ಬಿಜೆಪಿಯ ಎರಡು ಪಟ್ಟಿ ಬಿಡುಗಡೆ : ಕೆಲವೊಂದು ಅಚ್ಚರಿ, ಮತ್ತೆ ಕೆಲವರಿಗೆ ಶಾಕ್‌, ಇನ್ನು ಕೆಲವರಿಗೆ ಅವಮಾನ

Bangalore : ಬಿಜೆಪಿ ರಾಜ್ಯ (State BJP) ವಿಧಾನಸಭೆಗೆ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ದೆಹಲಿಯಲ್ಲಿ ಪ್ರಕಟಿಸಿದ್ದು, ಒಟ್ಟು ಮೊದಲ ಪಟ್ಟಿಯಲ್ಲಿ 189 ಹಾಗೂ ಎರಡನೇ ಪಟ್ಟಿಯಲ್ಲಿ 23 ಒಟ್ಟು 212 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಲ ಹಾಲಿ (Two list of BJP released) ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಇನ್ನೊಂದೆಡೆ ಎಂಟು ಮಹಿಳೆಯರಿಗೆ ಟಿಕೆಟ್‌ನೀಡಲಾಗಿದೆ. ಈ ಪಟ್ಟಿಯಲ್ಲಿ ಕೆಲವೊಂದು ಅಚ್ಚರಿ, ಮತ್ತೆ ಕೆಲವರಿಗೆ ಶಾಕ್‌,

ಇನ್ನು ಕೆಲವರಿಗೆ ಅವಮಾನ ಕೂಡ ಆಗಿದೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಮೂವರು ಹಾಲಿ ಶಾಸಕಿಯರು ಮರಳಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೂಪಾಲಿ ಸಂತೋಷ್‌ ನಾಯ್ಕ್‌ (Santosh Naik) ಹಾಲಿ ಶಾಸಕಿರು.

ಈ ಬಾರಿ ಸವದತ್ತಿ – ರತ್ನಾ ವಿಶ್ವನಾಥ್‌ ಮಾಮನಿ, ಸಂಡೂರು – ಶಿಲ್ಪಾ ರಾಘವೇಂದ್ರ, ನಾಗಮಂಗಲ – ಸುಧಾ ಶಿವರಾಮೇಗೌಡ, ಪುತ್ತೂರು – ಆಶಾ ತಿಮ್ಮಪ್ಪ ಗೌಡ,

ಸುಳ್ಯ – ಭಾಗೀರಥಿ ಮುರುಳ್ಯ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ (Two list of BJP released) ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.

ಇದನ್ನೂ ಓದಿ: https://vijayatimes.com/tweet-from-congress-to-bjp/

ಇದರಲ್ಲಿ 5 ಮಂದಿ ವಕೀಲರು, 9 ಮಂದಿ ವೈದ್ಯರು, ಒಬ್ಬರು ನಿವೃತ್ತ ಐಎಎಸ್‌, ಒಬ್ಬರು ಐಪಿಎಸ್‌ ಅಧಿಕಾರಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಇನ್ನು ಎರಡನೇ ಪಟ್ಟಿಯನ್ನು ನೋಡುವುದಾದದರೆ ಐದು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಇವರಲ್ಲಿ ಪ್ರಮುಖರೆಂದರೆ ಬೈಂದೂರಿನ ಸುಕುಮಾರ್‌ ಶೆಟ್ಟಿ, ಚಿಕ್ಕಮಗಳೂರಿನ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ,

ಹಾವೇರಿಯಲ್ಲಿ ಮೂರು ಬಾರಿ ಶಾಸಕರಾರಿದ್ದ ನೆಹರು ಓಲೇಕರ್‌, ಕಲಘಟಗಿ ಹಾಲಿ ಶಾಸಕ ನಿಂಬಣ್ಣವರಿಗೆ ಟಿಕೆಟ್ ಮಿಸ್ ಆಗಿದೆ. ಸೋಮಣ್ಣ ಮಗನಿಗೂ ಟಿಕೆಟ್‌ ಇಲ್ಲ :

ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್‌ ಘೊಷಣೆಯಾಗಿಲ್ಲ.

ಆ ಕ್ಷೇತ್ರಕ್ಕೆ ಎಸ್ಡಿ ದಿಲೀಪ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಎಸ್‌ವೈ ಸಂಬಂಧಿ ಎನ್‌.ಆರ್‌.ಸಂತೋಷ್‌ ಅವರಿಗೂ ಟಿಕೆಟ್ ನೀಡಿಲ್ಲ.

ಇವರು ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಿಟಿ ದೇವೇಗೌಡರ (GT Deve Gowda) ಅಳಿಯನಿಗೆ ಟಿಕೆಟ್‌:

ಅಚ್ಚರಿ ಎಂಬಂತೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರಗೌಡ ಅವರಿಗೆ ಶಿಡ್ಲಘಟ್ಟ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮನವಿಯ ಮೇರೆಗೆ ಟಿಕೆಟ್‌ ಘೋಷಣೆಯಾಗಿದೆ ಎನ್ನಲಾಗಿದೆ..

224 ಕ್ಷೇತ್ರಗಳ ಪೈಕಿ 212 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನು 12 ಕ್ಷೇತ್ರಗಳನ್ನು (Two list of BJP released) ಉಳಿಸಿಕೊಂಡಿದ್ದು,

ಟಿಕೆಟ್‌ ಘೋಷಣೆಯಾಗದಿರುವ ಕ್ಷೇತ್ರಗಳೆಂದರೆ ಸೇಡಂ, ಮಹಾದೇವಪುರ, ಕೃಷ್ಣ ರಾಜ, ಹಗರಿಬೊಮ್ಮನಹಳ್ಳಿ,

ಮಾನ್ವಿ, ನಾಗಠಾಣ, ಶಿವಮೊಗ್ಗ ನಗರ, ಕೊಪ್ಪಳ, ರೋಣ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಹೆಬ್ಬಾಳ, ಗೋವಿಂದ ರಾಜನಗರ,

ಇದನ್ನೂ ಓದಿ: https://vijayatimes.com/puc-results-announcement/


ಇನ್ನು ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ದ ಹಾಲಿ ಸಚಿವ ಮತ್ತು ಪ್ರಭಾವಿ ಲಿಂಗಾಯತ ಮುಖಂಡ ವಿ. ಸೋಮಣ್ಣರನ್ನು ವರುಣಾ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿಸಿದೆ.

ಅದೇ ರೀತಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ದ ಆರ್‌. ಅಶೋಕರನ್ನು ಕನಕಪುರ ಮತ್ತು ಪದ್ಮನಾಭನಗರ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿಸಿದೆ.

ಸಿದ್ದು-ಡಿಕೆ ವಿರುದ್ದ ಬಿಜೆಪಿ ಜಾತಿ ಅಸ್ತ್ರ ಪ್ರಯೋಗಿಸಿದ್ದು, ಪ್ರಬಲ ಹೋರಾಟ ನೀಡುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಇನ್ನೊಂದೆಡೆ ಕರಾವಳಿಯ ಬಹುತೇಖ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ನೀಡಲಾಗಿದೆ.

ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್‌ ?


ದೇವರಹಿಪ್ಪರಗಿ – ಸೋಮನಗೌಡ ಪಾಟೀಲ್‌
ಬಸವನ ಬಾಗೇವಾಡಿ – ಎಸ್‌ಕೆ ಬೆಳ್ಳುಬ್ಬಿ
ಇಂಡಿ – ಕಾಸಾಗೌಡ ಬಿರಾದಾರ್‌
ಗುರುಮಿಟ್‌ಕಲ್‌ – ಲಲಿತಾ ಆನಾಪುರ
ಬೀದರ್‌ -ಈಶ್ವರ್‌ ಸಿಂಗ್‌ ಠಾಕೂರ್‌


ಬಾಲ್ಕಿ -ಪ್ರಕಾಶ್‌ ಖಂಡ್ರೆ
ಗಂಗಾವತಿ – ಪರಣ್ಣ ಮುನ್ನಾವಾಲಿ
ಕಲಗಟಗಿ – ನಾಗರಾಜ್‌ ಚಬ್ಬಿ
ಹಾನಗಲ್‌ – ಶಿವರಾಜ್‌ ಸಜ್ಜನರ್‌
ಹಾವೇರಿ – ಗವಿಸಿದ್ಧಪ್ಪ ದ್ಯಾಮಣ್ಣನವರ್‌


ಹರಪನಹಳ್ಳಿ – ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ – ಲೋಕಿಕೆರೆ ನಾಗರಾಜ್‌
ದಾವಣಗೆರೆ ದಕ್ಷೀನ -ಅಜೇಯ್‌ ಕುಮಾರ್‌
ಮಾಯಕೊಂಡ – ಬಸವರಾಜ್‌ ನಾಯ್ಕ್‌
ಚನ್ನಗಿರಿ -ಶಿವಕುಮಾರ್‌
ಬೈಂದೂರ್‌ – ಗುರುರಾಜ್‌ ಗಂಟಿಹೊಳೆ

ಇದನ್ನೂ ಓದಿ : https://vijayatimes.com/%e2%82%b9-40000-fine-for-violation/


ಮೂಡಿಗೆರೆ -ದೀಪಕ್‌ ದೊಡ್ಡಯ್ಯ
ಗುಬ್ಬಿ -ದಿಲೀಪ್‌ ಕುಮಾರ್
ಶಿಡ್ಲಘಟ್ಟ – ರಾಮಚಂದ್ರಗೌಡ
ಕೆಜಿಎಫ್‌ – ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ -ಚಿದಾನಂದ
ಅರಸೀಕೆರೆ -ಜಿವಿ ಬಸವರಾಜ್‌
ಎಚ್‌ಡಿ ಕೋಟೆ – ಕೃಷ್ಣನಾಯ್ಕ್‌

Exit mobile version