ಪಾದಗಳಲ್ಲಿ ಉಂಟಾಗುವ ಬಿರುಕಿಗೆ ಇಲ್ಲಿದೆ ಸರಳ ಮನೆಮದ್ದು..!

Health : ಚಳಿಗಾಲ ಮತ್ತು ಬೇಸಿಗೆಯಲ್ಲಿ ಪಾದಗಳಲ್ಲಿ ಬಿರುಕು (Cracked heels) ಬಿಡುವ ಸಮಸ್ಯೆ ಅನೇಕ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆ ಈ ಸಮಸ್ಯೆ ಅತಿಯಾಗಿ ಬಾಧಿಸಿ, ನಡೆಯಲು ಕಷ್ಟಪಡುವಂತೆ (tips for cracked feet) ಮಾಡುತ್ತದೆ.

ಒಡೆದ ಮತ್ತು ಬಿರುಕು ಬಿಟ್ಟ ಪಾದಗಳು ಪುರುಷರು ಮತ್ತು ಸ್ತ್ರೀಯರೂ ಸೇರಿದಂತೆ ಬಹುತೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ.

ರಕ್ತಸ್ರಾವ ಆಗುವುದು, ಅತಿಯಾದ ನೋವು, ಚಪ್ಪಲಿ ಧರಿಸಲು ಸಾಧ್ಯವಾಗದಿರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಇದಕ್ಕೆ ಸರಳ ಮನೆಮದ್ದು ಮತ್ತು ಆರೈಕೆ ಇಲ್ಲಿದೆ.

• ಪ್ರತಿ ದಿನ ಸ್ನಾನದ ನಂತರ ವ್ಯಾಸಲೀನ್ ಅನ್ನು(Vaseline) ಪಾದಗಳಿಗೆ ಹಚ್ಚಿ ಒಂದೆರಡು ನಿಮಿಷಗಳ ಕಾಲ ಮಸಾಜು ಮಾಡಬೇಕು.

• ಪಾದಗಳನ್ನು 20 ನಿಮಿಷ ಉಗುರುಬೆಚ್ಚಗಿನ ನೀರಿನಲ್ಲಿ ಇರಿಸಿ ನಂತರ ಸ್ಕ್ರಬ್ ಮಾಡಿ ಮಾಯಿಶ್ಚರ್ ಕ್ರೀಮನ್ನು (Moisturizer cream) ಹಚ್ಚಿಕೊಳ್ಳಬೇಕು.

• ಪಾದಗಳಲ್ಲಿ ಬಿರುಕು ಉಂಟಾಗಲು ಮುಖ್ಯ ಕಾರಣವೆಂದರೆ, ಪಾದಗಳ ಚರ್ಮದಲ್ಲಿ ನೀರಿನ ಅಂಶ ಕಡಿಮೆಯಾಗುವುದು ಮತ್ತು ಬೇಸಿಗೆಯಲ್ಲಿ ತೇವಾಂಶದ ನಷ್ಟದಿಂದಾಗಿ ಚರ್ಮ ಒಣಗುವುದು.

ಅದರಿಂದ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಹೀಗಾಗಿ ಹೆಚ್ಚು ನೀರು ಕುಡಿಯುವುದು ಉತ್ತಮ.

https://vijayatimes.com/somanna-joining-congress/

• ರಾತ್ರಿ ಮಲಗುವಾಗ ಮೃದುವಾದ ಹತ್ತಿ ಸಾಕ್ಸ್ ಗಳನ್ನು ಹಾಕಿಕೊಂಡು ಮಲಗಬೇಕು. ಇದರಿಂದ ಪಾದಗಳಲ್ಲಿ ತೇವಾಂಶ ಉಳಿದು ಪಾದಗಳು ಒಣಗುವುದಿಲ್ಲ.

• ವ್ಯಾಸಲಿನ್ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬೇಕು. ಅದು ಹಿಮ್ಮಡಿಗಳ ಆಳಕ್ಕಿಳಿದು ರಕ್ತಸ್ರಾವವನ್ನು ತಡೆಗಟ್ಟುತ್ತದೆ.

• ಗಾಳಿ ಮತ್ತು ಬಿಸಿಲಿಗೆ ತೆರೆದುಕೊಂಡಾಗ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಹೀಗಾಗಿ ಹಿಮ್ಮಡಿಗಳನ್ನು ರಕ್ಷಿಸಿಕೊಳ್ಳಲು ಬೂಟುಗಳನ್ನು ಮತ್ತು ಹತ್ತಿ ಕಾಲು ಚೀಲುಗಳನ್ನು ಧರಿಸಬೇಕು.

• ಪ್ರತಿದಿನ ಪಾದದ ಆರೈಕೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಹಚ್ಚಬೇಕು.

• ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಸೇರಿಸಿ ಹತ್ತು ನಿಮಿಷಗಳ ಕಾಲ ಅದರೊಳಗೆ ಪಾದಗಳನ್ನು ಇಟ್ಟುಕೊಳ್ಳಿ.

• ಮೂರು ಚಮಚ ಗ್ಲಿಸರಿನ್ಗೆ (Glycerin) ಒಂದು ಚಮಚ ರೋಸ್ ವಾಟರ್ ಸೇರಿಸಿ ಒಡೆದ ಪಾದಗಳಿಗೆ ಹಚ್ಚಿಕೊಳ್ಳುವುದರಿಂದಲೂ ಬಿರುಕು ಬಿಟ್ಟ ಪಾದಗಳು ಮೃದುವಾಗುತ್ತವೆ.

• ಒಂದು ಚಮಚ ಅಕ್ಕಿ ಹಿಟ್ಟಿಗೆ, ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸ ಮಿಶ್ರಣ ಮಾಡಿ ಪಾದಗಳನ್ನು ಸ್ಕ್ರಬ್ ಮಾಡಬೇಕು.

• ಒಂದು ಚಮಚ ಎಳ್ಳಿನ ಎಣ್ಣೆಯನ್ನು (Sesame oil) ಬಿಸಿ ಮಾಡಿ ಹಿಮ್ಮಡಿ ಮೇಲೆ ಲಘುವಾಗಿ ಮಸಾಜ್ ಮಾಡಬೇಕು.

Exit mobile version