ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ

New Delhi: ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ. ಎಲ್ಲರಿಗೂ ನಾಗರಿಕ ಕಾನೂನುಗಳು ಪುರುಷ ಮತ್ತು ಮಹಿಳೆಯ ನಡುವಿನ ವಿವಾಹಗಳನ್ನು ಮಾತ್ರ ಒಳಗೊಂಡಿರುತ್ತದೆ, ನಾಗರಿಕ ಕಾನೂನುಗಳ ವ್ಯಾಪ್ತಿಯಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ. ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಗೂ ಸಲಿಂಗ ವಿವಾಹ ಒಳಪಡುವುದಿಲ್ಲ ಎಂದು ರಾಷ್ಟ್ರೀಯ ಕಾನೂನು ಆಯೋಗದ ವರದಿ ಹೇಳಿದೆ.

ಏಕರೂಪ ನಾಗರಿಕ ಸಂಹಿತೆ (UCC) ಕುರಿತ ಭಾರತದ ಕಾನೂನು ಆಯೋಗದ ವರದಿಯು ಸಲಿಂಗ ವಿವಾಹವನ್ನು ಹೊರತುಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಒಂದೇ ಸಿವಿಲ್ (Civil) ಕಾನೂನುಗಳು ಪುರುಷ ಮತ್ತು ಮಹಿಳೆಯ ನಡುವಿನ ವಿವಾಹಗಳನ್ನು ಒಳಗೊಂಡಿರುತ್ತದೆ, ಆದರೆ ಸಲಿಂಗ ವಿವಾಹಗಳು ಯುಸಿಸಿ ವ್ಯಾಪ್ತಿಗೆ ಬರುವುದಿಲ್ಲ. ಏಕರೂಪ ನಾಗರಿಕ ಸಂಹಿತೆಯು ಜಾತಿ, ಧರ್ಮ ಅಥವಾ ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ತೆಗೆದುಕೊಳ್ಳಲು ಒಂದೇ ರೀತಿಯ ನಾಗರಿಕ ಕಾನೂನುಗಳನ್ನು ರೂಪಿಸುವ ಪ್ರಸ್ತಾಪವಾಗಿದೆ. ಇದು ಅಸ್ತಿತ್ವದಲ್ಲಿರುವ ಧರ್ಮ ಆಧಾರಿತ ವೈಯಕ್ತಿಕ ಕಾನೂನುಗಳನ್ನು ಬದಲಿಸುತ್ತದೆ.

ಅದೇ ರೀತಿ ಏಕರೂಪ ನಾಗರಿಕ ಸಂಹಿತೆಯು ಮದುವೆಗೆ ಸಂಬಂಧಿಸಿದ ಧರ್ಮಗಳ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನಿಯಂತ್ರಿಸುವುದಿಲ್ಲ. ಆದರೆ ಏಕರೂಪದ ಕಾನೂನುಗಳು ವಿಚ್ಛೇದನ, ನಿರ್ವಹಣೆ, ಉತ್ತರಾಧಿಕಾರ ಇತ್ಯಾದಿ ಕಾನೂನುಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಹುಪತ್ನಿತ್ವ, ನಿಕಾಹ್ ಹಲಾಲಾ, ಏಕಪಕ್ಷೀಯ ವಿಚ್ಛೇದನ ಇತ್ಯಾದಿಗಳನ್ನು ವಿರೋಧಿಸುವ ಕಾನೂನು ಸಮಿತಿಯ ಸಲಹೆಗಳನ್ನು ವರದಿಯು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆರಂಭದಲ್ಲಿ ಸುಪ್ರೀಂಕೋರ್ಟ್ (Supreme Court) 18 ಅರ್ಜಿಗಳನ್ನು ಆಲಿಸುವ ವೇಳೆ, ಕಾನೂನು ಸಮಿತಿಯ ವರದಿಯು ಬಂದಿದ್ದು, ಕಾನೂನುಗಳಿಂದ ಮಾನ್ಯತೆ ಪಡೆದ ಸಂಸ್ಥೆಯ ರೂಪದಲ್ಲಿ ತಮ್ಮ ಸಂಬಂಧವನ್ನು ಕಾನೂನುಬದ್ಧವಾಗಿ ನೋಂದಾಯಿಸಲು ನಿಯಮಾವಳಿಗಳನ್ನು ಕೋರಿ ಸಲಿಂಗ ದಂಪತಿಗಳು ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದರು.

Exit mobile version