ರೈತರಿಗೆ ʼ ಟ್ರಾನ್ಸ್ಫರ್ಮರ್ ಶಾಕ್ʼ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ; ಕಂಗಾಲಾದ ರೈತರು..!

Bengaluru: ರೈತರ ಪಂಪ್ ಸೆಟ್ಗಳಿಗೆ (Pump Set) ಟ್ರಾನ್ಸ್ಫರ್ಮರ್ ಮತ್ತು ಅದಕ್ಕೆ ಬೇಕಾದ ಮೂಲ (Transformer Shock – Congress Govt) ಸೌಲಭ್ಯ ಒದಗಿಸುವ ಯೋಜನೆಯನ್ನು ರದ್ದು

ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ರೈತರಿಗೆ ʼ ಟ್ರಾನ್ಸ್ಫರ್ಮರ್ ಶಾಕ್ʼ ನೀಡಿದ್ದು, ಇದೀಗ ರಾಜ್ಯದ ರೈತವರ್ಗ ಕಂಗಾಲಾಗಿದೆ.

ಈ ಯೋಜನೆ ರದ್ದುಗೊಂಡಿರುವ ಹಿನ್ನಲೆಯಲ್ಲಿ ರೈತರು ಸ್ವತಃ ಖರ್ಚಿನಲ್ಲಿ ಟ್ರಾನ್ಸ್ಫರ್ಮರ್ (Transformer) ಹಾಕಿಸಿಕೊಂಡು ವಿದ್ಯುತ್ ಸಂಪರ್ಕ ಪಡೆಯಬೇಕು. ಇದಕ್ಕಾಗಿ ರೈತರು ಲಕ್ಷಾಂತರ

ರೂಪಾಯಿ ನೀಡಬೇಕಾಗುತ್ತದೆ. ಈಗಾಗಲೇ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಯೋಜನೆ ರದ್ದು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಂ.ವಿನೋದ್ ಕುಮಾರ (D M Vinod Kumar) ಕಳೆದ ಅಕ್ಟೋಬರ್ 7 ರಂದು ಈ ಯೋಜನೆಯನ್ನು ರದ್ದು ಮಾಡಿರುವ ಕುರಿತು ಅಧಿಕೃತ

ಆದೇಶ ಹೊರಡಿಸಿದ್ದಾರೆ. ಸೆಪ್ಟಂಬರ್ (September) 22ರ ನಂತರ ರಾಜ್ಯದಲ್ಲಿ ನೋಂದಣಿ ಆಗುವ ಯಾವುದೇ ನೀರಾವರಿ ಪಂಪ್ ಸೆಟ್ಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಟ್ರಾನ್ಸ್ಫರ್ಮರ್

ಮತ್ತು ಮೂಲ ಸೌಲಭ್ಯ ಪಡೆಯಬೇಕು (Transformer Shock – Congress Govt) ಎಂದು ಆದೇಶಿಸಲಾಗಿದೆ.

ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ನಡೆ ವ್ಯಾಪಕ ಟೀಕೆಗೆ ಗ್ರಾಸವಾಗಿದೆ. ಇಷ್ಟು ದಿನಗಳ ಕಾಲ ರೈತರಿಗೆ ನೋಂದಣಿ ಶುಲ್ಕ 20 ಸಾವಿರ ರೂಪಾಯಿ ಪಾವತಿಸುವುದೇ ಕಷ್ಟವಾಗಿತ್ತು.

ಇದೀಗ ಸರ್ಕಾರದ ಹೊಸ ನೀತಿಯಿಂದ ವಿದ್ಯುತ್ ಸಂಪರ್ಕ ಪಡೆಯಲು ರೈತರು ಲಕ್ಷಂತರ ರೂಪಾಯಿ ಖರ್ಚು ಮಾಡಬೇಕಿದೆ.

ಏನಿದು ಯೋಜನೆ : ಈ ಯೋಜನೆಯಡಿಯಲಿ ರೈತರು ಸುಮಾರು 20 ಸಾವಿರ ರೂಪಾಯಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ಪಡೆದರೆ, ವಿದ್ಯುತ್ ಕಂಪನಿಗಳು

ನೇರವಾಗಿ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಸರ್ಕಾರ ಈ ಯೋಜನೆಯನ್ನು ರದ್ದು ಮಾಡಿರುವುದರಿಂದ ರೈತರೇ ತಮ್ಮ ಸ್ವತಃ ಹಣದಲ್ಲೇ ವಿದ್ಯುತ್ ಕಂಬ ಮತ್ತು ತಂತಿ

ಹಾಕಿಕೊಳ್ಳಬೇಕಿದೆ. ಇದರೊಂದಿಗೆ ಲಕ್ಷಂತರ ರೂಪಾಯಿ ಖರ್ಚು ಮಾಡಿ ಟ್ರಾನ್ಸ್ಫಾರ್ಮರ್ ಪಡೆಯಬೇಕಿದೆ.

ಇದನ್ನು ಓದಿ: ಝೀಕಾ ವೈರಸ್ ಭೀತಿ : ಮಕ್ಕಳು- ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು – ಆರೋಗ್ಯ ಸಚಿವ ಗುಂಡೂರಾವ್

Exit mobile version