New Delhi: ಗಗನಕ್ಕೇರುತ್ತಿರುವ ದೇಶೀಯ ಟೊಮೇಟೊ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದೀಗ ಸಬ್ಸಿಡಿ (tomatoes Sell Seventy rupees) ದರದಲ್ಲಿ ಮಾರಾಟವಾಗುವ
ಟೊಮೆಟೊ (Tometo)ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಕೇಂದ್ರ ಸರ್ಕಾರ ಗುರುವಾರದಿಂದ ಸಬ್ಸಿಡಿ ಟೊಮೆಟೊ ಬೆಲೆಯನ್ನು ಕೆಜಿಗೆ 80 ರೂ. ಬದಲಾಗಿ 70 ರೂ.ಗೆ ಇಳಿಸಿದೆ. ಈ ರೀತಿಯಾಗಿ,
ಬೆಲೆಗಳನ್ನು ಕಡಿಮೆ ಮಾಡಲು ಮತ್ತಷ್ಟು ಪ್ರಯತ್ನಗಳನ್ನು (tomatoes Sell Seventy rupees) ನಡೆಸುತ್ತಿವೆ.
ಬೆಲೆ ಏರಿಕೆಯಿಂದ ಆಘಾತಕ್ಕೊಳಗಾದ ಗ್ರಾಹಕರಿಗೆ ಸಹಾಯ ಮಾಡಲು, ಕೇಂದ್ರವು ದೆಹಲಿಯ(Delhi) ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಇತರ ಕೆಲವು ಪ್ರಮುಖ ನಗರಗಳಲ್ಲಿ ಸಬ್ಸಿಡಿ
ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿದೆ. ರಾಷ್ಟ್ರೀಯ ಗ್ರಾಹಕ ಸಹಕಾರ ಸಂಘಗಳ ಒಕ್ಕೂಟ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ
(NAFD) ಪ್ರತಿ ಕೆಜಿಗೆ 80 ರೂ.ಗೆ ಸಬ್ಸಿಡಿ ದರದಲ್ಲಿ ಜನರಿಗೆ ಟೊಮೆಟೊ ಮಾರಾಟ ಮಾಡುತ್ತಿವೆ.
ಸಂಸ್ಥೆಗಳು ಗುರುವಾರದಿಂದ ಕೆಜಿಗೆ 70 ರೂ. ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿವೆ. ಈ ಮೂಲಕ ಬೆಲೆ ಏರಿಕೆಯಿಂದ ಆಘಾತಕ್ಕೊಳಗಾದವರ ಜನರ ನೆರವಿಗೆ ಧಾವಿಸಲಿವೆ.
ಭಾರತದಾದ್ಯಂತ ಟೊಮೆಟೊಗಳ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 120 ರೂ.ನಷ್ಟಿದ್ದವು ಇನ್ನು ಕೆಲವೆಡೆ ಕಿಲೋ ಟೊಮೆಟೊ 245 ರೂ.ಗೆ ಮಾರಾಟವಾಗುತ್ತಿದೆ.
ಆದರೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆ.ಜಿ ಟೊಮೆಟೊ ದರ 120 ರೂ.ಗೆ ಕೇಂದ್ರದ ಕ್ರಮದ ಬಳಿಕ ಇಳಿಕೆಯಾಗಿದೆ. ಇದೀಗ ಕೇಂದ್ರ ಸರಕಾರ ಸಬ್ಸಿಡಿ ಟೊಮೆಟೊ ದರವನ್ನು ಇಳಿಕೆ ಮಾಡಿ,
ಮುಕ್ತ ಮಾರುಕಟ್ಟೆ ದರವನ್ನು ಮತ್ತಷ್ಟು ಇಳಿಕೆ ಮಾಡಲು ಮುಂದಾಗಿದೆ. ಆರಂಭದಲ್ಲಿ ಕೆ.ಜಿಗೆ 90 ರೂ.ನಂತೆ ಎನ್‌ಸಿಸಿಎಫ್ ಮತ್ತು ನಾಫೆಡ್(Nafed) ಸಂಗ್ರಹಿಸಿದ ಟೊಮೆಟೊಗಳನ್ನು ಮಾರಾಟ ಮಾಡಲಾಗಿತ್ತು.
ಇದನ್ನೂ ಓದಿ : 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !
ನಂತರ ಟೊಮೆಟೊ ದರವನ್ನು ಪ್ರತಿ ಕೆ.ಜಿಗೆ 80 ರೂ.ಗೆ ಜುಲೈ 16ರಿಂದ ಇಳಿಸಲಾಗಿತ್ತು. ಇದೀಗ 70 ರೂ.ಗೆ ಇದೇ ಟೊಮೆಟೊ ದರವನ್ನು ಇಳಿಕೆ ಮಾಡಲಾಗಿದೆ.
ಆಂಧ್ರ ಪ್ರದೇಶ (Andhra Pradesh), ಕರ್ನಾಟಕ(Karnataka) ಮತ್ತು ಮಹಾರಾಷ್ಟ್ರದ(Maharashtra) ಮಂಡಿಗಳಿಂದ ಸರಕಾರದ ನಿರ್ದೇಶನದ ಮೇರೆಗೆ ಟೊಮೆಟೊ ಖರೀದಿಯನ್ನು
ಎನ್‌ಸಿಸಿಎಫ್ ಮತ್ತು ನಾಫೆಡ್ ಪ್ರಾರಂಭಿಸಿವೆ. ಪೂರೈಕೆಯಲ್ಲಿ ಮುಂಗಾರು ಮಳೆಯಿಂದಾಗಿ ವ್ಯತ್ಯಯ ಉಂಟಾಗಿದ್ದು, ಟೊಮೆಟೊ ದರದಲ್ಲಿ ತೀವ್ರ ಏರಿಕೆಯಾಗಿದೆ.
ರಶ್ಮಿತಾ ಅನೀಶ್