ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

thamara

ಕೆಲವರಿಗೆ ತಾಯಿಯಾಗುವುದು ಅತ್ಯಂತ ಸಾಮಾನ್ಯ ವಿಷಯ. ಆದರೆ ಕೆಲವು ಪ್ರೆಗ್ನೆಂಸಿ ವಿಚಿತ್ರ ಕಾರಣಗಳಿಂದಾಗಿ ಚರ್ಚೆಯಾಗುತ್ತದೆ. ಅದೇ ರೀತಿ ದಕ್ಷಿಣ ಆಫ್ರಿಕಾದ(South Africa) ಈ ಮಹಿಳೆ(Women) ಸುದ್ದಿಯಲ್ಲಿದ್ದಾರೆ. 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್(Gosium Thamara Sithol) ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಅತಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಎಂಬ ಕೀರ್ತಿ ಇವಳ ಮುಡಿ ಸೇರಿದೆ.

ಸಿಥೋಲ್ ಪ್ರೆಗ್ನೆಂಸಿ ಹೇಗಿತ್ತು ಮತ್ತು ಅವರ ಮಕ್ಕಳು ಹೇಗಿವೆ? ಇಲ್ಲಿದೆ ಮಾಹಿತಿ. ದಕ್ಷಿಣ ಆಫ್ರಿಕಾದ 37 ವರ್ಷ ವಯಸ್ಸಿನ ಗೋಸಿಯಮ್ ತಮಾರಾ ಸಿಥೋಲ್ ಒಂದೇ ಬಾರಿಗೆ ಅತಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜೂನ್ 7 ರಂದು ತಮ್ಮ ಪತ್ನಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಗೋಸಿಯಾಮಿ ತಮಾರಾ ಸಿಥೋಲ್ ಅವರ ಪತಿ ಟೆಬೊಹೊ ತ್ಸೊಟೆಟ್ಸಿ ಹೇಳಿದ್ದಾರೆ. ಇದರಲ್ಲಿ 7 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳಿವೆ. ಪ್ರಿಟೋರಿಯಾ ನಗರದ ಆಸ್ಪತ್ರೆಯಲ್ಲಿ ಅವರ ಡೆಲಿವರಿಯನ್ನು ಸಿ ಸೆಕ್ಷನ್ ಮೂಲಕ ಮಾಡಲಾಯಿತು.

ಎಲ್ಲಾ ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಏಕಕಾಲದಲ್ಲಿ ಹೆಚ್ಚು ಮಕ್ಕಳನ್ನು ಹೆತ್ತ ವಿಶ್ವ ದಾಖಲೆಯನ್ನು ಸಿಥೋಲ್ ಹೊಂದಿದ್ದಾರೆ. ಈ ಮಕ್ಕಳ ಜನನದ ನಂತರ ಸಿಥೋಲ್ ಮತ್ತು ಅವಳ ಪತಿ ತುಂಬಾ ಸಂತೋಷವಾಗಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ 25 ವರ್ಷದ ಮಾಲಿ ಎಂಬ ಮಹಿಳೆ ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದರು. ಮೊರಾಕೊದಲ್ಲಿ 5 ಹೆಣ್ಣು ಮತ್ತು 4 ಗಂಡು ಮಕ್ಕಳಿಗೆ ಜನ್ಮ ನೀಡಿದ ಆ ಮಹಿಳೆಯ ರೆಕಾರ್ಡ್‌ ಈಗ ಸಿಥೋಲ್‌ ಬ್ರೇಕ್‌ ಮಾಡಿದ್ದಾರೆ. ಅದಕ್ಕೂ ಮೊದಲು, 2009 ರಲ್ಲಿ, 45 ವರ್ಷದ ನಾಡಿಯಾ ಸುಲೈಮಾನ್ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿಎಂಟು ಮಕ್ಕಳಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದರು.

ಸಿಥೋಲ್ ಅವರ ಪತಿ ನಾನು 8 ಮಕ್ಕಳನ್ನು ನಿರೀಕ್ಷಿಸುತ್ತಿದ್ದೆವು. ಆದರೆ ನಂತರ ಸಿಥೋಲ್ ಗರ್ಭದಲ್ಲಿ 10 ಮಕ್ಕಳಿವೆ ಎಂದು ತಿಳಿದುಬಂದಿದೆ. 2 ಮಕ್ಕಳು ಎರಡನೇ ಟ್ಯೂಬ್‌ನಲ್ಲಿ ಸಿಲುಕಿಕೊಂಡ ಕಾರಣದಿಂದ ಸೋನೋಗ್ರಫಿಯಲ್ಲಿ ಕಾಣಿಸಿರಲಿಲ್ಲ. ಏಕಕಾಲದಲ್ಲಿ ಇಷ್ಟು ಮಕ್ಕಳನ್ನು ಡೆಲಿವರಿ ಮಾಡುವುದು ಕಷ್ಟಕರವಾಗಿತ್ತು. ಆದರೆ ಎಲ್ಲಾ ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಶಿಶುಗಳನ್ನು ಕೆಲವು ದಿನಗಳವರೆಗೆ ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿವೆ ಮತ್ತುಕೆಲವು ದಿನಗಳ ನಂತರ ಅವರನ್ನು ಮನೆಗೆ ಕರೆದೊಯ್ಯಬಹುದು.

ಸಿಥೋಲ್ಗರ್ಭದಲ್ಲಿ ತುಂಬಾಮಕ್ಕಳು ಇರುವುದು ತಿಳಿದಾಗ, ಮಕ್ಕಳ ಆರೋಗ್ಯದ ಬಗ್ಗೆ ಅವಳು ಹೆದರುತ್ತಿದ್ದರು. ಆರಂಭದಲ್ಲಿ ಕೆಲವು ತೊಂದರೆಗಳು ಇದ್ದವು, ಆದರೆ ನಂತರ ಎಲ್ಲವೂ ಚೆನ್ನಾಗಿತ್ತು ಎಂದು ವೈದ್ಯರು ಹೇಳುತ್ತಾರೆ.

Exit mobile version