ಮಿತಿ ಮೀರಿದ ಸಾಲ, ಭ್ರಷ್ಟಾಚಾರದಿಂದ ವಿಶ್ವದ ಅನೇಕ ದೇಶಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ 10 ದೇಶಗಳು ಸದ್ಯವೇ ದಿವಾಳಿಯಾಗಿ (TOP 10 BANKRUPTCY COUNTRIES) ಬೀದಿಗೆ ಬೀಳೋ

ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ದೇಶಗಳನ್ನು ಆಳುವ ನಾಯಕರ ದುಂದಾವರ್ತನೆ, ಮಿತಿ ಮೀರಿದ ಭ್ರಷ್ಟಾಚಾರ ಹಾಗೂ ವಿಪರೀತ ಸಾಲದಿಂದ ಈ ಭಾರೀ ಸಂಕಷ್ಟ ಎದುರಾಗಿದೆ. ನಾಯಕರು ಮಾಡುತ್ತಿರುವ
ತಪ್ಪುಗಳಿಂದ ಜನರು ಊಟಕ್ಕೂ ಗತಿ ಇಲ್ಲದೆ ಬಳಲುವ ಭೀಕರ ಪರಿಸ್ಥಿತಿ ಎದುರಾಗಿದೆ. ಹಾಗಾದ್ರೆ ಬನ್ನಿ ವಿಶ್ವದ ಟಾಪ್ 10 ಪಾಪರಾಗುತ್ತಿರುವ ದೇಶಗಳ ಪಟ್ಟಿ ನೋಡೋಣ.
ಇದನ್ನು ಓದಿ: ಮುನಿ ಮರ್ಡರ್ ಸೀಕ್ರೆಟ್ : ಜೈನ ಮುನಿ ಹಂತಕರಿಗೆದೆಯಾ ಉಗ್ರರ ನಂಟು? 6 ಲಕ್ಷ ಸಾಲವೇ ಸಾವಿಗೆ ಕಾರಣನಾ?
ನಂಬರ್ 10 ಪಾಪರ್ ರಾಷ್ಟ್ರ: ಅರ್ಜೆಂಟೈನಾ
ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರಗಳ ಪೈಕಿ 10 ಸ್ಥಾನದಲ್ಲಿದೆ ಅರ್ಜೆಂಟೈನಾ. ಯಸ್ ಅರ್ಜೆಂಟೈನಾ ಅಂದಾಗ ನಮಗೆ ಫುಟ್ಬಾಲ್ ನೆನಪಾಗುತ್ತೆ.
ಇದು ದಕ್ಷಿಣ ಅಮೇರಿಕಾದ ಅತೀ ದೊಡ್ಡ ಆರ್ಥಿಕತೆ ಹೊಂದಿರೋ ದೇಶ. ಆದ್ರೆ ಈಗ ಇಲ್ಲಿ ಬಡತನ ಮತ್ತು ಅನಕ್ಷರತೆ ಅನ್ನೋದು ಕಾಲ್ ಮುರ್ಕೊಂಡು ಬಿದ್ದಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಸಕರಾರ ಮಾಡಿರುವ ವಿಪರೀತ
ಸಾಲ. ಈ ರಾಷ್ಟ್ರ 150 ಮಿಲಿಯನ್ ಡಾಲರ್ ಸಾಲ ಮಾಡಿಕೊಂಡಿದೆ. ಇದರಿಂದ ಇಲ್ಲಿನ ಹಣದುಬ್ಬರ ಗಗನಕ್ಕೇರಿದೆ, ಜನರನ್ನು ನಿರುದ್ಯೋಗ, ಬಡತನ, ಹಸಿವು ಭೀಕರವಾಗಿ ಕಾಡುತ್ತಿದೆ.
ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ ಇಲ್ಲಿನ ಸರ್ಕಾರದ ಬಳಿ ದೇಶ ನಡೆಸಲು ಹಣವೇ ಇಲ್ಲ.
ನಂಬರ್ 9 ಪಾಪರ್ ರಾಷ್ಟ್ರ: ಉಕ್ರೇನ್
ಉಕ್ರೇನ್, ರಷ್ಯಾ ಯುದ್ಧ ಸಾರಿದ ರಾಷ್ಟ್ರ. ತೈಲ ಸಂಪದ್ಭರಿತ ರಾಷ್ಟ್ರವೊಂದು ಯುದ್ಧದಿಂದಾಗಿ ಆರ್ಥಿಕವಾಗಿ ಕುಸಿದು ಬಿದ್ದ ನತದೃಷ್ಟ ದೇಶವಾಗಿದೆ. ಉಕ್ರೇನ್ನ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ.
ಇದರ ಸಾಲದ ಹೊರೆ 10 ಬಿಲಿಯನ್ ನಿಂದ 100 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಯುದ್ಧದ ಬಳಿಕ ಇಲ್ಲಿ ಆಹಾರದ ಕೊರತೆವುಂಟಾಗಿದೆ. ಬಡತನ, ಭ್ರಷ್ಟಾಚಾರ ಭಯಾನಕ ರೂಪ ತಾಳಿದೆ,
ಯುದ್ಧದಿಂದಾಗಿ ಆರ್ಥಿಕತೆವಾಗಿ ದುರ್ಬಲಗೊಂಡ ರಾಷ್ಟ್ರ(TOP 10 BANKRUPTCY COUNTRIES) ಉಕ್ರೇನ್.
ನಂಬರ್ 8 ಪಾಪರ್ ರಾಷ್ಟ್ರ: ಟುನೀಶಿಯಾ
ಆಫ್ರಿಕಾದ ಟುನೀಶಿಯಾ ಆರ್ಥಿಕವಾಗಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಮೊದಲೇ ಬಡತನವನ್ನ ಹೊದ್ದು ಮಲಗಿರುವ ಈ ದೇಶದ ಮೀಸಲು ನಿಧಿ 24 ಶೇಕಡಾದಷ್ಟು ಕುಸಿದಿದೆ. ಇದರ ಪರಿಣಾಮ ಜನರ
ಸಂಬಳದಲ್ಲಿ ಕಡಿತ, ಪಿಂಚಣಿಗಳಲ್ಲಿ ಕಡಿತ ಮಾಡಲಾಗಿದೆ. ಸರ್ಕಾರದ ಬಳಿ ಮೀಸಲು ನಿಧಿಯ ಕೊರತೆಯಿಂದ ಆಹಾರ ಪದಾರ್ಥಗಳ ಆಮದಿಗೆ ಹಣವೇ ಇಲ್ಲದಂತಾಗಿದೆ.
ನಂಬರ್ 7 ಪಾಪರ್ ರಾಷ್ಟ್ರ: ಘಾನಾ
ಆರ್ಥಿಕವಾಗಿ ಅದ್ಭುತವಾಗಿ ಬೆಳೆಯುತ್ತಿದ್ದ ರಾಷ್ಟ್ರ ಅಂದ್ರೆ ಘಾನ ಆಗಿತ್ತು. ಆದ್ರೆ ಇಂದು ಆರ್ಥಿಕವಾಗಿ ಪಾಪರ್ ಆಗೋ ಹಂತಕ್ಕೆ ತಲುಪಿದೆ. ಕಾರಣ ಈ ದೇಶದ ನಾಯಕರು ಮಾಡಿರುವ ಸಾಲದ ಹೊರೆ.
ಇಲ್ಲಿಯ ಕರೆನ್ಸಿಯಾದ ಸೆಡಿ (Cedi ) ಕಾಲು ಭಾಗದಷ್ಟು ಮೌಲ್ಯ ಕಳ್ಕೊಂಡಿದೆ. ಘಾನಾ ತನ್ನ ತೆರಿಗೆ ಆದಾಯವನ್ನು ಸಾಲದ ಬಡ್ಡಿ ತೀರಿಸಲೆಂದೇ ಖರ್ಚು ಮಾಡ್ತಿದೆ. ಆರ್ಥಿಕ ಸಂಕಷ್ಟದಿಂದ ಇಲ್ಲಿ ಭ್ರಷ್ಟಾಚಾರ,
ಅಪರಾಧ, ಬಡತನ ಮಿತಿಮೀರಿದೆ.
ನಂಬರ್ 6 ಪಾಪರ್ ರಾಷ್ಟ್ರ: ಈಜಿಪ್ಟ್
ಭಯಾನಕ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಈಜಿಪ್ಟ್ ಆರನೇ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಚಿನ್ನದ ನಾಗರೀಕತೆಗೆ ಹೆಸರಾಗಿದ್ದ ಈಜಿಪ್ಟ್ಗೆ ಇಂದು ವಿಶ್ವದ ಇತರ ರಾಷ್ಟ್ರಗಳ ಮುಂದೆ
ಭಿಕ್ಷೆ ಬೇಡೋ ಪರಿಸ್ಥಿತಿ ಎದುರಾಗಿದೆ. ಈ ದೇಶದ ಸಾಲದ ಹೊರೆ 100 ಬಿಲಿಯನ್ ಡಾಲರ್ ಗೆ ಏರಿದೆ. ಆಹಾರ ಪದಾರ್ಥಗಳ ಕೊರತೆ ವಿಪರೀತ ಹೆಚ್ಚಿದೆ. ಹಾಗಾಗಿ ಬಡವರು ಅನ್ನ ಇಲ್ಲದೆ ಒದ್ದಾಡುತ್ತಿದ್ದಾರೆ.
ನಂಬರ್ 5 ಪಾಪರ್ ರಾಷ್ಟ್ರ : ಕೀನ್ಯಾ
ಕೀನ್ಯಾ, ಸದ್ಯದಲ್ಲೇ ಸಾಲದಿಂದಾಗಿ ಪಾಪರಾಗಲಿರುವ ಆಫ್ರೀಕನ್ ದೇಶ. ಇದರ ಸಾಲದ ಹೊರೆ 71 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. 2013ರಲ್ಲಿ ಇದರ ಸಾಲದ ಹೊರೆ ಬರೀ 16 ಬಿಲಿಯನ್ ಡಾಲರ್ ಇತ್ತು.
2 ವರ್ಷಗಳಲ್ಲಿ ರಾಷ್ಟ್ರದ ಮೀಸಲು ನಿಧಿ ಶೇಕಡಾ 24ರಷ್ಟು ಕುಸಿದಿದೆ. ಅರ್ಥಿಕ ಸಂಕಷ್ಟದಿಂದ ಜನರಿಗೆ ಸಂಬಳ ಸಿಗುತ್ತಿಲ್ಲ. ಜನರಲ್ಲಿ ಆಹಾರ ಪದಾರ್ಥ ಕೊಳ್ಳಲೂ ಹಣ ಇಲ್ಲ.
ನಂಬರ್ 4 ಪಾಪರ್ ರಾಷ್ಟ್ರ : ಇಥಿಯೋಪಿಯಾ
ಬೀದಿಗೆ ಬೀಳಲಿರುವ ವಿಶ್ವದ ಟಾಪ್ 10 ರಾಷ್ಟ್ರಗಳ ಪೈಕಿ ಇಥಿಯೋಪಿಯ 4ನೇ ಸ್ಥಾನದಲ್ಲಿದೆ. ಆಂತರಿಕ ಕಲಹ ಹಾಗೂ ಕೋವಿಡ್ 19ರ ಆರ್ಥಿಕ ಬಿಕ್ಕಟ್ಟಿನಿಂದ ಈ ದೇಶ ಈಗ ದಿವಾಳಿಯ ಅಂಚಿನಲ್ಲಿದೆ.
ನಾಗರೀಕ ಯುದ್ಧದಿಂದ ಈ ದೇಶ 20 ಬಿಲಿಯನ್ ಡಾಲರ್ ಕಳೆದುಕೊಂಡಿದೆ. ಈಗಾಗಲೇ ಜನ ಹಸಿವಿನಿಂದ ನರಳುತ್ತಿದ್ದಾರೆ. ಇಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲದಿದ್ದರೆ ಇಥಿಯೋಪಿಯಾ ದಿವಾಳಿ ಆಗುವುದರಲ್ಲಿ
ಅನುಮಾನವೇ ಇಲ್ಲ.
ನಂಬರ್ 3 ಪಾಪರ್ ರಾಷ್ಟ್ರ: ಎಲ್ -ಸಾಲ್ವಡಾರ್
ಬಿಟ್ ಕಾಯಿನ್ ಅನ್ನು ಕಾನೂನು ಬದ್ಧ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಲ್ -ಸಾಲ್ವಡಾರ್. ಆದ್ರೆ ಈಗ ಈ ರಾಷ್ಟ್ರ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಭಯಾನಕ ಸಾಲದ ಹೊರೆಯಿಂದ ಸರ್ಕಾರದ
ಬಳಿ ಖರ್ಚು ಮಾಡಲು ಹಣವೇ ಇಲ್ಲದಂತಾಗಿದೆ, ಆಮದಿನ ಕೊರತೆ, ವಿಪರೀತ ತೆರಿಗೆ, ಆಹಾರ ಪದಾರ್ಥ ಬೆಲೆ ಏರಿಕೆಯಿಂದ ಜನರ ಬದುಕು ದುರ್ಬರವಾಗಿದೆ.
ನಂಬರ್ 2 ಪಾಪರ್ ರಾಷ್ಟ್ರ: ಪಾಕಿಸ್ತಾನ
ದಿವಾಳಿಯಾಗುವ ರಾಷ್ಟ್ರಗಳ ಪೈಕಿ ಪಾಕಿಸ್ತಾನ 2ನೇ ಸ್ಥಾನದಲ್ಲಿದೆ. ಇದರ ಸಾಲದ ಹೊರೆ 123 ಬಿಲಿಯನ್ ಡಾಲರ್ ಆಗಿದೆ. ಇದು ಈ ರಾಷ್ಟ್ರದ ಇತಿಹಾಸದಲ್ಲೇ ಅತೀ ಹೆಚ್ಚಿನ ಸಾಲವಾಗಿದೆ.
ರಾಷ್ಟ್ರೀಯ ಮೀಸಲು ನಿಧಿ ಶೂನ್ಯಕ್ಕಿಳಿದಿದೆ. ರಾಜಕೀಯ ಬಿಕ್ಕಟ್ಟು, ಉಗ್ರವಾದ ಹಾಗೂ ಭ್ರಷ್ಟಾಚಾರದಿಂದ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಪಾಕ್ ಸರ್ಕಾರ ತನ್ನ ಆದಾಯದ ಶೇ.40% ರಷ್ಟನ್ನು
ಬಡ್ಡಿ ಕಟ್ಟಲು ಖರ್ಚು ಮಾಡ್ತಿದೆ ಕೃಷಿ ಇದರ ಬೆನ್ನೆಲುಬಾಗಿದ್ದರೂ, ಆರ್ಥಿಕತೆಯಲ್ಲಿ ಮಾತ್ರ ಹಿಂದುಳಿದು ಬಿಟ್ಟಿದೆ.

ನಂಬರ್ 1 ಪಾಪರ್ ರಾಷ್ಟ್ರ: ಬೆಲಾರಸ್
ದಿವಾಳಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ 1ನೇ ಸ್ಥಾನದಲ್ಲಿದೆ ಬೆಲಾರಸ್. ಇಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ರಷ್ಯಾ- ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಬೆಂಬಲ ಕೊಟ್ಟ ಬೆಲಾರಸ್ ಮೇಲೆ ವಿಶ್ವ ಹಣಕಾಸು
ಸಂಸ್ಥೆ ಇದರ ಮೇಲೆ ನಿರ್ಭಂಧ ಹೇರಿದೆ. ಇದರ ಪರಿಣಾಮ ರಾಷ್ಟ್ರದ ಆಮದು ಹಾಗೂ ರಫ್ತಿನ ಮೇಲೆ ಬಿದ್ದಿದೆ. ದಿನೇ ದಿನೇ ಸಾಲದ ಹೊರೆ ಹೆಚ್ಚಿರುವುದರಿಂದ ಬೆಲಾರಸ್ ದಿವಾಳಿ ಅಂಚಿನಲ್ಲಿದೆ.
ಒಟ್ಟಾರೆ ಈ ರಾಷ್ಟ್ರಗಳ ಪ್ರಸ್ತುತ ಪರಿಸ್ಥಿತಿಯಿಂದ ತಿಳಿದು ಬರುವ ಪಾಠವೇನಂದ್ರ ಭ್ರಷ್ಟಾಚಾರ ಹಾಗೂ ಯುದ್ಧ ಎಂಥಾ ದೇಶವನ್ನೂ ಬೀದಿಗೆ ತರಬಲ್ಲದು.