರಿಸಿದ ದೇವಸ್ಥಾನದ ಮಂಡಳಿ : ವರದಿ

Kerala : ಗುರುವಾರ ಕೇರಳದ ಪಾಲಕ್ಕಾಡ್ ಜಿಲ್ಲೆಯ ದೇವಸ್ಥಾನದಲ್ಲಿ ತೃತೀಯಲಿಂಗಿ ದಂಪತಿಗೆ(Temple denies permission) ದೇವಸ್ಥಾನದ ಆವರಣದಲ್ಲಿ ಮದುವೆಯಾಗಲು ಕೋರಿದ ಅನುಮತಿಯನ್ನು ನಿರಾಕರಿಸಿದೆ ಎನ್ನಲಾಗಿದೆ.

ನೀಲನ್ ಕೃಷ್ಣ ಮತ್ತು ಅಡ್ವೈಕಾ ಎಂಬ ತೃತೀಯಲಿಂಗಿ ಜೋಡಿಗಳ ವಿವಾಹ(Temple denies permission) ಸಮಾರಂಭವನ್ನು ಗುರುವಾರ ಬೆಳಿಗ್ಗೆ ನಿಗದಿಪಡಿಸಲಾಗಿತ್ತು.

ಆದರೆ ಅವರಿಬ್ಬರ ಆಧಾರ್ ಕಾರ್ಡ್‌ಗಳಲ್ಲಿ ಇಬ್ಬರೂ ಪುರುಷರು ಎಂದು ನಮೂದಿಸಿರುವ ಕಾರಣ ದೇವಾಲಯದಲ್ಲಿ ವಿವಾಹವನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಜೋಡಿಗೆ ತಿಳಿಸಿದ್ದಾರೆ.

ಮದುವೆಗೆ ನಿರಾಕರಿಸಿದ ಕೂಡಲೇ ತೃತೀಯಲಿಂಗಿ ಜೋಡಿ ಮದುವೆಯ ಸ್ಥಳವನ್ನು ಅಂತಿಮವಾಗಿ ಬದಲಾಯಿಸಿಕೊಂಡಿದ್ದಾರೆ ಮತ್ತು ದಂಪತಿಗಳ ಸ್ನೇಹಿತರು ಸ್ಥಳವನ್ನು ಬದಲಾಯಿಸುವಲ್ಲಿ ಶ್ರಮಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/highcourt-dismissed-kantara-petition/

ಮದುವೆ ಮೊದಲು ನಿಶ್ಚಯಗೊಂಡಿದ್ದ ದೇವಸ್ಥಾನದ ಆಡಳಿತ ಮಂಡಳಿ ಬಳಿಕ ನಮ್ಮ ಮದುವೆ ಇಲ್ಲಿ ನಡೆಯುವುದು ಬೇಡವೆಂದು ನಿರಾಕರಿಸಿದರು ಎಂದು ತೃತೀಯಲಿಂಗಿ ಜೋಡಿ ಆರೋಪಿಸಿದೆ.

ಆದ್ರೆ, ಈ ಬಗ್ಗೆ ಸ್ವತಃ ದೇವಸ್ಥಾನದ ಮಂಡಳಿ ಅಧಿಕಾರಿಗಳು ಮಾತನಾಡಿದ್ದು,

ತೃತೀಯ ಲಿಂಗಿ ಜೋಡಿಯ ಮದುವೆ ಮಾಡಲು ನಾವು ಎಲ್ಲಾ ಸಿದ್ಧತೆಗಳನ್ನು ಹಮ್ಮಿಕೊಂಡಿದ್ದೆವು,

ಅಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಅರ್ಚಕರನ್ನು ಕೂಡ ನೇಮಿಸಲಾಗಿತ್ತು.

ಮದುವೆ ಸಮಾರಂಭಕ್ಕೆ ನಾವು ಅನುಮತಿ ನಿರಾಕರಿಸಲಿಲ್ಲ! ಆದರೆ ಅವರಿಬ್ಬರ ಆಧಾರ್ ಕಾರ್ಡಿನಲ್ಲಿ(Aadhar Card) ಇಬ್ಬರು ಪುರುಷರು ಎಂದೇ ನಮೂದನೆಯಾಗಿತ್ತು.

https://youtu.be/cvWkSjzuPg0

ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ದೇವಸ್ಥಾನದ ಮಂಡಳಿಯ ಅಧಿಕಾರಿಗಳು ಮತ್ತು ವಿವಾಹ ನೋಂದಣಿ ವಿಭಾಗದೊಂದಿಗೆ ಮಾತನಾಡಲು ಮಾತ್ರ ನಾವು ಕೇಳಿದೆವು ಅಷ್ಟೇ.

ಈ ದೇವಾಲಯದಲ್ಲಿ ಈ ಹಿಂದೆ ಅಂತಹ ಯಾವುದೇ ಮದುವೆಗಳು ಕೂಡ ನಡೆದಿಲ್ಲ ಮತ್ತು ಅವರು ಸ್ಪಷ್ಟೀಕರಣವನ್ನು ಮಾತ್ರ ಕೇಳಿದ್ದಾರೆಯೇ ಹೊರತು,

ಮದುವೆ ನಡೆಸುವುದು ಬೇಡ ಎಂದು ಎಲ್ಲಿಯೂ ಹೇಳಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಯಾವುದೇ ವಿವಾದವನ್ನು ತಪ್ಪಿಸಲು ನಾವು ದೇವಸ್ಥಾನದ ಮಂಡಳಿಯ ಅಧ್ಯಕ್ಷರು ಮತ್ತು ಇತರರಿಂದ ಅನುಮತಿ ಪಡೆಯಲು ಮಾತ್ರ ಕೇಳಿದ್ದೇವೆ.

ಅಂತಹ ಸಂದರ್ಭದಲ್ಲಿ ದೇವಸ್ಥಾನದ ನೌಕರರು ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ದೇವಸ್ಥಾನದ ಮಂಡಳಿ ಅವರು ತಮ್ಮ ನಿರ್ಧಾರ ಹೇಳುವಷ್ಟರಲ್ಲಿ ಅವರು ಬೇರೆ ದೇವಸ್ಥಾನದ ಸ್ಥಳವನ್ನು ಹುಡುಕಿ ಹೋಗಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ಹೇಳಿದರು.

https://youtu.be/cGcAHe7IqIA ಕೆ.ಆರ್ ರಸ್ತೆಯಲ್ಲಿ ಚೆಂದದ ಬಿದಿರು ಮಾರುವ ಬಡ ಕುಟುಂಬಗಳು.

ಈ ಘಟನೆ ಭಾರಿ ಚರ್ಚೆಗೆ ಕಾರಣವಾದ ಹಿನ್ನೆಲೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಮಲಬಾರ್ ದೇವಸ್ವಂ ಮಂಡಳಿ ತಿಳಿಸಿದೆ.

ವಿವಾದವನ್ನು ಸೃಷ್ಟಿಸಿದ ಬಳಿಕ ದೇವಾಲಯದ ಆಡಳಿತ ಮಂಡಳಿ ಈ ರೀತಿ ಹೇಳಿಕೆ ನೀಡಿದೆ ಮತ್ತು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದೆ ಎಂದು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/uttarakhand-madarasa/

“ತೃತೀಯಲಿಂಗಿ ಜೋಡಿಗೆ ಮದುವೆಯಾಗಲು ಮತ್ತು ಒಟ್ಟಿಗೆ ವಾಸಿಸಲು ಎಲ್ಲ ಹಕ್ಕಿದೆ. ಹಲವು ತೀರ್ಪುಗಳು ಬಂದರೂ ಸಮಾಜ ಇನ್ನೂ ಬದಲಾಗಿಲ್ಲ.

ಪ್ರತಿಯೊಬ್ಬರೂ ಟ್ರಾನ್ಸ್‌ಜೆಂಡರ್ ಸಮುದಾಯ(Transgender Community) ಮತ್ತು ಅವರ ಹಕ್ಕುಗಳ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಾರೆ.

ಆದ್ರೆ, ನೆಲದ ವಾಸ್ತವತೆಯು ವಿಭಿನ್ನವಾಗಿದೆ ಎಂದು ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ರಂಜಿನಿ ಗುಡುಗಿದ್ದಾರೆ.

ತಾರತಮ್ಯವನ್ನು ಕೊನೆಗಾಣಿಸಿ ಸಮಾಜದಲ್ಲಿ ಎಲ್ಲರಂತೆ ಬದುಕುವಂತೆ ಉದ್ದೇಶಪೂರಕವಾಗಿ 2015ರಲ್ಲಿ ಟ್ರಾನ್ಸ್‌ಜೆಂಡರ್ ನೀತಿಯನ್ನು ತಂದ ಮೊದಲ ರಾಜ್ಯ ಕೇರಳ ರಾಜ್ಯಕ್ಕೆ ಸಲ್ಲುತ್ತದೆ ಎಂದು ವಾದಿಸಿದರು.

Exit mobile version